ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ವಿಶ್ವಚೇತನ


Team Udayavani, Aug 15, 2022, 11:55 AM IST

dvg3

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ವೈದ್ಯಕೀಯ, ಇಂಜಿನಿಯರಿಂಗ್‌, ಇತರೆ ಉನ್ನತ ಶಿಕ್ಷಣದ ಕನಸು ಕಾಣುವುದು ಸಾಮಾನ್ಯ. ಅಂತಹ ಸಾವಿರಾರು ವಿದ್ಯಾರ್ಥಿಗಳ ಕನಸು ನನಸಾಗಿಸುವುದರ ಜತೆಗೆ ಭದ್ರ ಭವಿಷ್ಯ ರೂಪಿಸಿ, ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ದಾವಣಗೆರೆಯ ವಿಶ್ವಚೇತನ ವಿದ್ಯಾಸಂಸ್ಥೆ.

ಶಿಕ್ಷಣ ತಜ್ಞರಿಗೂ ಮಿಗಿಲಾಗಿ ಪಠ್ಯಕ್ರಮ, ಬೋಧನೆಯಲ್ಲಿ ನೂತನ ಆವಿಷ್ಕಾರ, ಪ್ರಯೋಗ, ಬೋಧನಾ ಕ್ರಮ, ಕಲಿಕಾಸಕ್ತಿ ಬೆಳೆಸುವಲ್ಲಿ ಇಡೀ ಶಿಕ್ಷಣ ಸಂಸ್ಥೆ ತೊಡಗಿಸಿಕೊಂಡಿದೆ.
ಚೇತನ ಎಜ್ಯುಕೇಶನ್‌ ಟ್ರಸ್ಟ್‌ ಸಾವಿರಾರು ವಿದ್ಯಾರ್ಥಿಗಳ ಚೈತನ್ಯ ಧಾಮವಾಗಿದ್ದು, ಹೊಸತನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ|ವಿಜಯಲಕ್ಷ್ಮಿ ವೀರಮಾಚಿನೇನಿ ಅವರು ಇದರ ಪ್ರೇರಣಾಶಕ್ತಿಯಾಗಿದ್ದಾರೆ.

ಇಲ್ಲಿ ಕಲಿತವರು ವೈದ್ಯಕೀಯ, ಇಂಜಿನಿಯರಿಂಗ್‌ ಇತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿಯ ಗುಣಮಟ್ಟದ ಶಿಕ್ಷಣದಿಂದ ದೇಶ-ವಿದೇಶಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಪ್ರತಿ ಕ್ಷೇತ್ರದ ಕುರಿತಾಗಿ ನೀಡಲಾಗುವ ಅತ್ಯುತ್ತಮ ತರಬೇತಿ, ಮಕ್ಕಳು ಜೀವನದ ಗುರಿ ತಲುಪಿಯೇ ತೀರುವಂತೆ ಮಾಡುವ ಉತ್ಕೃಷ್ಟ ಮಟ್ಟದ ಬೋಧಕರು-ಬೋಧಕೇತರ ಸಿಬ್ಬಂದಿ ಇಲ್ಲಿದ್ದಾರೆ.

ರ್‍ಯಾಂಕ್‌..ರ್‍ಯಾಂಕ್‌…
ವಿಶ್ವಚೇತನ ವಿದ್ಯಾನಿಕೇತನ, ವೈಷ್ಣವಿ ಚೇತನಾ ಕಾಲೇಜಿನಲ್ಲಿ ಅತ್ಯುತ್ತಮ ಕಲಿಕಾ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಇದೆ. ಹಾಸ್ಟೆಲ್‌ಗ‌ಳಲ್ಲಿ ಎಲ್ಲ ರೀತಿಯ ಸವಲತ್ತುಗಳಿವೆ. ಹಾಸ್ಟೆಲ್‌ನ ಪ್ರತಿ ಮಗುವಿಗೆ ಮನೆಯ ವಾತಾವರಣವನ್ನೇ ಕಲ್ಪಿಸಿಕೊಡಲಾಗುತ್ತಿದೆ. ಆಡುತ್ತಾ, ಹಾಡುತ್ತಾ, ನಲಿಯುತ್ತಾ ಶಿಕ್ಷಣ ಕಲಿಯುತ್ತಾರೆ. ಹಾಗಾಗಿಯೇ ಚೇತನ ವಿದ್ಯಾಸಂಸ್ಥೆ ಎಂದರೆ ರ್‍ಯಾಂಕ್‌ಗಳ ಗಣಿ.

ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಆರಂಭದಿಂದಲೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶದ ಸಾಧನೆ ಮಾಡುತ್ತಿದೆ. 15 ವರ್ಷಗಳ ಕಾಲ ನಿರಂತರವಾಗಿ ಈ ಸಾಧನೆ ಪುನರಾವರ್ತನೆ ಆಗುತ್ತಿದೆ. ನ್ಯಾಷನಲ್‌ ಟ್ಯಾಲೆಂಟ್‌ ಸರ್ಚ್‌ ಎಕ್ಸಾಮಿನೇಶನ್‌(ಎನ್‌ಟಿಎಸ್‌ಇ)ನಲ್ಲಿ ನಿರಂತರವಾಗಿ ಪ್ರಥಮ ಇಲ್ಲವೇ ದ್ವಿತೀಯ…ಹೀಗೆ ಒಂದಿಲ್ಲೊಂದು ರ್‍ಯಾಂಕ್‌ ಗಳಿಸುತ್ತಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವಿಕ್ಟರ್‌ ಥಾಮಸ್‌, ಪಿ. ಆಕಾಶ್‌ ಎಂಬ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದಿರುವ ಇತಿಹಾಸವೂ ಇದೆ. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರ ವಿದ್ಯಾರ್ಥಿಗಳ ಪ್ರಮಾಣ ಅಗಣಿತ.

ಆಟೋಟದಲ್ಲೂ ಮುಂದು…
ಪಠ್ಯ ಮಾತ್ರವಲ್ಲ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಅದ್ವಿತೀಯ ಸಾಧನೆ ತೋರುವಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸದಾ ಮುಂದು. ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯತೆಯಿಂದ ತೊಡಗಿಸಿಕೊಳ್ಳಬೇಕು ಎಂಬುದು ಬರೀ ಬಾಯಿ ಮಾತುಗಳಾಗಿ ಉಳಿದಿಲ್ಲ. ಕಾರ್ಯರೂಪದಲ್ಲಿವೆ ಎಂಬುದಕ್ಕೆ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್‌, ಥ್ರೋಬಾಲ್‌, ಬ್ಯಾಡ್ಮಿಂಟನ್‌, ಖೋಖೋ ಮುಂತಾದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸದಾ ಮುಂದಿದ್ದಾರೆ. ಇಲ್ಲಿನ ಅನೇಕ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಕ್ರೀಡಾ ಕೋಟಾದಲ್ಲಿ ಶೇ. 50 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ಪ್ರವೇಶ ಪಡೆಯುವಂತಾಗಿರುವುದು ವಿದ್ಯಾಸಂಸ್ಥೆ ಕ್ರೀಡೆ-ಸಾಂಸ್ಕೃತಿಕ ಸ್ಪರ್ಧೆಗಳಿಗೆ ನೀಡುವ ಆದ್ಯತೆಗೆ ಸಾಕ್ಷಿಯಾಗಿದೆ.

ಶಾಲಾ, ಕಾಲೇಜುಗಳು:
1987ರಲ್ಲಿ ಶಿರಮಗೊಂಡನಹಳ್ಳಿ ಸಮೀಪದಲ್ಲಿ 16 ಎಕರೆ ಜಾಗದಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಆರಂಭವಾಗಿದೆ. 1996ರಲ್ಲಿ ವೈಷ್ಣವಿ ಚೇತನ ಪಿಯು ಕಾಲೇಜು, 2010ರಲ್ಲಿ ಸಿಬಿಎಸ್‌ಇ, 2020-21 ರಿಂದ ಹೊಸ ಪಠ್ಯಕ್ರಮ ವಿಧಾನದ ಒಲಂಪಿಯಾಡ್‌ ಸ್ಕೂಲ್‌ ಆರಂಭವಾಗಿದೆ.

ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರಾಥಮಿಕ, ಪ್ರೌಢಶಾಲೆ, ಒಲಂಪಿಯಾಡ್‌ನ‌ಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಸಿಬಿಎಸ್‌ಇ ಎರಡು ಪಠ್ಯಕ್ರಮದಲ್ಲಿ ಬೋಧನೆ ಮಾಡಲಾಗುತ್ತದೆ. ಹಾಸ್ಟೆಲ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೊರಗಡೆಯಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಇದೆ. ಬಾಲಕಿಯರ ವಸತಿಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ, ಕ್ಯಾಮೆರಾ, ವೈದ್ಯಕೀಯ ಸೌಲಭ್ಯ ಇದೆ. ಮಕ್ಕಳು ಅತ್ಯಂತ ಲವಲವಿಕೆಯಿಂದ ಕಲಿಯುವ ವಾತಾವರಣ ಇಲ್ಲಿದೆ. ಡಾ|ವಿಜಯಲಕ್ಷ್ಮಿ ವೀರಮಾಚಿನೇನಿ ಹಾಸ್ಟೆಲ್‌ಗ‌ಳಿಗೆ ಭೇಟಿ ಪ್ರತಿ ವಿದ್ಯಾರ್ಥಿಯ ಕಲಿಕೆಯತ್ತ ಗಮನ ಹರಿಸುವರು. ಅಗತ್ಯ ಸಲಹೆ-ಸೂಚನೆ ನೀಡುವ ಮೂಲಕ ಅವರಲ್ಲಿ ಹೊಸ ಪ್ರೇರಣೆ ನೀಡುವ ಮಾತೃ ಹೃದಯಿ ಇವರಾಗಿದ್ದಾರೆ.

ಯಶಸ್ವಿ ಪ್ರಯೋಗಾರ್ಥ:
ಚೇತನ ವಿದ್ಯಾಸಂಸ್ಥೆ ಬರೀ ಕಲಿಕೆ, ಅಂಕ ಗಳಿಕೆ ದೃಷ್ಟಿಯಿಂದ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಶಿಕ್ಷಣ ಜೀವನದ ದಾರಿದೀಪ ಎಂಬ ಮಾತನ್ನು ಅಕ್ಷರಶಃ ಕಾರ್ಯ ರೂಪಕ್ಕೆ ತರುತ್ತಿದೆ. ವಿದ್ಯಾರ್ಥಿಗಳು ಪ್ರತಿ ವರ್ಷ ದ್ವಿತೀಯ ಪಿಯುಸಿ, ಸಿಇಟಿ, ನೀಟ್‌, ಜೆಇಇ ಮುಂತಾದ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡುವುದನ್ನು ಕಾಣಬಹುದಾಗಿದೆ.
ಪ್ರತಿ ವಿದ್ಯಾರ್ಥಿಯ ಆಸಕ್ತಿ, ದೌರ್ಬಲ್ಯ ಗುರುತಿಸಿ ಆಸಕ್ತಿಕರ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಸಲಾಗುತ್ತದೆ. ಕೆಲವು ವಿಷಯಗಳ ಕಲಿಕೆಯಲ್ಲಿನ ತೊಂದರೆ ಗಮನಿಸಿ, ಅತೀ ಸುಲಭವಾಗಿ ಹೊರ ಬರುವ ಸೂಕ್ತ ಮಾರ್ಗದರ್ಶನ ನೀಡುವುದು ಇಲ್ಲಿನ ವಿಶೇಷ. ತಾವು ಮತ್ತು ತಮ್ಮ ಪೋಷಕರು ಹಾಗೂ ವಿದ್ಯಾಸಂಸ್ಥೆ ನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷೆಗೂ ಮೀರಿ ತಂದುಕೊಡುವ ಸಾಮರ್ಥಯ ಇಲ್ಲಿನ ವಿದ್ಯಾರ್ಥಿಗಳಿಗೆ ಕರಗತ ಮತ್ತು ಕರತಲಾಮಲಕವಾಗಿದೆ.

ಒಲಂಪಿಯಾಡ್‌ ಸ್ಕೂಲ್‌…
ಇತರೆ ಕ್ಷೇತ್ರದ ಮಾದರಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಹೊಸ ಕಲಿಕಾ ಪದ್ಧತಿಯ ಮಾದರಿಯ ಅಗತ್ಯತೆ ಮನಗಂಡ ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಅವರು ಚಟುವಟಿಕೆ ಆಧಾರಿತ ಬೋಧನಾ ಕ್ರಮದ ಸ್ಕೂಲ್‌ ಆರಂಭಿಸಿದರು. ಅದುವೇ ಚೇತನ ಒಲಂಪಿಯಾಡ್‌ ಸ್ಕೂಲ್‌. ಇಂತಹ ಕಲಿಕಾ ವಿಧಾನದ ಏಕೈಕ ಸಂಸ್ಥೆ-ಸ್ಕೂಲ್‌ ಇದಾಗಿದೆ.

ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ಸಮೂಹವನ್ನು ಅಣಿಗೊಳಿಸಲಾಗುತ್ತದೆ. ನೀಟ್‌, ಜೆಇಇ, ನಾಗರಿಕ ಸೇವಾ ಆಯೋಗ, ಕೆವಿಪಿವೈ, ಎನ್‌ಟಿಎಸ್‌ಇ ಮುಂತಾದ ಪರೀಕ್ಷೆಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ನವೀನ ಪಠ್ಯಕ್ರಮದ ಕಲಿಕೆಯ ಪರಿಣಾಮವಾಗಿಯೇ ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಬ್ಬೆರಗಾಗುವ ಸಾಧನೆ ತೋರುವಂತಾಗಿದೆ.

ಒಲಂಪಿಯಾಡ್‌ ಸ್ಕೂಲ್‌ನಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮದೊಂದಿಗೆ 5ರಿಂದ ದ್ವಿತೀಯ ಪಿಯುವರೆಗೆ ಸಂಯೋಜಿತ ಕಾರ್ಯಕ್ರಮವಾಗಿ ಕಲಿಸಲಾಗುತ್ತದೆ. ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಗೆ ಬರುವ ವೇಳೆಗೆ ಪಿಯು ಪಠ್ಯಕ್ರಮ ಅಭ್ಯಾಸ ಮಾಡಿರುತ್ತಾರೆ. ಆಯ್ಕೆಯ ಅವಕಾಶ ವಿದ್ಯಾರ್ಥಿಗಳಿಗೆ ಮುಕ್ತವಾಗಿಡಲಾಗಿದೆ. ಪ್ರತ್ಯೇಕವಾಗಿಯೇ ಫೌಂಡೇಶನ್‌ ತರಗತಿಗಳಲ್ಲಿ ಅತ್ಯಂತ ನೈಪುಣ್ಯತೆಯ ಬೋಧಕ ವರ್ಗವಿದೆ. ದಿನದ ವೇಳಾಪಟ್ಟಿಯಂತೆ ಅಭ್ಯಾಸ, ಬೋಧನೆ ನಡೆಯುತ್ತದೆ. ಪ್ರತಿ ವಾರ ಫೌಂಡೇಶನ್‌ ಮತ್ತು ಸಿಡಿಎಫ್‌(ಪರಿಕಲ್ಪನೆ, ವ್ಯಾಖ್ಯಾನ ಮತ್ತು ಸೂತ್ರ)ನಡೆಸಲಾಗುತ್ತದೆ.

ಪ್ರತಿ ಪರೀಕ್ಷೆ ನಂತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವಿಶ್ಲೇಷಣೆ, ಸಾಧನೆ, ತಪ್ಪುಗಳು, ಸರಿಪಡಿಸಿಕೊಳ್ಳುವ ಬಗೆ ಹೀಗೆ ಪ್ರತಿಯೊಂದೂ ಅಂಶಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಸಿದ್ಧಪಡಿಸಲಾಗುತ್ತದೆ.

ಕಾಲೇಜಿನ ವಿಶೇಷತೆ…
ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಮತ್ತು ಕಾಲೇಜು ಹಲವು ವಿಶೇಷತೆ ಹೊಂದಿದೆ. ಬೇಡಿಕೆ ಇದೆ ಎಂದು ಹೆಚ್ಚು ದಾಖಲಾತಿಗೆ ಅವಕಾಶ ಇಲ್ಲ. ಸೀಮಿತ ದಾಖಲಾತಿ. ಗ್ರಾಮೀಣ ಮತ್ತು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ವಿಶೇಷ ನೈಪುಣ್ಯತೆಯ ಉಪನ್ಯಾಸಕರಿಂದ ನೀಟ್‌, ಜೆಇಇ, ಸಿಇಟಿ ಪರೀಕ್ಷೆಗೆ ಬೋಧನೆ, ಸಂಸ್ಥೆಯಿಂದಲೇ ಅತ್ಯಗತ್ಯ ಸ್ಟಡಿ ಮೆಟೇರಿಯಲ್‌ ಪೂರೈಕೆ, ವಾರಾಂತ್ಯ ಪರೀಕ್ಷೆಗಳು, ಉತ್ತರ ಪತ್ರಿಕೆ ವಿಶ್ಲೇಷಣೆ, ಚರ್ಚೆ, ಸಂಪನ್ಮೂಲ ಶಿಕ್ಷಕರಿಂದ ವಿಶೇಷ ತರಬೇತಿ, ಬೋಧನೆ ವ್ಯವಸ್ಥೆ ಮಾಡಲಾಗುತ್ತದೆ.

ಅಗಣಿತ ದಾಖಲೆ…
ಶಿರಮಗೊಂಡನಹಳ್ಳಿ ಸಮೀಪದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಕಾಲೇಜು ಪಿಯು ಫಲಿತಾಂಶ ದಲ್ಲಿ ಅಗಣಿತ ದಾಖಲೆಯನ್ನೇ ನಿರ್ಮಿಸಿದೆ. 600 ಅಂಕಗಳಿಗೆ 594, 592. 591, 590 ಅಂಕಗಳ ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ನೂತನ ದಾಖಲೆಯನ್ನೇ ಮಾಡಿದ್ದಾರೆ.

ನೀಟ್‌ನಲ್ಲಿ ಇಲ್ಲಿನ ವಿದ್ಯಾರ್ಥಿಗಳು 695, 677, 657, 645, 635, 633, 626, 626, 626, 619, 618, 617, 617, 616, 615, 610, 609, 604, 603, 610, 600 ಅಂಕ ಪಡೆಯುವ ಮೂಲಕ ದಾಖಲೆಗೆ ಕಾರಣವಾಗಿದ್ದಾರೆ.

ಜೆಇಇಯಲ್ಲಿ 99, 99,99, 97, 99, 95, 99, 94, 93, 99, 92, 99, 91, 99, 90, 99, 89, 99, 85 ಪ್ರತಿಶತ ಅಂಕಗಳ ಪಡೆದ ಸಾಧನೆ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರವೂ ವ್ಯಾಪಾರಿ ಕ್ಷೇತ್ರವಾಗುತ್ತಿದೆಎಂಬ ಮಾತುಗಳು ಕೇಳಿ ಬರುತ್ತಿರುವ ಕಾಲಘಟ್ಟದಲ್ಲೂ ಸಮಾಜ ಸೇವಾ ಮನೋಭಾವದೊಂದಿಗೆ ಕೆಲಸ ಮಾಡುತ್ತಿರುವ ಚೇತನ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸುತ್ತಿದೆ. ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿನ ಚೈತನ್ಯವೂ ಆಗುತ್ತಿದೆ.

ಸಂಪರ್ಕದ ಮಾಹಿತಿ…
ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್‌ ಸ್ಕೂಲ್‌ ಮತ್ತು ಕಾಲೇಜು, ಶಿರಮಗೊಂಡನಹಳ್ಳಿ ಸಮೀಪ.
ಶಾಲೆ: 9900052370, 99005-59104/05, 9900052517
ಶ್ರೀ ವೈಷ್ಣವಿ ಚೇತನಾಸ್‌ ವಿದ್ಯಾನಿಕೇತನ ಪಿಯು ಕಾಲೇಜು (ಆಂಜನೇಯ ಬಡಾವಣೆ)
9900559101, 7022004081
ಚೇತನ ಒಲಂಪಿಯಾಡ್‌ ಸ್ಕೂಲ್‌
9900071206 , 7022982907

ಹಿಂದಿದೆ ರೋಚಕ ಕಥೆ…
ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯನ್ನು ಶಿಕ್ಷಣ ನಗರಿಯನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಪ್ರತಿಷ್ಠಿತ ಶಾಲಾ-ಕಾಲೇಜು ಆರಂಭಿಸಿರುವ ಹಿಂದೆ ರೋಚಕ ಮತ್ತು ಸ್ಫೂರ್ತಿದಾಯಕ ಕಥೆಯೇ ಇದೆ.
ಆಂಧ್ರಪ್ರದೇಶದ ಘಂಟಸಾಲ ಮೂಲದ ವಿಜಯಲಕ್ಷ್ಮಿ ವೀರಮಾಚಿನೇನಿ ದೂರದ ದಾವಣಗೆರೆಗೆ ಬಂದರು. ದಾವಣಗೆರೆಯ ಶಾಲೆಯೊಂದರಲ್ಲಿ ಮಗಳಿಗೆ ಪ್ರವೇಶ ಸಿಗದ ನೋವು ಅನುಭವಿಸಿದರು. ತಮ್ಮಂತೆ ಇತರೆ ಯಾವುದೇ ತಾಯಿ-ಮಕ್ಕಳಿಗೆ ಶಾಲೆಗೆ ಸೇರಿಸುವಾಗ ನೋವು ಅನುಭವಿಸಬಾರದು ಎಂಬ ಕಳಕಳಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ವಿಜಯಲಕ್ಷ್ಮಿ ವೀರಮಾಚಿನೇನಿ ಅಗಾಧ ಕರ್ತೃತ್ವ ಶಕ್ತಿ, ಸಾಧನೆಯ ಹಂಬಲ, ಮಕ್ಕಳು ಮತ್ತು ಶಿಕ್ಷಣದೆಡೆಗಿನ ಪ್ರೀತಿಯಿಂದ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಫಲವಾಗಿ ಚೇತನಾ ವಿದ್ಯಾಸಂಸ್ಥೆ ಈಗ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ನಿಂತಿದೆ.

ಬುದ್ಧಿವಂತ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡುವುದು ಅಷ್ಟೇನು ಕಷ್ಟ ಅಲ್ಲ. ಆದರೆ ಕಲಿಕೆಯಲ್ಲಿ ಸಾಧಾರಣ ಇರುವ ವಿದ್ಯಾರ್ಥಿಗಳನ್ನು ಅಸಾಧಾರಣ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಅತೀ ದೊಡ್ಡ ಸವಾಲುಗಳನ್ನು ಅತಿ ಸುಲಭವಾಗಿ, ಸಮರ್ಥ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಚೇತನಾ ವಿದ್ಯಾಸಂಸ್ಥೆ.

– ರಾ. ರವಿಬಾಬು

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

BYV-Modi

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.