ಜಿಲ್ಲೆಗೆ ಕೊರೊನಾ ಪುನರ್ ಅಪ್ಪಳಿಸಿ ಇಂದಿಗೆ ವರ್ಷ
Team Udayavani, Apr 29, 2021, 5:59 PM IST
ದಾವಣಗೆರೆ: ಕೋವಿಡ್ ಎಂಬ ಮಹಾಮಾರಿ ಜಿಲ್ಲೆಗೆಬಲವಾಗಿ ಪುನರ್ ಅಪ್ಪಳಿಸಿ ಏ.29ಕ್ಕೆ ಬರೋಬರಿಒಂದು ವರ್ಷ!.ಒಂದು ವರ್ಷದ ನಂತರವೂ ಈಗಲೂ ಪರಿಸ್ಥಿತಿಯೇನು ಸುಧಾರಣೆ ಕಂಡಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಇನ್ನೂ ಬಿಗಡಾಯಿಸುತ್ತಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ದಾವಣಗೆರೆಗೆ ಫ್ರಾನ್ಸ್‌ನಿಂದ ಹಿಂತಿರುಗಿದ್ದ ವೈದ್ಯಕೀಯವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿತ್ತು.ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರಗುಣಮುಖವಾಗಿ 28 ದಿನಗಳ ಯಾವುದೇ ಪ್ರಕರಣ ಪತ್ತೆಯಾಗದ ಕಾರಣ ಕೇಂದ್ರದ ಆರೋಗ್ಯಇಲಾಖೆ ದಾವಣಗೆರೆ ಜಿಲ್ಲೆಯನ್ನು ಏ.29 ರಂದುಹಸಿರು ವಲಯಕ್ಕೆ ಸೇರಿಸಿತ್ತು.
ಹಸಿರು ವಲಯಕ್ಕೆಸೇರ್ಪಡೆಯಾದ ಕೆಲ ಗಂಟೆಗಳ ಅಂತರದಲ್ಲಿ ದಾವಣಗೆರೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿತ್ತು.ಹಸಿರು ವಲಯಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಟೈಲರ್, ಗ್ಯಾರೇಜ್,ಆಟೋಮೊಬೈಲ್, ಮುದ್ರಣಾಲಯ, ಪಾದರಕ್ಷೆಅಂಗಡಿ, ಸಾಮಿಲ್ ಕೆಲವಾರು ವಲಯಕ್ಕೆ ವಿನಾಯತಿವಿಸ್ತರಣೆ ಮಾಡಿ ಆರ್ಥಿಕ ಚಟುವಟಿಕೆ ಪ್ರಾರಂಭಕ್ಕೆಹಸಿರು ನಿಶಾನೆ ನೀಡಿತ್ತು.ಲಾಕ್‌ಡೌನ್ ವಿನಾಯತಿ ಹಿನ್ನೆಲೆಯಲ್ಲಿ ಅನೇಕಅಂಗಡಿಗಳಲ್ಲಿ ಸ್ವತ್ಛತೆ ಮಾಡಿಕೊಂಡು ಅಂಗಡಿಪ್ರಾರಂಭಿಸಿ, ನೆಮ್ಮದಿಯ ಉಸಿರು ಬಿಟ್ಟಿದ್ದರು.ಅಂಗಡಿ- ಮುಂಗಟ್ಟು ತೆರೆದಂತಹ ಕೆಲವೇಗಂಟೆಗಳಲ್ಲಿ ಕೊರೊನಾ ಪ್ರಕರಣ ದೃಢಪಟ್ಟಿರುವವಿಷಯ ಕೇಳಿ ಕೆಲವರು ಸ್ವಯಂ ಪ್ರೇರಣೆಯಿಂದಬಾಗಿಲು ಮುಚ್ಚಿದ್ದರು.
ದಾವಣಗೆರೆಯ ಹಳೆಯಭಾಗದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಮಿಂಚಿನ ಕಾರ್ಯಾಚರಣೆ ನಡೆಸಿ ಎಲ್ಲಾ ವಹಿವಾಟುಬಂದ್ ಮಾಡಿಸಿದ್ದರು.ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆಕೊರೊನಾ ದೃಢಪಟ್ಟಿರುವುದು ಆಡಳಿತ ವಲಯಕ್ಕೆಮಾತ್ರವಲ್ಲ ಜನ ಸಾಮಾನ್ಯರಿಗೂ ದಿಗಿಲುಮೂಡುವಂತೆ ಮಾಡಿತ್ತು.ಅಲ್ಲಿಂದ ದಾವಣಗೆರೆಯಲ್ಲಿ ಕೊರೊನಾದಆರ್ಭಟ ಪ್ರಾರಂಭವಾಗಿತ್ತು.28 ದಿನಗಳ ನಂತರದಾವಣಗೆರೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಸಾರ್ವಜನಿಕರಲ್ಲಿ ಅಕ್ಷರಶಃ ಭಯದ ವಾತಾವರಣನಿರ್ಮಾಣ ಮಾಡಿತ್ತು.
ಕೊರೊನಾ ಎಂಬ ಹೆಸರೇ ಕೇಳದೇ ಇದ್ದಂತಹಜನರು ತಮ್ಮ ಊರಲ್ಲೇ ಕೊರೊನಾ ವಕ್ಕರಿಸಿರುವಸುದ್ದಿ ಗೊತ್ತಾಗುತ್ತಿದ್ದಂತೆ ಸ್ವಯಂ ಪ್ರೇರಿತ ರಸ್ತೆ,ಓಣಿ , ಗಲ್ಲಿಗಳನ್ನು ಬಂದ್ ಮಾಡಿದ್ದರು. ಅಕ್ಕಪಕ್ಕದರಸ್ತೆಯವರಿಗೂ ಸಹ ತಮ್ಮ ಮನೆಗಳತ್ತ ಸುಳಿದಾಡಲೂಅವಕಾಶ ನೀಡಿರಲಿಲ್ಲ.
ಆ ರೀತಿಯ ಅಘೋಷಿತಭಯದ ವಾತಾವರಣ ನಿರ್ಮಾಣವಾಗಿತ್ತು. 28ದಿನಗಳ ನಂತರ ಪತ್ತೆಯಾದ ಪ್ರಕರಣದ ಬೆನ್ನಹಿಂದೆಯೇ ಮತ್ತೂಂದು ಪ್ರಕರಣ ಪತ್ತೆಯಾಗಿದ್ದಲ್ಲದೆಮರಣವೂ ಸಂಭವಿಸಿದ್ದರಿಂದ ದಾವಣಗೆರೆ ಜನರುನಲುಗಿ ಹೋಗಿದ್ದರು.ಮೇ 3 ರಂದು ಒಂದೇ ದಿನ 21 ಜನರಲ್ಲಿಕೊರೊನಾ ಕಾಣಿಸಿಕೊಂಡ ನಂತರವಂತೂದಾವಣಗೆರೆಯ ಎಲ್ಲ ಕಡೆ ಅಘೋಷಿತ ಬಂದ್‌ನವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರೂರಸ್ತೆಗಳು ಬಂದ್ ಆಗಿದ್ದವು. ಕೆಲವಾರು ರಸ್ತೆಗಳಿಗೆಮುಳ್ಳಿನ ಬೇಲಿ ಹಾಕಲಾಗಿತ್ತು.
ಕೆಲ ರಸ್ತೆಗಳಲ್ಲಿ ತಗಡಿನತಡೆಗೋಡೆಗಳನ್ನೇ ಕಟ್ಟಲಾಗಿತ್ತು.ದಾವಣಗೆರೆ ಜನರು ಅಷ್ಟೊಂದು ಭಯದಲ್ಲಿದ್ದರು.ಜಾಲಿನಗರ, ಶಿವನಗರ, ಎಸ್.ಎಂ. ಕೃಷ್ಣ ನಗರ, ಕೆಟಿಜೆನಗರ, ಬೇತೂರು ರಸ್ತೆ, ಆನೆಕೊಂಡ, ಬಸವರಾಜಪೇಟೆ,ಒಳಗೊಂಡಂತೆ ಅನೇಕ ಪ್ರದೇಶಗಳು ತಿಂಗಳುಗಟ್ಟಲೆಕಂಟೈನ್‌ಮೆಂಟ್ ಪ್ರದೇಶಗಳಾಗಿದ್ದವು. ಆ ಪ್ರದೇಶಗಳಜನರು ಅಕ್ಷರಶಃ ಬಂಧಿಯಾಗಿದ್ದರು.
ಕಂಟೈನ್‌ಮೆಂಟ್‌ಝೋನ್ ತೆರವಿಗೆ ಒತ್ತಾಯಿಸಿ ಪ್ರತಿಭಟನೆಗಳು ಸಹನಡೆದಿದ್ದವು. ಎಲ್ಲಿ ನೋಡಿದರೂ ಕಂಟೈನ್‌ಮೆಂಟ್‌ಝೋನ್ ಸಾಮಾನ್ಯ ಎನ್ನುವಂತಾಗಿತ್ತು.ಈಗಲೂ ಅದೇ ಸ್ಥಿತಿ: ಕಳೆದ ವರ್ಷಕ್ಕೆ ಹೋಲಿಕೆಮಾಡಿದಲ್ಲಿ ಜಿಲ್ಲೆಯಲ್ಲಿ ಈಗ ಗಂಭೀರ ಎನ್ನುವಪರಿಸ್ಥಿತಿ ಇದೆ.
1624 ಸಕ್ರಿಯ ಪ್ರಕರಣಗಳಿವೆ.ಕೊರೊನಾದ ಎರಡನೇ ಅಲೆ ಪ್ರಬಲವಾಗಿಅಪ್ಪಳಿಸುತ್ತಿದೆ. ಡಿ.10 ರಿಂದ ಕೊರೊನಾ ಸಂಬಂಧಿತಮರಣ ಸಂಭವಿಸಿರಲಿಲ್ಲ. ಈಗ ಮತ್ತೆ ಸಾವಿನಪ್ರಕರಣ ವರದಿ ಆಗುತ್ತಿವೆ.ರಾಜ್ಯ ಸರ್ಕಾರ ಕೊರೊನಾ ತಡೆಗಟಲು 14ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ.ಬೆಳಗ್ಗೆ 6 ರಿಂದ 10ರ ವರೆಗೆ ಮಾತ್ರ ಅವಶ್ಯಕವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.
ಕಳೆದ ವರ್ಷದ ಲಾಕ್‌ಡೌನ್‌ನಿಂದ ಕುಸಿದಿರುವವ್ಯಾಪಾರ-ವಹಿವಾಟು ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.ಅಂದೇ ದುಡಿದು ಜೀವನ ನಡೆಸಬೇಕಾದವರ ಸ್ಥಿತಿಯಬಗ್ಗೆ ಹೇಳುವಂತೆಯೇ ಇಲ್ಲ. ಕೊರೊನಾ ಎಂಬಕಣ್ಣಿಗೆ ಕಾಣಿಸದ ವೈರಸ್ ಜನರ ಜಂಘಾಬಲವನ್ನೇಉಡುಗಿಸುತ್ತಿದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.