ಏಕರೂಪ ತೆರಿಗೆ ಪದ್ಧತಿ ಅನುಕೂಲ
Team Udayavani, Apr 14, 2017, 1:20 PM IST
ದಾವಣಗೆರೆ: ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಾರಿ ಒಂದು ದಿಟ್ಟ ನಿರ್ಧಾರ ಆಗಿದ್ದು, ಇದರಿಂದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಕೇಂದೀÅಯ ಅಬಕಾರಿ ಮತ್ತು ಸೇವಾ ತೆರಿಗೆ ಬೆಂಗಳೂರು ವಿಭಾಗದ ಆಯುಕ್ತ ಅಮಿತ್‌ಕುಮಾರ್ ಸಿನ್ಹ ಹೇಳಿದ್ದಾರೆ.
ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ ವಿಚಾರ ಸಂಕಿರಣದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ವೈವಿಧ್ಯತೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಏಕರೂಪ ತೆರಿಗೆ ಆಡಳಿತ ಒಂದು ದಿಟ್ಟ ನಿರ್ಧಾರವಾಗಿದೆ.
ಈ ಪದ್ಧತಿ ಜಾರಿಯಿಂದ ಜನತೆಗೆ ಅನೇಕ ಅನುಕೂಲಗಳು ಇವೆ. ಈ ನಿಟ್ಟಿನಲ್ಲಿ ತೆರಿಗೆದಾರರು ವಿವರವಾಗಿ ತಿಳಿದುಕೊಂಡು ಜಿಎಸ್‌ಟಿಗೆ ವರ್ಗಾವಣೆಗೊಳ್ಳುವ ಅವಶ್ಯಕತೆ ಇದೆ ಎಂದರು. ದೇಶದ ಪರೋಕ್ಷ ತೆರಿಗೆ ಸುಧಾರಣೆಯಲ್ಲಿ ಜಿಎಸ್‌ಟಿ ಒಂದು ಪ್ರಮುಖ ಹೆಜ್ಜೆಯಾಗಿದೆ.
7 ರೀತಿಯ ಕೇಂದ್ರ ಮತ್ತು 8 ರೀತಿಯ ರಾಜ್ಯ ತೆರಿಗೆಗಳು ಜಿಎಸ್‌ಟಿಗೊಳಪಟ್ಟಿದ್ದು, ಬಹುಸಂಖ್ಯಾತ ತೆರಿಗೆಗಳ ಕಡಿತ, ವಿಳಂಬವಿಲ್ಲದೆ, ಪೇಪರ್ ಕೆಲಸವಿಲ್ಲದೆ ಏಕರೂಪದ ಜಿಎಸ್‌ಟಿ ನೆಟ್ ವರ್ಕ್‌ನಲ್ಲಿ ಕೆಲಸ ಸರಾಗವಾಗಿ ಆಗುವ ಮೂಲಕ ತೆರಿಗೆದಾರರಿಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದರು.
ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ದಾವಣಗೆರೆ ವಲಯದ ಆಯುಕ್ತ ನಾರಾಯಣ ಸ್ವಾಮಿ ಮಾತನಾಡಿ, ಜಿಎಸ್‌ಟಿ ಒಂದು ಐತಿಹಾಸಿಕ ಆರ್ಥಿಕ ಏಕೀಕರಣವಾಗಿದೆ. ತೆರಿಗೆದಾರರು ಜಿಎಸ್‌ಟಿ ಅರ್ಥೈಸಿಕೊಂಡು ಪೂರ್ವತಯಾರಿ ನಡೆಸಿ ಜಾರಿಗೊಳಿಸಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಜಿಎಸ್‌ಟಿ ಬಗ್ಗೆ ವಿವರವಾಗಿ ತಿಳಿದ ನಂತರ ಎಲ್ಲವೂ ಸುಲಭವಾಗುತ್ತದೆ. ಪಾರದರ್ಶಕತೆ, ತೆರಿಗೆ ಸುಧಾರಣೆ ಸೇರಿದಂತೆ ಅನೇಕ ಅನುಕೂಲಗಳು ಇವೆ ಎಂದರು. ಆಡಳಿತದಲ್ಲಿ ಪಾರದರ್ಶಕತೆ, ಸರಳ ಮತ್ತು ಸುಲಭ ತೆರಿಗೆ ವ್ಯವಸ್ಥೆ ಇದಾಗಿದೆ. ತೆರಿಗೆ ವಂಚನೆ ಕಡಿತ, ಎಲ್ಲರೂ ತೆರಿಗೆ ವ್ಯವಸ್ಥೆಗೆ ಒಳಪಡುವುದುದರಿಂದ ರಾಜ್ಯಗಳ ರಾಜಸ್ವ ಹೆಚ್ಚಿ, ಉದ್ಯೋಗಾವಕಾಶ ಹೆಚ್ಚಳ ಆಗುವುದು.
ತೆರಿಗೆ ಕಡಿತಗೊಳಿಸುವ ಸಾಧ್ಯತೆಯೂ ಇದೆ. 20 ಲಕ್ಷಗಳ ಕ್ರೋಢೀಕೃತ ವ್ಯವಹಾರಕ್ಕೆ ಜಿಎಸ್‌ಟಿ ವಿನಾಯಿತಿ ಇದ್ದು, 1.5 ಕೋಟಿಗಿಂತ ಹೆಚ್ಚಿರುವ ವ್ಯವಹಾರಗಳಲ್ಲಿ 50:50 ಅನುಪಾತದಲ್ಲಿ ರಾಜ್ಯ ಮತ್ತು ರಾಷ್ಟ್ರದ ಪಾಲು ಇರುತ್ತದೆ. ಮದ್ಯ, ಪೆಟ್ರೋಲಿಯಂ ಗಳಂತಹ ಕೆಲ ಸರಕು ಹೊರತುಪಡಿಸಿ ಸರಕು ಮತ್ತು ಸೇವೆಗಳ ಬಹುಪಾಲು ಎಲ್ಲ ರೀತಿಯ ಪೂರೈಕೆಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು.
ಒಂದು ಜಿಎಸ್‌ಟಿ ಯಲ್ಲಿ ಮೂರು ರೀತಿಯ ತೆರಿಗೆ ಒಳಗೊಂಡಿರುತ್ತದೆ. ತೆರಿಗೆದಾರರು ಆದಷ್ಟು ಬೇಗ ಜಿಎಸ್ ಟಿಗೆ ವರ್ಗಾವಣೆ ಮಾಡಿಕೊಂಡರೆ ಒಳಿತು ಎಂದು ಹೇಳಿದರು. ದಾವಣಗೆರೆ ವಲಯದ ಸಹಾಯಕ ಆಯುಕ್ತ ದ್ಯಾಮಪ್ಪ ಐರಣಿ, ಗ್ರಾಸಿಮ್ ಇಂಡಸ್ಟ್ರಿಯ ಉಪಾಧ್ಯಕ್ಷ ಮಹಾವೀರ ಜೈನ್, ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಕಿರಣ್ ಪಾಟಿಲ್, ಸುದೀಂದ್ರ ರಾವ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honnali: ಮಹಿಳೆಯನ್ನು ತವರಿನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡ ಹೋದ ಪತಿ, ಸಂಬಂಧಿಕರು
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡ ʼದಾಸʼ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.