ಚುನಾವಣೆ ಬಂದ್ರೂ ಸಮಸ್ಯೆಗಳಿಗಿಲ್ಲ ಮುಕ್ತಿ!
|ಮಾಯಕೊಂಡ-ಆನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಇನ್ನಾದರೂ ಆಗಲಿ
Team Udayavani, Dec 20, 2020, 5:14 PM IST
ಮಾಯಕೊಂಡ: ಗ್ರಾಮ ಪಂಚಾಯತ್ ಚುನಾವಣೆ ಮತ್ತೆ ಎದುರಾಗಿದ್ದು, ಮಾಯಕೊಂಡ ಹಾಗೂ ಆನಗೋಡು ಹೋಬಳಿಯ ಜ್ವಲಂತ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಯಕೊಂಡ, ಆನಗೋಡು ಹೋಬಳಿಗಳಿವೆ. ಈ ಪೈಕಿ ಮಾಯಕೊಂಡ ಹೊರತುಪಡಿಸಿ ಆನಗೋಡುಹೋಬಳಿಯ 12, ಮಾಯಕೊಂಡ ಹೋಬಳಿಯ 11 ಗ್ರಾಪಂಗಳಿಗೆ ಡಿ. 22 ರಂದು ಚುನಾವಣೆ ನಡೆಯಲಿದೆ.ಕಳೆದ ಅವಧಿಯಲ್ಲಿ ಬೆರಳೆಣಿಕೆ ಕೆಲಸಗಳಾಗಿದ್ದು, ಇನ್ನೂಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ರಾಜೀವ್ ಗಾಂಧಿ ಸಬ್ ಮಿಷನ್ ಬಹು ಗ್ರಾಮ ಯೋಜನೆಯ ಶುದ್ಧ ಕುಡಿಯುವ ನೀರಿನ ಘಟಕ ಕೆಲ ಗ್ರಾಮಗಳ ನೀರಿನ ದಾಹ ತೀರಿಸಿದರೆ,ಇನ್ನುಳಿದ ಗ್ರಾಮಗಳಲ್ಲಿ ನೀರಿನಸಮಸ್ಯೆ ಇನ್ನೂ ಜೀವಂತವಾಗಿದೆ. ಭದ್ರಾನಾಲೆಯಲ್ಲಿ ನೀರು ಹರಿಯುವಾಗ ಮಾತ್ರ ನೀರಿನ ಸಮಸ್ಯೆ ನೀಗುತ್ತದೆ. ಇನ್ನುಳಿದ ದಿನಗಳಲ್ಲಿ ಬೋರ್ ವೆಲ್ ನೀರು ಬಳಕೆ ಮಾಡಬೇಕಾದ ಸ್ಥಿತಿ ಇದೆ.
ಮಾಯಕೊಂಡ ಹೋಬಳಿಯ ಭದ್ರಾ ನಾಲೆ ವಂಚಿತ ಗ್ರಾಮಗಳು ಸೇರಿದಂತೆ ಆನಗೋಡು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಬೇಸಿಗೆ ಬಂದರೆ ನೀರಿನ ಸಮಸ್ಯೆಉಲ್ಬಣವಾಗುತ್ತದೆ. ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಲಾಗಿದೆ. ಸ್ಮಶಾನ ಸಮಸ್ಯೆ ಇದ್ದು ಬ್ಯಾಂಕ್ ಶಾಖೆ ನಿರ್ಮಾಣಕ್ಕೆ ಒತ್ತಾಯ ಹೆಚ್ಚಿದೆ. ಅಣಬೇರು ಗ್ರಾಮದಲ್ಲಿ ಗ್ರಾಮದಮಧ್ಯೆ ಹೊಂಡದಲ್ಲಿ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ದುರ್ವಾಸನೆಯಿಂದ ಜನ ಬೇಸತ್ತು ಹೋಗಿದ್ದು, ಹೊಂಡ ಮುಚ್ಚಿಸಲು ಒತ್ತಾಯಿಸುತ್ತಿದ್ದಾರೆ. ಗ್ರಾಮದ ಮನೆಗಳನ್ನು ಇ-ಸ್ವತ್ತು ಮಾಡಿಸುವುದು, ಮತ್ತಿ ಗ್ರಾಮದ ತಿಮ್ಮಪ್ಪನ ಕ್ಯಾಂಪ್ ಬಳಿ ಚರಂಡಿ, ರಸ್ತೆಗೆ ಪೈಪ್ ಅಳವಡಿಸುವುದು, ಅಶ್ರಯ ಮನೆಗಳ ಹಂಚಿಕೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
ಆನಗೋಡು ಹೋಬಳಿಯ ಹೆಬ್ಟಾಳು ಗ್ರಾಮದಲ್ಲಿ ಕೋಳಿ ಫಾರಂನ ನೊಣ, ಕ್ರಷರ್ ಧೂಳಿನಿಂದ ಕಾಯಿಲೆಗಳಿಗೆ ತುತ್ತಗುತ್ತಿದ್ದಾರೆ. ನರಗನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನಿವೇಶನ, ಅಶ್ರಯ ಮನೆಗಳ ಹಂಚಿಕೆ ಕೊರತೆ ಕಾಡುತ್ತಿದೆ. ಬಸ್ ಸಂಚಾರ, ಸಿಸಿ ರಸ್ತೆ , ಚರಂಡಿ, ಸಮುದಾಯ ಭವನ, ಪಶು ಆಸ್ಪತ್ರೆ, ಸರ್ಕಾರಿ ಶಾಲೆ ಕಟ್ಟಡಗಳು,ಮೈದಾನ ಕೊರತೆ ಬಹುತೇಕ ಗ್ರಾಮಗಳಲ್ಲಿದೆ. ಕಾಡುತ್ತಿದೆ. ಮಾಯಕೊಂಡ, ಆನಗೋಡು ಹೋಬಳಿವ್ಯಾಪ್ತಿಯಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಕೆರೆ ಕಟ್ಟೆಗಳು ತುಂಬಿ ನೀರಿನ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾಗಬಹುದು.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಸಮಸ್ಯೆಗೆ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಾದರೂ ಮುಕ್ತಿ ಸಿಗಬಹುದೇ ಎಂಬುದು ಗ್ರಾಮಗಳ ಜನರ ಆಶಯ. ಇದಕ್ಕೆಲ್ಲ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವವರಲ್ಲಿ ಇಚ್ಛಾಶಕ್ತಿ ಬೇಕಷ್ಟೇ.
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಚರಂಡಿ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಕೊಳಚೆ ಸಂಗ್ರಹವಾಗಿಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಬ್ಯಾಂಕ್ ಶಾಖೆಆರಂಭವಾಗಬೇಕು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಪ್ರಕಾಶ್, ಹುಚ್ಚವ್ವನಹಳ್ಳಿ ಗ್ರಾಪಂ,1ನೇ ವಾರ್ಡ್ ಅಭ್ಯರ್ಥಿ
ಮತ್ತಿ ಗ್ರಾಮದ ತಿಮ್ಮಪ್ಪನ ಕ್ಯಾಂಪ್‌ನಲ್ಲಿ ಚರಂಡಿ, ರಸ್ತೆ, ನಿರ್ಮಾಣಮಾಡಬೇಕು ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ನೂತನ ಪೈಪ್ ಅಳವಡಿಸಬೇಕು. ಗ್ರಾಮದ ಬಸ್ ನಿಲ್ದಾಣದ ಬಳಿ ಶೌಚಾಲಯ ನಿರ್ಮಾಣ ಮಾಡಬೇಕು. – ಕೆ.ಬಿ. ಸತೀಶ್, ಮತ್ತಿ ಗ್ರಾಪಂ, 2ನೇ ವಾರ್ಡ್ ಅಭ್ಯರ್ಥಿ
ಅಣಬೇರು ಗ್ರಾಮದ ಮಧ್ಯ ಭಾಗದಲ್ಲಿ ಪುರಾತನ ಕಾಲದಹೊಂಡದಲ್ಲಿ ಮಳೆ ನೀರು ನಿಂತು ವಾಸನೆ ಬರುತ್ತದೆ. ಸೊಳ್ಳೆಗಳ ಕಾಟದಿಂದ ಜನರು ಬೇಸತ್ತಿದ್ದಾರೆ.ಹೊಂಡ ಮುಚ್ಚಬೇಕು, ಗ್ರಾಮದ ಜನರ ಮನೆಗಳ ಇ-ಸ್ವತ್ತು ಮಾಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು. ಬಸ್ ಸಂಚಾರ ಹೆಚ್ಚಿಸಬೇಕು. – ಜಿ.ಎಂ. ಅನಿಲ್‌ಕುಮಾರ್, ಅಣಬೇರು ಗ್ರಾಪಂನ 3ನೇ ವಾರ್ಡ್ ಅಭ್ಯರ್ಥಿ
–ಶಶಿಧರ ಶೇಷಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.