ಅಕ್ರಮ ಸಾಗುವಳಿಗಾಗಿ ಮರಗಳು ಧರೆಗೆ


Team Udayavani, May 24, 2017, 1:19 PM IST

dvg5.jpg

ಹರಪನಹಳ್ಳಿ: ಅಳೆತ್ತರಕ್ಕೆ ಬೆಳೆದು ನಿಂತಿದ್ದ ಮರ-ಗಿಡಗಳನ್ನು ಕಡಿದು ಹಾಕಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಯಲ್ಲಾಪುರ, ಗೋವೆರಹಳ್ಳಿ ಮತ್ತು ನಾರಾಯಣಪುರ ಗ್ರಾಮಸ್ಥರು ಟ್ರಾಕ್ಟರ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮಂಗಳವಾರ ಪಟ್ಟಣದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. 

ಕಸಬಾ ಹೋಬಳಿ ಮೆಳ್ಳೆಕಟ್ಟಿ ಕಂದಾಯ ಗ್ರಾಮದ ಸರ್ವೇ ನಂ.1ರಲ್ಲಿ ಸುಮಾರು 500 ಎಕರೆ ವಿಸ್ತೀರ್ಣ ಹಾಗೂ ನಾರಾಯಣಪುರ ಕಂದಾಯ ಗ್ರಾಮದ 2200 ಎಕರೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಗಿಡ, ಮರಗಳನ್ನು ಕಡಿದು ಹಾಕಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಜನರಿಗೆ ಸರ್ಕಾರ ಪಟ್ಟಾವನ್ನು ನೀಡಿರುತ್ತಾರೆ.

ಇದರಿಂದ ಈ ಭಾಗದ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ದನ, ಕರುಗಳನ್ನು ಮೇಯಿಸುವುದಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಈ ಭಾಗದಲ್ಲಿ 4500ಕ್ಕೂ ಹೆಚ್ಚು ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಇರುವ ಬಗ್ಗೆ ಪಶು ವೈದ್ಯಾಧಿಧಿಕಾರಿಗಳಿಂದ ದೃಢಿಕರಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಜಾನುವಾರುಗಳಿಗೆ ಮೀಸಲಿಟ್ಟ ಜಮೀನಿನಲ್ಲಿ ಈಗಾಗಲೇ ಅರಣ್ಯ ಇಲಾಖೆಯಿಂದ ಸಾಕಷ್ಟು ಗಿಡಗಳನ್ನು ಬೆಳೆಸಿರುತ್ತಾರೆ. ಆದರೆ ಯಲ್ಲಾಪುರ, ಕೊರಚರಹಟ್ಟಿ ಮತ್ತು ಹರಪನಹಳ್ಳಿ, ಆನಂತನಹಳ್ಳಿ, ಬಾಪೂಜಿ ನಗರ ಗ್ರಾಮಗಳ ಕೆಲವರು ಸರ್ಕಾರಿ ಜಮೀನಿನಲ್ಲಿರುವ ಗಿಡ ಮರಗಳನ್ನು ಕಡಿದು ಅವುಗಳನ್ನು ಲೂಟಿ ಮಾಡಿದ್ದಾರೆ.

ಮರ-ಗಿಡಗಳನ್ನು ಕಡಿದು ಹಾಕಿದ ಪರಿಣಾಮ ಮಳೆ ಹೋಗಿ ಕುಡಿಯುವ ನೀರಿಗೂ ಪರಿತಪ್ಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಿಡಗಳನ್ನು ಬೆಳೆಸುವ ಬದಲು ಕಡಿದು ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆಯ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ.

ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಒಂದು ವೇಳೆ ಕಂದಾಯ ಅಧಿಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ, ಆ ಸ್ಥಳದಲ್ಲಿ ಪುನಃ ಗಿಡ, ಮರಗಳನ್ನು ಬೆಳೆಸದಿದ್ದಲ್ಲಿ ನಮ್ಮ ಜಾನುವಾರುಗಳೊಂದಿಗೆ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. 

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಅವರು, ಕಂದಾಯ ಅಧಿಧಿಕಾರಿಗಳ ಮೂಲಕ ಸ್ಥಳವನ್ನು ಪರೀಶೀಲನೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದು ಕಂಡು ಬಂದಲ್ಲಿ ಅವರನ್ನು ತೆರವುಗೊಳಿಸಿ ಪುನಃ ಗಿಡಗಳನ್ನು ನೆಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು. 

ಗ್ರಾಪಂ ಸದಸ್ಯ ಮುತ್ತಪ್ಪ, ಪಿ.ಚಂದ್ರಯ್ಯ, ಜಗದೀಶ್‌, ಎಚ್‌.ಹಾಲೇಶ್‌, ಬಿ.ಗೋಣೆಪ್ಪ, ಹೊನ್ನಪ್ಪ, ಹನುಮಂತಪ್ಪ, ಕೆಂಚಪ್ಪ, ಪರಶಪ್ಪ, ಮಂಜಪ್ಪ, ತಿರುಪತಿ ಸೇರಿದಂತೆ ಯಲ್ಲಾಪುರ ರೈತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

kejriwal 2

PM Modi ಪದವಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

CM-Sidda

Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

1-a-modiii

Taken-for-granted ಸಂಬಂಧಗಳಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

Ram-Naidu

Hoax call: ಬೆದರಿಕೆ ಹಾಕುವ ದುಷ್ಕರ್ಮಿಗಳ ವಿಮಾನಯಾನವನ್ನೇ ನಿರ್ಬಂಧಿಸಲು ನಿಯಮ: ಸಚಿವ

Vimana 2

Kochi airport; ಹುಸಿ ಬಾಂಬ್ ಕರೆ ಮಾಡಿದ ಪ್ರಯಾಣಿಕ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅ. 22ರಂದು ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಸಭೆ: ಶಾಮನೂರು

ಅ. 22ರಂದು ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಸಭೆ: ಶಾಮನೂರು

Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್

Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್

Yatnal 2

Government ಪತನ ಸಂಚು ಹೇಳಿಕೆ; ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

accident

Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

kejriwal 2

PM Modi ಪದವಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

CM-Sidda

Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

1-a-modiii

Taken-for-granted ಸಂಬಂಧಗಳಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

1–a-sruti

Udupi; ಕೆಮ್ಮಣ್ಣು ಗಣಪತಿ ಸಹಕಾರಿ ವ್ಯಾವಸಾಯಿಕ ಸಂಘ : ಅ. 27 ರಂದು ಶತಾಭಿವಂದನಂ’ ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.