ಈ ಬಾರಿಯೂ ಬೇಸಿಗೆ ಭತ್ತ ಬೆಳೆವಂತಿಲ್ಲ

Team Udayavani, Jan 10, 2017, 12:12 PM IST

dvg2.jpg

ದಾವಣಗೆರೆ: ಕಳೆದ ಮೂರು ವರ್ಷದಲ್ಲಿ ಒಂದೇ ಒಂದು ಬಾರಿ ಬೇಸಿಗೆ ಭತ್ತ ಬೆಳೆದಿರುವ ಭದ್ರಾ ಅಚ್ಚುಕಟ್ಟುದಾರರು ಈ ಬಾರಿಯೂ ಬೇಸಿಗೆ ಭತ್ತಕ್ಕೆ ಎಳ್ಳುನೀರು ಬಿಡುವಂತಾಗಿದೆ!. ಅಚ್ಚುಕಟ್ಟಿನ ಮೂಲಾಧಾರ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಸದ್ಯ ಲಭ್ಯ ಇರುವ ನೀರಿನ ಪ್ರಮಾಣ 16 ಟಿಎಂಸಿ ಅಡಿ (ಜ.2ರಂತೆ). 

ಕುಡಿಯುವ ನೀರಿಗೆ 7 ಟಿಎಂಸಿ ಅಡಿ ಮೀಸಲು ಹೊರತು ಪಡಿಸಿದರೆ ಬೆಳೆಗಳಿಗೆ ಸಿಗುವ ನೀರಿನ ಪ್ರಮಾಣ 9.095 ಟಿಎಂಸಿ ಅಡಿ. ಅದು ಏನಿದ್ದರೂ ಧೀರ್ಘಾವಧಿಯ ತೋಟದ ಬೆಳೆಗಳಿಗೆ ಮಾತ್ರ. ಭತ್ತ ಇತರೆ ಬೆಳೆಗಳಿಗೆ ನೀರು ಇಲ್ಲ. ಅಲ್ಲಿಗೆ ಈ ಬೇಸಿಗೆ ಹಂಗಾಮಿನಲ್ಲೂ ರೈತರು ಭತ್ತದತ್ತ ಚಿತ್ತಹರಿಸುವಂತಿಲ್ಲ. 

ಏನಾದರೂ ಆಗಲಿ ಭತ್ತ ನಾಟಿ ಮಾಡೋಣ ಎಂದರೆ ಕಾಡಾ ಸಮಿತಿ ನಿರ್ಧಾರದಂತೆ ನಾಲೆಯಲ್ಲಿ ನೀರು ಹರಿಯುವುದೇ 30 ದಿನ. ಭತ್ತಕ್ಕೆ ಏನಿಲ್ಲವೆಂದರೂ ಕನಿಷ್ಠ 110 ದಿನ ನೀರು ಬೇಕೇ ಬೇಕು. 30 ದಿನ ನೀರು ಸಿಕ್ಕರೆ ಬಾಕಿ 80 ದಿನಕ್ಕೆ ಬೇಕಾಗುವ ನೀರು ಸರಿದೂಗಿಸುವುದು ಕಷ್ಟ. ಈಗಿನ ವಾತಾವರಣದಲ್ಲಿ ಅಪ್ಪಿತಪ್ಪಿಯೂ ಕೊಳವೆಬಾವಿ ನೆಚ್ಚಿಕೊಳ್ಳುವಂತಿಲ್ಲ.

ಇಂಥಹ ಸಂದಿಗ್ಧತೆಯಿಂದಾಗಿ ಅಚ್ಚುಕಟ್ಟುದಾರರು ಮತ್ತೂಮ್ಮೆ ಬೇಸಿಗೆ ಭತ್ತದ ಆಸೆ ಕೈ ಬಿಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಕಳೆದ 3 ವರ್ಷದಲ್ಲಿ ಅಚ್ಚುಕಟ್ಟುದಾರರು ಪಡೆದಿರುವುದು ಒಂದೇ ಒಂದು ಬೇಸಿಗೆ ಬೆಳೆ. ಒಂದು ಕಡೆ ಮಳೆಯ ಕೊರತೆಯಿಂದ ಬರ. ಇನ್ನೊಂದು ಕಡೆ ಜೀವನಾಡಿ ಭದ್ರಾ ಜಲಾಶಯದಲ್ಲಿ ನೀರಿಲ್ಲದ ಕಾರಣ ಬೆಳೆ ಬೆಳೆಯಲಾಗದ ದುಸ್ಥಿತಿ. 

ಹಾಗಾಗಿ ಅಚ್ಚುಕಟ್ಟಿನ ಸಾವಿರಾರು ರೈತರಿಗೆ ಬವಣೆ ತಪ್ಪಿಲ್ಲ. ಕಳೆದ ಬೇಸಿಗೆ ಹಂಗಾಮಿನ ಭತ್ತಕ್ಕೆ ಕೊಡುವಷ್ಟು ನೀರು ಜಲಾಶಯದಲ್ಲಿದೆ. ಹಾಗಾಗಿ ನೀರು ಹರಿಸಬೇಕು… ಎಂದು ಒತ್ತಾಯಿಸಿ ಜಿಲ್ಲೆಯ ರೈತರು ಮಲವಗೊಪ್ಪದ ಭದ್ರಾ ಕಾಡಾ ಕಚೇರಿ ಎದುರು ಹೋರಾಟ ನಡೆಸಿದ ನಂತರ ಸ್ವಯಂ ಕಾಡಾ ಅಧ್ಯಕ್ಷರೇ ನೀಡಿದ್ದ ಭರವಸೆಯಂತೆ ರೈತರು ಬಿತ್ತನೆ ಮಾಡಿದ್ದರು. ಆದರೆ, ನಾಲೆಯಲ್ಲಿ ನೀರು ಹರಿಯುವುದು ಸಮಸ್ಯೆಯಾಗಿ ಭತ್ತ ಕೈ ಸೇರಲೇ ಇಲ್ಲ. ನೀರಿನ ವಿಚಾರ ರಾಜಕೀಯ ಹೋರಾಟ, ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದ್ದು ಈಗ ಇತಿಹಾಸ. 

72,235 ಹೆಕ್ಟೇರ್‌ ಪ್ರದೇಶ: ದಾವಣಗೆರೆ ತಾಲೂಕಿನಲ್ಲಿ 26,931 ಹೆಕ್ಟೇರ್‌, ಹರಿಹರದಲ್ಲಿ 20,321, ಚನ್ನಗಿರಿಯಲ್ಲಿ 11,705, ಹೊನ್ನಾಳಿಯಲ್ಲಿ 10,371, ಹರಪನಹಳ್ಳಿಯಲ್ಲಿ 2,961 ಹೆಕ್ಟೇರ್‌ ಒಳಗೊಂಡಂತೆ ಜಿಲ್ಲೆಯಲ್ಲಿ 72,235 ಹೆಕ್ಟೇರ್‌ ಭದ್ರಾ ಅಚ್ಚುಕಟ್ಟು ಪ್ರದೇಶವಿದೆ. 440 ಕಿಲೋ ಮೀಟರ್‌ ಗಿಂತಲೂ ಹೆಚ್ಚಿನ ದೂರ ಮುಖ್ಯ ನಾಲೆ, ನೂರಾರು ಕಿಲೋ ಮೀಟರ್‌ ಉಪನಾಲೆ, ಹೊಲಗಾಲುವೆ ಇದೆ.

ಸದಾ ಅಭದ್ರತೆ: ಅಲಭ್ಯತೆ… ಅನಿಶ್ಚತತೆ… ಅಭದ್ರತೆ… ಇವು ಭದ್ರಾ ಅಚ್ಚುಕಟ್ಟುದಾರರು ಪ್ರತಿ ವರ್ಷ ಎದುರಿಸಬೇಕಾದ ಪರಿಸ್ಥಿತಿ. ಜಲಾಶಯ ನಿರ್ಮಾಣಗೊಂಡ ಬಳಿಕ ಭರ್ತಿಯಾಗಿದ್ದು ಒಂದರೆಡು ಬಾರಿ ಮಾತ್ರ. ಹಾಗಾಗಿ 6 ದಶಕಗಳ ನಂತರದಲ್ಲೂ ಭದ್ರಾ ನೀರು ಸದಾ ಅಲಭ್ಯತೆ. 

ಕಳೆದ ಬೇಸಿಗೆ ಹಂಗಾಮಿನ ಪ್ರಾರಂಭದಲ್ಲಿ 100 ದಿನ ನೀರು ಕೊಡಲಾಗುವುದು ಎಂಬ ಭರವಸೆ ನೆಚ್ಚಿದ ರೈತರು ಭತ್ತದ ಸಸಿ ಮಡಿ ಮಾಡಿಕೊಂಡಿದ್ದರು. ಮೊದಲೇ ಮಡಿ ಸಿದ್ಧಪಡಿಸಿಕೊಂಡಿದ್ದರು ನಾಟಿ ಮಾಡಿದ್ದರು. ಕೆಲ ದಿನಗಳ ಅಂತರದಲ್ಲಿ ಭತ್ತಕ್ಕೆ ನೀರು ಇಲ್ಲ ಎಂಬ ಘೋಷಣೆ ಹೊರ ಬಿದ್ದ ಪರಿಣಾಮ ರೈತರು ಎಲ್ಲ ಕಳೆದುಕೊಳ್ಳುವಂತಾಯಿತು. ಅಚ್ಚುಕಟ್ಟುದಾರರಿಗೆ ಸದಾ ಇಂಥಹ ಅನಿಶ್ಚತತೆ. 

ದಾವಣಗೆರೆ ತಾಲೂಕಿನ ಚಿತ್ತಾನಹಳ್ಳಿ, ಬಿ. ಕಲಪನಹಳ್ಳಿ, ಮಾಗಾನಹಳ್ಳಿ… ಮುಂತಾದ ಅಚ್ಚುಕಟ್ಟಿನ ಕೊನೆ ಭಾಗದ ನೂರಾರು ಹೆಕ್ಟೇರ್‌ ಪ್ರದೇಶಕ್ಕೆ ಈ ಕ್ಷಣಕ್ಕೂ ಸಮರ್ಪಕ ಪ್ರಮಾಣದಲ್ಲಿ ನೀರು ದೊರೆತಿಲ್ಲ ಎಂಬುದು ಆಶ್ಚರ್ಯವಾದರು ಸತ್ಯ. ಹಲ್ಲಿದ್ದರೆ ಕಡಲೆ ಇಲ್ಲ… ಕಡಲೆ ಇದ್ದರೆ ಹಲ್ಲಿಲ್ಲ… ಎನ್ನುವಂತೆ 182 ಅಡಿ ನೀರಿನ ಸಾಮರ್ಥ್ಯದ ಜಲಾಶಯ ಇದ್ದರೂ ದಾವಣಗೆರೆ ಜಿಲೆಯ 72,235 ಹೆಕ್ಟೇರ್‌ ಭದ್ರಾ ಅಚ್ಚುಕಟ್ಟುದಾರರ ಮೇಲೆ ಸದಾ ಅಭದ್ರತೆಯ ತೂಗುಕತ್ತಿ ನೇತಾಡುತ್ತಲೇ ಇರುತ್ತದೆ. 

* ರಾ.ರವಿಬಾಬು

ಟಾಪ್ ನ್ಯೂಸ್

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.