ವೀರಶೈವ ಮಹಾಸಭಾ ಜಿಲ್ಲಾ ಕಚೇರಿ ಕಟ್ಟಡ ಕಾಮಗಾರಿ ಶೀಘ್ರ: ಶಾಮನೂರು
Team Udayavani, Mar 17, 2019, 6:43 AM IST
ದಾವಣಗೆರೆ: ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಚೇರಿ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕಪ್ಪ ಹೇಳಿದ್ದಾರೆ.
ಮಹಾಸಭಾದ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನಾರಾಯ್ಕೆಯಾದ ನಂತರ ನಗರಕ್ಕೆ ಆಗಮಿಸಿದ ಅವರನ್ನು ವೀರಶೈವ-ಲಿಂಗಾಯಿತ ಮುಖಂಡರು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಕಚೇರಿಯಲ್ಲಿ ಅಭಿನಂದಿಸಿದ ಸಂದರ್ಭದಲ್ಲಿ ಈ ವಿಷಯ
ಪ್ರಸ್ತಾಪಿಸಿ, ಈ ಹಿಂದಿನ ಅವಧಿಯಲ್ಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಹಾಸಭಾದ ಕಚೇರಿ ಆರಂಭಿಸಲು ಚಾಲನೆ ನೀಡಲಾಗಿತ್ತು. ಈಗಾಗಲೇ 10-15 ಜಿಲ್ಲೆಗಳಲ್ಲಿ ಮಹಾಸಭಾದ ಕಚೇರಿ, ಕಟ್ಟಡ ನಿರ್ಮಾಣಗೊಂಡಿವೆ. ದಾವಣಗೆರೆಯಲ್ಲೂ ಸಹ ಒಟ್ಟು 10 ಸಾವಿರ ಅಡಿ ಅಳತೆ ನಿವೇಶನದಲ್ಲಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣದ ಕೆಲಸ ಪ್ರಾರಂಭಗೊಳ್ಳಲಿದೆ ಎಂದರು.
ಈ ಹಿಂದೆ ಭೀಮಣ್ಣ ಖಂಡ್ರೆಯವರ ಆಶಯದಂತೆ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೆ. ಇದೀಗ ಮತ್ತೆ ಎಲ್ಲಾ ಮಠಾಧೀಶರ, ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಪುನಃ ಅವಿರೋಧವಾಗಿ ಅಧ್ಯಕ್ಷನಾಗಿದ್ದೇನೆ ಎಂದು
ಹೇಳಿದರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕೆಂಬ ಉದ್ದೇಶದಿಂದ 2 ಎಕರೆ ಜಮೀನಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಪುನಾರಾಯ್ಕೆಯಾದ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪರನ್ನು ಅಭಿನಂದಿಸಿ ಮಹಾಸಭಾ ಉಪಾಧ್ಯಕ್ಷರೂ ಆಗಿರುವ ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಜ್ಯೋತಿ ಜೆಂಬಗಿ, ಕೆ.ಜಿ.ಶಿವಕುಮಾರ್ ಮತ್ತಿತರರು ಮಾತನಾಡಿದರು.
ಮುಖಂಡರಾದ ಕಿರುವಾಡಿ ಸೋಮಶೇಖರ್, ಕೋಗುಂಡಿ ಬಕ್ಕೇಶ್, ಎಸ್.ಕೆ.ವೀರಣ್ಣ, ಶಾಮನೂರು ಬಸಣ್ಣ, ಶಿವನಳ್ಳಿ ರಮೇಶ್, ಅಜ್ಜಂಪುರ ಶೆಟ್ರಾ ವಿಜಯಕುಮಾರ್, ರಾಧೇಶ್ ಜೆಂಬಗಿ, ಅಕ್ಕಿಪ್ರಭು , ಬಾಳೆಹೊಲದ ಕರೆಶಿವಪÛ ಸಿದ್ದೇಶ್, ಶಶಿಕಲಾ ಮೂರ್ತಿ,
ನಿರ್ಮಲ ಸುಭಾಷ್, ದೊಗ್ಗಳ್ಳಿ ಸುವರ್ಣಮ್ಮ, ಇತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.