ಪ್ರವಾಸಿ ತಾಣಗಳಿಗೆ ಬೇಕಿದೆ ಅಭಿವೃದ್ಧಿಯ ಸ್ಪರ್ಶ


Team Udayavani, Sep 27, 2021, 3:06 PM IST

Tourist place

ದಾವಣಗೆರೆ: ನಡು ಕರ್ನಾಟಕದಕೇಂದ್ರ ಬಿಂದು, ಶೈಕ್ಷಣಿಕ ನಗರಿ,ಮೆಡಿಕಲ್‌ ಹಬ್‌ ಖ್ಯಾತಿಯ ದಾವಣಗೆರೆಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಕಾಣುವಂತಾಗಲು ಪ್ರವಾಸಿತಾಣಗಳಿಗೆಕಾಯಕಲ್ಪ ನೀಡುವ ಅಗತ್ಯವಿದೆ.

ಪೌರಾಣಿಕ, ಐತಿಹಾಸಿಕ ಹಿನ್ನೆಲೆಯದಾವಣಗೆರೆ ಜಿಲ್ಲೆಯಲ್ಲಿ ಸಂತೇಬೆನ್ನೂರಿನಪುಷ್ಕರಣಿ, ಏಷ್ಯಾದ ಎರಡನೇ ಅತಿದೊಡ್ಡದಾದ ಶಾಂತಿಸಾಗರ (ಸೂಳೆಕೆರೆ),ಪೌರಾಣಿಕತೆಯ ನೆಲವೀಡು ಹರಿಹರ,ದಾವಣಗೆರೆ ತಾಲೂಕಿನ ನೀರ್ಥಡಿ,ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರಸೇರಿದಂತೆ ಬೆರಳಣಿಕೆ ಸಂಖ್ಯೆಯಲ್ಲಿರುವಪ್ರವಾಸಿತಾಣಗಳು ಈವರೆಗೆ ಕಾಣಬೇಕಾದಅಭಿವೃದ್ಧಿ ಕಾಣದ ಕಾರಣಕ್ಕೆ ಜಿಲ್ಲೆಯಲ್ಲಿಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿಬೆಳೆದಿಲ್ಲ.

ಹರಿಹರೇಶ್ವರ ದೇವಾಲಯ: ಜಿಲ್ಲಾ ಕೇಂದ್ರದಾವಣಗೆರೆಯಿಂದ 17 ಕಿಲೋಮೀಟರ್‌ದೂರದಲ್ಲಿ ಜೀವನದಿ ತುಂಗಭದ್ರಾದಂಡೆಯಲ್ಲಿರುವ ಪೌರಾಣಿಕ ಹಿನ್ನೆಲೆಹೊಂದಿರುವ ಹರಿಹರೇಶ್ವರ ದೇವಾಲಯಇದೆ. ಪ್ರವಾಸಿ ತಾಣವಾಗುವ ಎಲ್ಲಸಾಧ್ಯತೆಗಳಿವೆ. ಆದರೆ ಇಚ್ಛಾಶಕ್ತಿ ಮತ್ತಿತರಕಾರಣಗಳಿಂದ ಹರಿಹರೇಶ್ವರ ದೇವಸ್ಥಾನಪ್ರವಾಸಿಗರ ನೆಚ್ಚಿನ ತಾಣ ಆಗುವಲ್ಲಿಹಿಂದೆ ಬಿದ್ದಿದೆ.

ದೇವಸ್ಥಾನಕ್ಕೆಹೊಂದಿ ಕೊಂಡಿರುವತುಂಗಭದ್ರಾ ನದಿಯನ್ನೇಆಧರಿಸಿ ಪ್ರವಾಸಿಗರನ್ನಹೆಚ್ಚಿನ ಸಂಖ್ಯೆಯಲ್ಲಿಸೆಳೆ ಯುವಂತಹಯೋಜನೆಗಳ ರೂಪಿಸಿದಲ್ಲಿಕೈಗಾರಿಕೆಗಳ ನಗರಿಯಾಗಿದ್ದ ಹರಿಹರ ಪ್ರವಾಸಿ ತಾಣವಾಗಿ ಮಾರ್ಪಡುವಲ್ಲಿ ಯಾವ ಅನುಮಾನವೂ ಇಲ್ಲ.

ಉತ್ತರ, ದಕ್ಷಿಣ, ಪೂರ್ವ ಮತ್ತುಪಶ್ಚಿಮ ಕರ್ನಾಟಕದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹರಿಹರ ತಾಲೂಕಿನಲ್ಲಿ ವೀರಶೈವ ಪಂಚಮಸಾಲಿ, ಕನಕ,ವಾಲ್ಮೀಕಿ, ವೇಮನ,ನೊಣಬ ಸಮಾಜದ ಗುರುಪೀಠ, ಧಾರ್ಮಿಕಮಹತ್ವದ ಉಕ್ಕಡಗಾತ್ರಿ ಹಾಗೂ ರುದ್ರರಮಣೀಯ ನೈಸರ್ಗಿಕ ಸೌಂದರ್ಯಹೊಂದಿರುವ ಕೊಂಡಜ್ಜಿ ಮುಂತಾದಕ್ಷೇತ್ರಗಳನ್ನ ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮವನ್ನ ಅಭಿವೃದ್ಧಿಪಡಿಸಬೇಕಾಗಿದೆ.

ಶಾಂತಿಸಾಗರ (ಸೂಳೆಕೆರೆ): ಏಷ್ಯಾದಲ್ಲೇಎರಡನೇ ಅತಿ ದೊಡ್ಡ ಕೆರೆ ಖ್ಯಾತಿಯಶಾಂತಿಸಾಗರವನ್ನು (ಸೂಳೆಕೆರೆ) ರಾಜ್ಯದಬಹು ದೊಡ್ಡ ಪ್ರವಾಸಿ, ಜಲವಿಹಾರಕೇಂದ್ರವನ್ನಾಗಿ ಅಭಿವೃದ್ದಿಪಡಿಸಲುವಿಪುಲ ಅವಕಾಶಗಳಿವೆ. ಕೆಲವು ಅಭಿವೃದ್ಧಿಕಾರ್ಯಗಳು ಕಂಡು ಬರುತ್ತಿವೆ. ಆದರೆಈವರೆಗೆ ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂಹ ದಿಟ್ಟ ಪ್ರಯತ್ನ ನಡೆಯದಕಾರಣ ಸೂಳೆಕೆರೆಯ ಖ್ಯಾತಿ ಒಂದೆರೆಡುಜಿಲ್ಲೆಗೆ ಮಾತ್ರ ಸೀಮಿತವಾಗಿದೆ.

ಸಂತೇಬೆನ್ನೂರಿನ ಪುಷ್ಕರಣಿ: ಸೂಳೆಕೆರೆಗೆ ಅನತಿ ದೂರದಲ್ಲಿರುವ ಐತಿಹಾಸಿಕ ಸಂತೇಬೆನ್ನೂರಿನ ಪುಷ್ಕರಣಿ ಸಹ ಜನಾಕರ್ಷಕಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಕಂಡಿಲ್ಲ.ಇಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣನಡೆದಿದೆ. ಸುಂದರ, ಮನೋಹರ,ಅತ್ಯಾಕರ್ಷಕ ಪುಷ್ಕರಣಿಗೆ ಇನ್ನಷ್ಟು ಮೆರಗುನೀಡಿ ಅಗತ್ಯ ಮೂಲ ಸೌಲಭ್ಯ ಒದಗಿಸಿದಲ್ಲಿಪುಷ್ಕರಣಿಯ ಸಂತೇಬೆನ್ನೂರು ರಾಜ್ಯದಅತ್ಯುತ್ತಮ ಪ್ರವಾಸಿ ಕೇಂದ್ರವಾಗಲಿದೆ.ಷಹಾಜಿ ಮಹಾರಾಜರ ಸಮಾಧಿ:ಸಂತೇಬೆನ್ನೂರು ಸಮೀಪದ ಹೊದಿಗೆರೆಯಲ್ಲಿಶಿವಾಜಿ ಮಹಾರಾಜರ ತಂದೆ ಷಹಾಜಿಮಹಾರಾಜರ ಸಮಾಧಿ ಇದೆ. ಐತಿಹಾಸಿಕ ಹಿನ್ನೆಲೆಯ ಹೊದಿಗೆರೆಯಲ್ಲಿನ ಷಹಜಿಮಹಾರಾಜ ಸಮಾಧಿಯ ಬಗ್ಗೆಯೇಅನೇಕರಿಗೆ ಮಾಹಿತಿಯೇ ಇಲ್ಲ ಎನ್ನುವುದು ಸತ್ಯ.

ಚನ್ನಗಿರಿ ಕೋಟೆ, ಧಾರ್ಮಿಕಶ್ರದ್ದಾಕೇಂದ್ರ ಜೋಳದಾಳ್‌, ಬಸವಾಪಟ್ಟಣಸಮೀಪದ ಪುಣ್ಯಕ್ಷೇತ್ರಗಳನ್ನ ಪ್ರವಾಸಿಕೇಂದ್ರವನ್ನಾಗಿಸಬೇಕಾಗಿದೆ.ಗಾಜಿನಮನೆ: ಜಿಲ್ಲಾ ಕೇಂದ್ರದಾವಣಗೆರೆಯಲ್ಲಿ ಕಳೆದ ಎರಡು ವರ್ಷಗಳಹಿಂದೆ ಪ್ರಾರಂಭವಾಗಿರುವ ಏಷ್ಯಾದಎರಡನೇ ಅತಿ ದೊಡ್ಡ ಗಾಜಿನಮನೆ ಈಗಜನರನ್ನು ಆಕರ್ಷಿಸುತ್ತಿದೆ.

ಗಾಜಿನ ಮನೆಗೆ ಇನ್ನೂ ಹೆಚ್ಚಿನ ಮೂಲ ಸೌಲಭ್ಯ ಒದಗಿಸಿದಲ್ಲಿ ಮತ್ತು ಗಾಜಿನ ಮನೆಗೆ ಹೊಂದಿಕೊಂಡಿರುವಕುಂದುವಾಡ ಕೆರೆಯಲ್ಲಿ ಕಾರಂಜಿ,ಬೋಟಿಂಗ್‌ ಇತರೆ ಜಲ, ಸಾಹಸ ಕ್ರೀಡೆಗಳಪ್ರಾರಂಭಿಸಿದ್ದಲ್ಲಿ ಬೆಣ್ಣೆ ನಗರಿ ಖ್ಯಾತಿಯದಾವಣಗೆರೆ ಪ್ರವಾಸಿ ಕೇಂದ್ರವಾಗಿಯೂ ಜನಮಾನಸದಲ್ಲಿ ರಾರಾಜಿಸಬಹುದಾದ ಎಲ್ಲ ಸಾಧ್ಯತೆಗಳೂ ಇವೆ.

ದಾವಣಗೆರೆ ತಾಲೂಕಿನ ಗಡಿಯಂಚಿನ ನೀರ್ಥಡಿ ಪೌರಾಣಿಕ ಕ್ಷೇತ್ರವಾಗಿದೆ. ಸುಂದರಕೆತ್ತನೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಇದೆ. ಆದರೆ, ಸೂಕ್ತ ಪ್ರಚಾರದ ಕೊರತೆಯಿಂದಬೆಳಕಿಗೆ ಬಂದಿಲ್ಲ. ಸಂಬಂಧಿತರು ಗಮನಹರಿಸಬೇಕಾಗಿದೆ.

ಹೊನ್ನಾಳಿ ತಾಲೂಕಿನಲ್ಲಿಬಂಜಾರ ಸಮುದಾಯದ ಆರಾಧ್ಯದೈವ ಸಂತ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪ, ಪೌರಾಣಿಕ ಹಿನ್ನೆಲೆಯ ತೀರ್ಥರಾಮೇಶ್ವರ, ಗಡ್ಡೆರಾಮೇಶ್ವರ ಕ್ಷೇತ್ರಗಳು ಸಹ ಪ್ರವಾಸಿ ತಾಣಗಳಾಗಿ ಗಮನಸೆಳೆಯುವಲ್ಲಿ ಹಿಂದಿವೆ.ಜಿಲ್ಲೆಯಲ್ಲಿ ಅಂತಹ ಪ್ರವಾಸಿತಾಣಗಳು ಇಲ್ಲ. ಆದರೆ ಇರುವ ಸ್ಥಳಗಳನ್ನೇಅಭಿವೃದ್ಧಿಪಡಿಸಿದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣಬಹುದು. ಪ್ರವಾಸೋದ್ಯಮದಿನದಂದು ಅಂತಹ ಪ್ರಯತ್ನಕ್ಕೆ ನಾಂದಿಹಾಡಲಿ ಎಂಬುದು ಜನರ ಅಪೇಕ್ಷೆ.

ರಾ. ರವಿಬಾಬು

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.