ಕೊಳೆಗೇರಿ ನಿವಾಸಿಗಳಿಗೆ ಪರಿಹಾರ ನೀಡಲು ಆಗ್ರಹ


Team Udayavani, May 22, 2021, 10:31 AM IST

Untitled-1

ದಾವಣಗೆರೆ: ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನಲ್ಲಿ ಕೊಳೆಗೇರಿ ನಿವಾಸಿಗಳನ್ನು ಕಡೆಗಣಿಸಿದೆಎಂದು ಆರೋಪಿಸಿ ಶುಕ್ರವಾರ ಸ್ಲಂ ಜನಾಂದೋಲನ ನೇತೃತ್ವದಲ್ಲಿ ಸಂಘಟನೆ ಪದಾಧಿಕಾರಿಗಳ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವಕೃಷಿಕರು, ಕ್ಷೌರಿಕರು, ಶ್ರಮಿಕರು,ಆಟೋ ಚಾಲಕರು, ಹಮಾಲಿಗಳು, ಭಟ್ಟಿ ಕಾರ್ಮಿಕರು, ಚಮ್ಮಾರರು,ಗೃಹ ಕಾರ್ಮಿಕರು, ಟೈಲರ್‌ಗಳುಸೇರಿದಂತೆ ಇತರೆ ಸಮುದಾಯಗಳಿಗೆ 1,250 ಕೋಟಿ ಆರ್ಥಿಕಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ನಗರಗಳ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಶೇ.45 ಜನರನ್ನ ಕಡೆಗಣಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬಡತನ ರೇಖೆಯಿಂದ ಕೆಳಗಿರುವ ಬಿಪಿಎಲ್‌ ಕುಟುಂಬಗಳಿಗೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಮೇ, ಜೂನ್‌ತಿಂಗಳಿಗೆ ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ 5ಕಿಜಿ ಅಕ್ಕಿ ಉಚಿತ ವಿಸ್ತರಣೆಯಕೇಂದ್ರ ಸರ್ಕಾರದ ಘೋಷಣೆ ಪುನರ್‌ ವ್ಯಾಖ್ಯಾನಿಸುವುದನ್ನು ಬಿಟ್ಟರೇ ಬೇರಾವುದೇ ವಿಶೇಷತೆ ಇಲ್ಲ.

ಆರ್ಥಿಕ ಪರಿಹಾರ ಘೋಷಣೆಯಲ್ಲಿ ನಗರ ವಂಚಿತ ಸಮುದಾಯವಾದ ಸ್ಲಂ ಜನರಿಗೆ ಆದ್ಯತೆ ನೀಡದೇ ಇರುವುದು ಅತ್ಯಂತ ಖಂಡನೀಯ. ಕೊರೊನಾವನ್ನು ರಾಷ್ಟ್ರೀಯ ವಿಪತ್ತು  ಎಂದು ಘೋಷಿಸಿರುವ ಸರ್ಕಾರ ರಾಷ್ಟ್ರೀಯ ವಿಪತ್ತಿನ ಮಾನದಂಡಗಳ ಅನ್ವಯ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಬಿಪಿಎಲ್‌ಕುಟುಂಬಗಳಿಗೆ ಮತ್ತು ಕೊಳೆಗೇರಿ ನಿವಾಸಿಗಳಿಗೆ ಲಾಕ್‌ಡೌನ್‌ ಆರ್ಥಿಕಪರಿಹಾರವಾಗಿ ಮೂರು ತಿಂಗಳು ತಲಾ10 ಸಾವಿರ ಭತ್ಯೆ ಘೋಷಿಸಬೇಕು. ಸ್ಲಂ ನಿವಾಸಿಗಳಿಗೆ ರಾಷ್ಟ್ರೀಯ ವಿಪತ್ತುಪರಿಹಾರದ ಮಾನದಂಡದಂತೆಮೂರು ತಿಂಗಳು (ಪಡಿತರ ವಿತರಣೆ ಹೊರತು ಪಡಿಸಿ) ತಲಾ 10 ಕೆಜಿಯಂತೆ ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಎಲ್ಲ ನಾಗರಿಕರಿಗೆ ಉಚಿತವಾಗಿ ಕಾಲಮಿತಿಯಲ್ಲಿ ಲಸಿಕೆ ನೀಡಬೇಕು ಮತ್ತು ಮನೆ ಮನೆಗೆ ಲಸಿಕೆ ಅಭಿಯಾನ ಪ್ರಾರಂಭಿಸಬೇಕು.

ಕೋವಿಡ್ ಸಂಬಂಧಿತ ಚಿಕಿತ್ಸೆಯನ್ನ ಉಚಿತಗೊಳಿಸಿ ಮತ್ತು ಸರ್ಕಾರವೇ ಅದರ ವೆಚ್ಚವನ್ನು ಸಂಪೂರ್ಣವಾಗಿ ಭರಿಸಬೇಕು. ಕೊರೊನಾದಿಂದ ಸಾವಿಗೀಡಾದ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು. ಈಗ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್‌ ಜಾರಿಗೆ ಇಚ್ಛಾಶಕ್ತಿ, ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಶಬೀರ್‌ಸಾಬ್‌ ಇತರರು ಇದ್ದರು.

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.