ಬಿಎಲ್‌ಒಗಳಿಗೆ ತರಬೇತಿ
Team Udayavani, Aug 3, 2020, 1:55 PM IST
ಮಲೇಬೆನ್ನೂರು: ಪುರಸಭೆ ಸಭಾಂಗಣದಲ್ಲಿ ಪಟ್ಟಣದ ಎಲ್ಲಾ ವಾರ್ಡ್‌ಗಳ ಬಿಎಲ್‌ಒಗಳಿಗೆ ತರಬೇತಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮಾತನಾಡಿ, ಎಲ್ಲಾ 23 ವಾರ್ಡ್‌ಗಳ 11 ಕಂಟೈನ್ಮೆಂಟ್ ವಲಯಗಳಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೋವಿಡ್ ವೈರಾಣು ನಿಯಂತ್ರಣಕ್ಕೆ ಸಮೀಕ್ಷೆ ನಡೆಸಬೇಕಿದೆ.
ಅಪರ ಜಿಲ್ಲಾಧಿಕಾರಿ, ತಹಶೀಲ್ದಾರರ ಆದೇಶದ ಮೇರೆಗೆ ಎಲ್ಲಾ ಬಿಎಲ್‌ಒಗಳು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಬೇಕು. ಸಮೀಕ್ಷೆದಾರರಿಗೆ ಪುರಸಭೆಯಿಂದ ಮಾಸ್ಕ್ ಮತ್ತು ಗ್ಲೌಸ್ ನೀಡಲಾಗುವುದು. ತರಬೇತಿಗೆ ಗೈರಾದವರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದರು.
ವಾರ್ಡ್ ಸಂಖ್ಯೆ 2, 5, 9, 10, 12, 14, 16 ಮತ್ತು 17ರಲ್ಲಿ ಕಂಟೈನ್ಮೆಂಟ್ ಝೋನ್‌ಗಳಿವೆ ಎಂದು ತಿಳಿಸಲಾಯಿತು. ಸಮೀಕ್ಷೆ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ, ವಲಯ ಮಟ್ಟದ ಸಂಪನ್ಮೂಲ ವ್ಯಕ್ತಿ ಬಸವರಾಜಯ್ಯ, ಆರೋಗ್ಯ ಸಹಾಯಕ ಗೋವಿಂದಪ್ಪ ಮಾತನಾಡಿದರು.
ಸಭೆಯಲ್ಲಿ ಉಪತಹಶೀಲ್ದಾರ್ ಆರ್. ರವಿ, ಪಟ್ಟಣ ವ್ಯಾಪ್ತಿಯ ಬಿಎಲ್ ಒಗಳು, ಆರೋಗ್ಯ ನಿರೀಕ್ಷಕ ನವೀನ್ ಕಟ್ಟಿಮನಿ, ಗ್ರಾಮಲೆಕ್ಕಿಗ ಕೊಟ್ರೇಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.