ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 20ರಿಂದ ಲಾರಿಗಳ ಸಂಚಾರ ಬಂದ್: ಸೈಪುಲ್ಲ
Team Udayavani, Jul 13, 2018, 3:49 PM IST
ದಾವಣಗೆರೆ: ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್, ಪೆಟ್ರೋಲ್ ಸೇರ್ಪಡೆ, ದರ ಇಳಿಕೆ, ಏಕರೂಪ ದರ ನಿಗದಿ, ಥರ್ಡ್ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕಡಿತ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 20ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ವಾಣಿಜ್ಯ ವಾಹನಗಳ ಮುಷ್ಕರ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲಿಕರ ಮತ್ತು ಟ್ರಾನ್ಸ್‌ಪೊರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಪುಲ್ಲಾ ತಿಳಿಸಿದ್ದಾರೆ.
ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಜು. 14ರಂದು ಶನಿವಾರ ಬೆಳಗ್ಗೆ 10.30ಕ್ಕೆ ರೋಟರಿ ಬಾಲಭವನದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಲಾರಿ, ಬಸ್, ಮಿನಿಗೂಡ್ಸ್, 3 ಮತ್ತು 4 ಚಕ್ರಗಳ ವಾಹನ, ಟ್ಯಾಕ್ಸಿ ಮಾಲಿಕರು ಸಭೆಯಲ್ಲಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ದಿನ ಡೀಸೆಲ್ ಬೆಲೆಯಲ್ಲಿ ಏರಿಳಿತದ ಪರಿಣಾಮ ಬಾಡಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಎಸ್‌ಟಿಯಡಿ ಡೀಸೆಲ್, ಪೆಟ್ರೋಲ್ ಸೇರಿಸಿ, ಪ್ರತಿ 3 ತಿಂಗಳಿಗೊಮ್ಮೆ ದರ ಪರಿಶೀಲನಾ ಪದ್ಧತಿ ಜಾರಿಗೊಳಿಸಬೇಕು.
ದೇಶದ್ಯಾಂತ ಇರುವ 427 ಟೋಲ್‌ಗಳಲ್ಲಿ 67 ಖಾಸಗಿ ಕಂಪನಿಗಳ, 360 ಸರ್ಕಾರದ ಅಧೀನದಲ್ಲಿವೆ. ವರ್ಷಕ್ಕೆ 427 ಟೋಲ್‌ಗಳಿಂದ 17 ಸಾವಿರ ಕೋಟಿ ಶುಲ್ಕ ವಸೂಲಾಗುತ್ತದೆ. ನಮ್ಮ ರಾಷ್ಟ್ರೀಯ ಸಂಘದಿಂದಲೇ ವರ್ಷಕ್ಕೆ 20 ಸಾವಿರ ಕೋಟಿ ಟೋಲ್ ಶುಲ್ಕ ಪಾವತಿಸುತ್ತೇವೆ. ಬಸ್, ಲಾರಿ, ಕಾರು ಎಲ್ಲ ವಾಹನಗಳಿಂದ ಟೋಲ್
ಸಂಗ್ರಹ ನಿಲ್ಲಿಸುವ ಮೂಲಕ ಟೋಲ್‌ವುುಕ್ತ ಭಾರತ ಮಾಡಬೇಕು ಎಂಬುದು ಮುಷ್ಕರದ ಪ್ರಮುಖ ಬೇಡಿಕೆ ಎಂದು ತಿಳಿಸಿದರು.
ಥರ್ಡ್ ಪಾರ್ಟಿ ವಿಮಾ ಪಾಲಿಸಿ ಆತಿ ಹೆಚ್ಚಾಗಿದೆ. ವಿಮಾ ಮೊತ್ತದ ಹೆಚ್ಚಳಕ್ಕೆ ಕಾರಣ ಕೇಳಿದರೆ ನಷ್ಟದ ಬಗ್ಗೆ ಹೇಳುತ್ತಾರೆ. ವಿಮಾ ಕ್ಷೇತ್ರವೇ ನಷ್ಟದಲ್ಲಿರುವಾಗ ಹೊಸ ಕಂಪನಿಗಳು ಬರುವುದ ನೋಡಿದರೆ ವಿಮಾ
ಕಂಪನಿಗಳ ಲಾಬಿ ಗೊತ್ತಾಗುತ್ತದೆ. ಲಾರಿಗಳಿಗೆ ನೀಡಿರುವಂತೆಯೇ ಪ್ರವಾಸಿ ಬಸ್‌ಗಳಿಗೂ ರಾಷ್ಟ್ರೀಯ ಪರವಾನಿಗೆ ನೀಡಬೇಕು. ಟಿಡಿಎಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪೂರ್ವಭಾವಿ ಆದಾಯ (ಆದಾಯ ತೆರಿಗೆ ನಿಯಮ-44) ಕಾಯ್ದೆ ಪರಿವರ್ತನೆ, ಈ-ವೇ ಬಿಲ್ ಸಮಸ್ಯೆ ನಿವಾರಣೆ, ಮುಂಬೈನ ಜವಾಹರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್ ಡೆಲಿವಿರಿ ಪದ್ಧತಿ ರದ್ದು ಮತ್ತು ಬಂದರುಗಳಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡುವುದು ಒಳಗೊಂಡಂತೆ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶವ್ಯಾಪಿ ಅನಿರ್ದಿಷ್ಟಾವಧಿ ವಾಣಿಜ್ಯ ವಾಹನಗಳ ಮುಷ್ಕರ
ಆರಂಭಿಸಲಾಗುವುದು ಎಂದು ತಿಳಿಸಿದರು. ಸಂಘ ಗೌರವಾಧ್ಯಕ್ಷ ಜಿ. ನಾಗೋಜಿರಾವ್, ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ, ಖಜಾಂಚಿ ಭೀಮಪ್ಪ, ಸೋಗಿ ಮಹಾಂತೇಶ್, ಇಮಾಂ, ಸ್ವಾಮಿ, ಸಿದ್ದೇಶ್, ಮಹಾಂತೇಶ್, ಜಯಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.