Vishwachetna: ವಿದ್ಯಾರ್ಥಿ ಬದುಕಿನ ದಿವ್ಯಚೇತನ
ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಸಂಸ್ಥೆಯ ಹಿಂದಿನ ರೂವಾರಿ
Team Udayavani, Apr 21, 2024, 2:53 PM IST
ಶಿಕ್ಷಣವೆಂದರೆ ಬದುಕಿನ ದಾರಿದೀಪ ಎಂಬ ಮಾತಿನಂತೆ ಹಲವು ದಶಕಗಳ ಕಾಲದಿಂದ ಶಿಕ್ಷಣ ನಗರಿ ದಾವಣಗೆರೆಯಲ್ಲಿ ಅದ್ವಿತೀಯ ಸಾಧನೆಯ ಸಾರ್ಥಕ ಹೆಜ್ಜೆಯಿಡುತ್ತಿರುವ ಶಿರಮಗೊಂಡನಹಳ್ಳಿ ಸಮೀಪದ ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜು ಲಕ್ಷಾಂತರ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ವೃತ್ತಿ ಬದುಕಿನ ನಿತ್ಯಚೇತನವಾಗಿದೆ.
ತರಗತಿಗಳಲ್ಲಿ ಪಠ್ಯಗಳಿಗೆ ಮಾತ್ರ ಸೀಮಿತ ವಾಗದೆ ಬದುಕಿನ ಮಾರ್ಗದರ್ಶಿಯಾಗಿ ಲಕ್ಷಾಂತರ ಪ್ರತಿಭಾವಂತರನ್ನು ಸಮಾಜಕ್ಕೆ ನೀಡುತ್ತಿರುವ ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜಿನ ಸಾಧನೆಯೇ ಒಂದು ಯಶೋಗಾಥೆ.
ರಾಷ್ಟ್ರಕವಿ ಕುವೆಂಪು ಅವರ ಓ ನನ್ನ ಚೇತನ ಆಗು ಅನಿಕೇತನ ಎಂಬಂತೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನ ಸಂಪಾದನೆಯಲ್ಲಿ ಮಾತ್ರವಲ್ಲ ಮಸ್ತಕದ ಜ್ಞಾನವಂತರು. ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತಿನಂತೆ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಸಾಧನೆ ಮಾಡಿ, ಉನ್ನತ ಹುದ್ದೆಗೇರಿದ ಆಚೆಯೂ ಇರುವ ಬದುಕನ್ನು ಇಲ್ಲಿ ಕಟ್ಟಿಕೊಡಲಾಗುತ್ತಿದೆ.
ಸಾಧಾರಣ ವಿದ್ಯಾರ್ಥಿಯೂ ಅಸಾಧಾರಣ ವಿದ್ಯಾರ್ಥಿಯಾಗಿ ಹೊರ ಹೊಮ್ಮುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆಯ ಹಿಂದಿನ ರೂವಾರಿ, ಶಿಕ್ಷಣ ಪ್ರೇಮಿ, ಹೊಸ ಆಲೋಚನೆ, ಯೋಜನೆಗಳ ಸಾಕಾರ ಮೂರ್ತಿ ಎಂದರೆ ಡಾ| ವಿಜಯಲಕ್ಷ್ಮೀ ವೀರಮಾಚಿನೇನಿ.
ತಮ್ಮ ಮಕ್ಕಳಂತೆ ಇತರೆ ಮಕ್ಕಳು ಶಿಕ್ಷಣ ಪಡೆಯುವುದಕ್ಕಾಗಿಯೇ ಕಷ್ಟ ಪಡಬಾರದು. ಓದು, ಬರಹ ಬಾರದ ಪೋಷಕರು ಮಕ್ಕಳ ಪ್ರವೇಶಾತಿಗಾಗಿ ಸಂಕಷ್ಟಕ್ಕೆ ಒಳಗಾಗಬಾರದು. ಮಕ್ಕಳು ಶಿಕ್ಷಣವಂತರಾಗಿ, ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರುವುದನ್ನೇ ಜೀವನದ ಕನಸನ್ನಾಗಿಸಿಕೊಂಡಿರುವ ಸಹಸ್ರಾರು ಪೋಷಕರ ಆಶಯ, ಆಸೆ, ಗುರಿ ಈಡೇರುವಂತಾಗಬೇಕು ಎಂಬ ಸದಾಶಯದೊಂದಿಗೆ ಪುಟ್ಟದ್ದಾಗಿ ಆರಂಭಿಸಿದ ಸಂಸ್ಥೆ ಇಂದು ದಾವಣಗೆರೆ, ಕರ್ನಾಟಕ, ದೇಶ ಮಾತ್ರವಲ್ಲ ವಿದೇಶದಲ್ಲೂ ಮನೆ ಮಾತಾಗಿರುವ ಸಂಸ್ಥೆಯನ್ನಾಗಿಸಿದ ಕೀರ್ತಿ ಅಕ್ಷರ ಪ್ರೇಮಿ ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಅವರಿಗೆ ಸಲ್ಲುತ್ತದೆ.
ಮಕ್ಕಳು ಏನೋ ಓದಿ, ಎಲ್ಲಿಯೋ ಕೆಲಸ ಹಿಡಿದು, ತಮ್ಮ ಜೀವನ ನಿರ್ವಹಣೆ ಮಾಡುವುದು ಸಾಮಾನ್ಯ. ಆದರೆ ಕಲಿತ ವಿದ್ಯಾರ್ಥಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಕಲಿತ ವಿದ್ಯೆಯಿಂದ ತನ್ನ ಕುಟುಂಬದ ಜತೆ ಜತೆಗೆ ಸಮಾಜದ ಶ್ರೇಯೋಭಿವೃದ್ಧಿಗೂ ಕಾರಣಕರ್ತರಾಗಬೇಕು ಎಂಬ ಮಹತ್ತರ ಉದ್ದೇಶದೊಂದಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತದೆ.
ಸಮಾಜಕ್ಕೆ ಸದಾ ಕಾಲ ಬೆಳಕಾಗುವ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವ, ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಲು ಮನಸ್ಸಿಗೆ ಸೂಕ್ತ ತರಬೇತಿ ನೀಡುವ, ಜ್ಞಾನ, ನೈತಿಕತೆ ಬೆಳೆಸುವ ಮೂಲಕ ಹೊಸ ಚೈತನ್ಯದ ವಿದ್ಯಾರ್ಥಿ ಸಮೂಹ ನೀಡುವ ಸೇವೆಯಲ್ಲಿ ತೊಡಗಿರುವ ದಾವಣಗೆರೆಯ ಚೇತನ ವಿದ್ಯಾಸಂಸ್ಥೆಯು ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆ ಮಾಡುತ್ತ ಸಾಗಿದೆ.
ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳು ಕಷ್ಟ ಎಂದೇ ಭಾವಿಸಿರುವ ಸಾಮಾನ್ಯ ವಿದ್ಯಾರ್ಥಿಯಲ್ಲಿನ ಸಾಮರ್ಥ್ಯ ಗುರುತಿಸಿ ಕಷ್ಟ ಎನ್ನುವ ವಿಷಯಗಳನ್ನೇ ಇಷ್ಟವಾಗುವಂತೆ ಮಾಡಿ, ಅದರಲ್ಲೇ ನಿರೀಕ್ಷೆಗೂ ಮೀರಿದ ಅಂಕ ಗಳಿಸುವಂತೆ ಮಾಡುವ ಮೂಲಕ ಅಸಾಮಾನ್ಯ ವಿದ್ಯಾರ್ಥಿಯಾಗಿ ರೂಪಿಸುವಲ್ಲಿ ಚೇತನ ವಿದ್ಯಾಸಂಸ್ಥೆಯಲ್ಲಿ ಆಡಳಿತ ಮಂಡಳಿ ಜತೆಗೆ ಬೆನ್ನಲುಬಾಗಿ ಬೋಧಕ, ಬೋಧಕೇತರ ಸಿಬ್ಬಂದಿಗಳ ಪಾತ್ರ ಗಮನಾರ್ಹವಾಗಿದೆ.
ಇಂದಿನ ಕಾಲಮಾನಕ್ಕೆ ತಕ್ಕಂತೆ ಅಡ್ವಾನ್ಸ್ ಶಿಕ್ಷಣ
ಇಂದಿನ ತಂತ್ರಜ್ಞಾನ, ಸ್ಪರ್ಧಾತ್ಮಕ ಯುಗಕ್ಕೆ ಮಾತ್ರವಲ್ಲ ಮುಂದಿನ ದಿನಮಾನಗಳನ್ನೂ ಪರಿಗಣಿಸಿಯೇ ಅಡ್ವಾನ್ಸ್ ಶಿಕ್ಷಣ ನೀಡುವಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ. ಈಗಿನ ಮಕ್ಕಳ ಬುದ್ಧಿಮತ್ತೆ, ಗ್ರಹಿಕೆ, ಕಲಿಕಾಸಕ್ತಿ ಸಾಕಷ್ಟು ಅಡ್ವಾನ್ಸ್ ಎಂಬ ಮಾತಿದೆ. ಅಂತಹ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಅವರು ಸಾಕಷ್ಟು ಮುಂದಾಲೋಚನೆಯ ವಿಷಯಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವಿದೇಶ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಆಕರ್ಷಣೀಯ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ಖುಷಿ ಪಡುವುದು ಇದ್ದೇ ಇರುತ್ತದೆ. ಆದರೆ ಡಾ| ವಿಜಯಲಕ್ಷ್ಮೀ ವೀರಮಾಚಿನೇನಿ ಅವರು ಯಾವುದೇ ದೇಶಕ್ಕೆ ಹೋಗಲಿ ಪ್ರವಾಸಿ ತಾಣಗಳ ವೀಕ್ಷಣೆ ಜತೆಗೆ ಶಾಲಾ-ಕಾಲೇಜುಗಳಿಗೆ ಕಡ್ಡಾಯವಾಗಿ ಭೇಟಿ ನೀಡುವುದು ಮಾತ್ರವಲ್ಲ ಅಲ್ಲಿನ ಮಕ್ಕಳ ಕಲಿಕೆ, ಕಲಿಸುವ ವಿಧಾನ, ಶಾಲಾ ವಾತಾವರಣ, ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಸ್ಪರ ಸಂಬಂಧ ಹೀಗೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ದಾವಣಗೆರೆಗೆ ಬಂದ ಮೇಲೆ ತಾವು ನೋಡಿದ ಶಾಲಾ-ಕಾಲೇಜುಗಳ ಅನೇಕ ವಿಚಾರಗಳನ್ನು ಅಳವಡಿಸುತ್ತಾರೆ. ಶಿಕ್ಷಣ, ಮಕ್ಕಳ ಕಲಿಕೆ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ. ಅದರ ಪ್ರತೀಕವಾಗಿಯೇ ಸಂಸ್ಥೆ ಹೆಮ್ಮರವಾಗಿ ರೂಪುಗೊಳ್ಳುತ್ತಿದೆ.
ಸಾವಿರಾರು ವಿದ್ಯಾರ್ಥಿಗಳ ಚೈತನ್ಯ ಧಾಮ
ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಅವರ ಕನಸಾದ ಚೇತನ ವಿದ್ಯಾಸಂಸ್ಥೆಯಡಿ ದಾವಣಗೆರೆ ಹೊರ ವಲಯದ ಶಿರಮಗೊಂಡನಹಳ್ಳಿ ಬಳಿ ಇರುವ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ, ಆಂಜನೇಯ ಬಡಾವಣೆಯಲ್ಲಿರುವ ವಿದ್ಯಾಚೇತನ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಚೈತನ್ಯ ಧಾಮವಾಗಿದೆ. ಚೇತನ ವಿದ್ಯಾಸಂಸ್ಥೆಯ ಅಸಂಖ್ಯಾತ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಇತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ದೇಶ-ವಿದೇಶಗಳಲ್ಲೂ ಮನೆ ಮಾತಾಗಿದ್ದಾರೆ. ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಆರಂಭಿಕ ಹಂತದಿಂದಲೇ ಮಕ್ಕಳಲ್ಲಿ ಹೊಸ ಆಲೋಚನೆಯ ಲಹರಿ ಬೆಳೆಸಲಾಗುತ್ತದೆ. ಏನನ್ನಾದರೂ ಸಾಧಿಸಿಯೇ ತೀರಬೇಕು ಎಂಬ ಜೀವನದ ಗುರಿ ಸಾಕಾರಕ್ಕೆ ಅತ್ಯಗತ್ಯವಾದ ಶೈಕ್ಷಣಿಕ ವಾತಾವರಣವನ್ನು ಗುಣಮಟ್ಟದ ಶಿಕ್ಷಣದೊಂದಿಗೆ ನಿರ್ಮಿಸಲಾಗುತ್ತದೆ. ಅತ್ಯುತ್ತಮ ತರಬೇತಿ, ಮಕ್ಕಳು ಜೀವನದ ಗುರಿ ತಲುಪಿಯೇ ತೀರುವಂತೆ ಮಾಡುವ ಉತ್ಕೃಷ್ಟ ಬೋಧನೆಯ ಪ್ರತೀಕವಾದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಕನಸಿನ ಸಾಕಾರಮೂರ್ತಿಗಳಾಗಿದ್ದಾರೆ.
ಹಿಂದಿನ ವರ್ಷದ ಸಾಧನೆ :
ನೀಟ್ ಪರೀಕ್ಷೆಯಲ್ಲಿ ವಿಶ್ವಚೇತನ ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 2021ರಲ್ಲಿ ಉತ್ಸಲ ಚೌಧರಿ ಎಂಬ ವಿದ್ಯಾರ್ಥಿನಿ 720ಕ್ಕೆ 695 ಅಂಕಗಳೊಂದಿಗೆ ರಾಜ್ಯದಲ್ಲೇ 6ನೇ ರ್‍ಯಾಂಕ್ ಪಡೆದಿದ್ದಾರೆ. 2022 ರಲ್ಲಿ ಎಂ. ಶ್ರೀಬಾರುಣಿ ಎಂಬ ವಿದ್ಯಾರ್ಥಿನಿ 720ಕ್ಕೆ 705 ಅಂಕ ಗಳಿಸಿದ್ದಲ್ಲದೆ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದ ಇತಿಹಾಸ ಇದೆ. 2023ರಲ್ಲಿ ಎಸ್.ಬಿ.ಮಹಂತ್ ರಕ್ಷ ಎಂಬ ವಿದ್ಯಾರ್ಥಿ 720ಕ್ಕೆ 655 ಅಂಕ ಪಡೆದು ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ.
ಫಲಿತಾಂಶದಲ್ಲಿ ಅಗಣಿತ ಸಾಧನೆ:
ವಿದ್ಯಾರ್ಥಿಗಳು ಪ್ರತಿ ವರ್ಷ ದ್ವಿತೀಯ ಪಿಯುಸಿ, ಸಿಇಟಿ, ನೀಟ್, ಜೆಇಇ ಮುಂತಾದ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡುವುದನ್ನು ಕಾಣಬಹುದಾಗಿದೆ. ಪಿಯುಸಿ, ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅಮೋಘ. ಪ್ರತಿ ವಿದ್ಯಾರ್ಥಿಯ ಆಸಕ್ತಿ ಮತ್ತು ದೌರ್ಬಲ್ಯ ಗುರುತಿಸಲಾಗುತ್ತದೆ. ಆಸಕ್ತಿ ಇರುವ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಸಲಾಗುತ್ತದೆ. ಕೆಲ ವಿಷಯಗಳ ಕಲಿಕೆಯಲ್ಲಿನ ತೊಂದರೆ ಗಮನಿಸಿ ಅಂತಹ ತೊಂದರೆಯಿಂದ ಅತೀ ಸುಲಭವಾಗಿ ಹೊರ ಬರುವ ಸೂಕ್ತ ಮಾರ್ಗದರ್ಶನ, ಸಹಕಾರ ನೀಡುವುದು ವಿಶೇಷವಾಗಿದೆ. ಶಿರಮಗೊಂಡನಹಳ್ಳಿ ಸಮೀಪದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಕಾಲೇಜು ಪಿಯು ಫಲಿತಾಂಶದಲ್ಲಿ ಅಗಣಿತ ದಾಖಲೆಯನ್ನೇ ನಿರ್ಮಿಸಿದೆ ಮತ್ತು ನಿರ್ಮಿಸುತ್ತಿದೆ. 600 ಅಂಕಗಳಿಗೆ 594, 592, 591, 590 ಅಂಕಗಳ ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ನೂತನ ದಾಖಲೆಯನ್ನೇ ನಿರ್ಮಿಸಿದ್ದಾರೆ. ನೀಟ್‌ನಲ್ಲಿ ಇಲ್ಲಿನ ವಿದ್ಯಾರ್ಥಿಗಳು 695, 677, 657, 645, 635, 633, 626, 626, 626, 619, 618, 617, 617, 616, 615, 610, 609, 604, 603, 610, 600 ಅಂಕ ಪಡೆಯುವ ಮೂಲಕ ದಾಖಲೆಯನ್ನು ಮಾಡಿದ್ದಾರೆ. ಜೆಇಇಯಲ್ಲೂ 99, 99, 99, 97, 99, 95, 99, 94, 93, 99, 92, 99, 91, 99, 90, 99, 89, 99, 85 ಪ್ರತಿಶತ ಅಂಕಗಳ ಪಡೆದು ಸಾಧನೆ ಮಾಡಿದ್ದಾರೆ.
ರ್‍ಯಾಂಕ್ ಮಾತ್ರವಲ್ಲ ಕ್ರಿಯಾಶೀಲತೆ, ಸೃಜನಶೀಲತೆಗೆ ಒತ್ತು
ಪಠ್ಯದಷ್ಟೇ ಪಠ್ಯೇತರ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಪಠ್ಯಕ್ಕೆ ನೀಡಿರುವಷ್ಟೇ ಮಹತ್ವವನ್ನು ಚೇತನ ವಿದ್ಯಾಸಂಸ್ಥೆ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ನೀಡುತ್ತಿದೆ. ಹಾಗಾಗಿಯೇ ಇಲ್ಲಿನ ವಿದ್ಯಾರ್ಥಿಗಳು ರ್‍ಯಾಂಕ್ ಮಾತ್ರವಲ್ಲ ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ. ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯತೆಯಿಂದ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಖೋ ಖೋ ಮುಂತಾದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ರೀಡಾ ಕೋಟಾದಲ್ಲಿ ಶೇ.50 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ಪ್ರವೇಶ ಪಡೆಯುವಂತಾಗಿರುವುದು ವಿದ್ಯಾಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ನೀಡುವ ಆದ್ಯತೆಗೆ ಸಾಕ್ಷಿಯಾಗಿದೆ. ಬುದ್ಧಿವಂತ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡುವುದು ಅಷ್ಟೇನು ಕಷ್ಟ ಅಲ್ಲ. ಆದರೆ ಕಲಿಕೆಯಲ್ಲಿ ಸಾಧಾರಣ ಇರುವ ವಿದ್ಯಾರ್ಥಿಗಳನ್ನು ಅಸಾಧಾರಣ ವಿದ್ಯಾರ್ಥಿಗಳನ್ನಾಗಿ ರೂಪಿಸಲಾಗುತ್ತಿದೆ. ಅತೀ ದೊಡ್ಡ ಸವಾಲುಗಳನ್ನು ಅತಿ ಸುಲಭವಾಗಿ, ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಚೇತನಾ ವಿದ್ಯಾಸಂಸ್ಥೆ.
ವಿದ್ಯಾಸಂಸ್ಥೆಯ ನೋಟ:
1987ರಲ್ಲಿ ಶಿರಮಗೊಂಡನಹಳ್ಳಿ ಸಮೀಪದಲ್ಲಿ 16 ಎಕರೆ ಜಾಗದಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಆರಂಭವಾಗಿದೆ. 1996ರಲ್ಲಿ ವೈಷ್ಣವಿ ಚೇತನ ಪಿಯು ಕಾಲೇಜು, 2010ರಲ್ಲಿ ಸಿಬಿಎಸ್‌ಇ, 2020-21 ರಿಂದ ಹೊಸ ಪಠ್ಯಕ್ರಮ ವಿಧಾನದ ಒಲಂಪಿಯಾಡ್ ಸ್ಕೂಲ್ ಆರಂಭವಾಗಿದೆ. ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರಾಥಮಿಕ, ಪ್ರೌಢಶಾಲೆ, ಒಲಂಪಿಯಾಡ್‌ನಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಸಿಬಿಎಸ್‌ಇ ಎರಡು ಪಠ್ಯಕ್ರಮದಲ್ಲಿ ಬೋಧನೆ ಮಾಡಲಾಗುತ್ತದೆ. ಹಾಸ್ಟೆಲ್‌ನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೊರಗಡೆಯಿಂದ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ಬಾಲಕಿಯರ ವಸತಿ ಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ, ವೈದ್ಯಕೀಯ ಸೌಲಭ್ಯ ಇದೆ. ಮಕ್ಕಳು ಅತ್ಯಂತ ಲವಲವಿಕೆಯಿಂದ ಕಲಿಯುವ ವಾತಾವರಣ ಇಲ್ಲಿದೆ. ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪ್ರತಿ ವಿದ್ಯಾರ್ಥಿಯ ಕಲಿಕೆಯ ಬಗ್ಗೆ ಗಮನ ಹರಿಸುತ್ತಾರೆ. ಅಗತ್ಯ ಸಲಹೆ, ಸೂಚನೆ ನೀಡುವ ಮೂಲಕ ಅವರಲ್ಲಿ ಹೊಸ ಪ್ರೇರಣೆ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಸಾಧನೆಯ ಗುರುವಾಗಿದ್ದಾರೆ.
ಈ ವರ್ಷದ ಸಾಧನೆ:
ದಾವಣಗೆರೆ ನಗರದ ಪ್ರತಿಷ್ಠಿತ ಕಾಲೇಜುಗಳಾದ ವಿದ್ಯಾಚೇತನ ಮತ್ತು ವಿಶ್ವಚೇತನ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜುಗಳಿಗೆ ಮತ್ತೂಮ್ಮೆ ಈ ವರ್ಷದ ದ್ವಿತೀಯ ಪಿಯುಸಿಯಲ್ಲಿ ಅದ್ವಿತೀಯವಾದ ಫಲಿತಾಂಶ ದಾಖಲಾಗಿದೆ. ವಿಶ್ವಚೇತನ ವಿದ್ಯಾನಿಕೇತನ ಕಾಲೇಜು 100ಕ್ಕೆ 100 ಫಲಿತಾಂಶ ಪಡೆದಿದೆ. ಸೃಷ್ಟಿ ಬಿ. ಕೊಳಾಳ್ 600ಕ್ಕೆ 592(ಶೇ.98.67) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಚ್.ಎಸ್. ನವೀನ್ 589(ಶೇ.98.17), ಪಿ.ಜಿ. ಕವನ 588(ಶೇ.98), ಕೆ.ಎಸ್. ರೋಹನ್ 586(ಶೇ.97.67), ಎಸ್. ಅಕ್ಷತಾ 586(ಶೇ.97.67), ಎಂ.ಎಸ್. ಧನುಷ್ 586(ಶೇ.97.67) ಉತ್ತಮ ಸಾಧನೆ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳು ವಿಷಯವಾರು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಶೇ.80 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ. ಅನೇಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿ
ಶಿಕ್ಷಣ ಕ್ಷೇತ್ರದಲ್ಲೂ ಹೊಸ ಕಲಿಕಾ ಪದ್ಧತಿಯ ಮಾದರಿಯ ಅಗತ್ಯತೆ ಮನಗಂಡ ಡಾ| ವಿಜಯಲಕ್ಷ್ಮೀ ವೀರಮಾಚಿನೇನಿ ಅವರು ಚಟುವಟಿಕೆ ಆಧಾರಿತ ಬೋಧನಾ ಕ್ರಮದ ಸ್ಕೂಲ್ ಆರಂಭಿಸಿದರು ಅದುವೇ ಚೇತನಾ ಒಲಂಪಿಯಾಡ್ ಸ್ಕೂಲ್. ಒಲಂಪಿಯಾಡ್ ವಿಧಾನದ ಏಕೈಕ ಸಂಸ್ಥೆಯಾಗಿದೆ. ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ಸಮೂಹವನ್ನು ಅಣಿಗೊಳಿಸಲಾಗುತ್ತದೆ. ನೀಟ್, ಜೆಇಇ, ನಾಗರಿಕ ಸೇವಾ ಆಯೋಗ, ಎನ್‌ಟಿಎಸ್‌ಇ ಮುಂತಾದ ಪರೀಕ್ಷೆಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ನವೀನ ಪಠ್ಯಕ್ರಮದ ಕಲಿಕೆಯ ಪರಿಣಾಮವಾಗಿ ಇಲ್ಲಿನ ವಿದ್ಯಾಚರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಬ್ಬೆರಗಾಗುವ ಸಾಧನೆ ತೋರುವಂತಾಗಿದೆ. ಒಲಂಪಿಯಾಡ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮದೊಂದಿಗೆ 5ರಿಂದ ದ್ವಿತೀಯ ಪಿಯುವರೆಗೆ ಸಂಯೋಜಿತ ಕಾರ್ಯಕ್ರಮವಾಗಿ ಕಲಿಸಲಾಗುತ್ತದೆ. ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಗೆ ಬರುವ ವೇಳೆಗೆ ಪಿಯು ಪಠ್ಯಕ್ರಮ ಅಭ್ಯಾಸ ಮಾಡಿರುತ್ತಾರೆ. ಆಯ್ಕೆಯ ಅವಕಾಶ ವಿದ್ಯಾರ್ಥಿಗಳಿಗೆ ಮುಕ್ತವಾಗಿಡಲಾಗಿದೆ. ಪ್ರತ್ಯೇಕವಾಗಿಯೇ ಫೌಂಡೇಶನ್ ತರಗತಿಗಳಲ್ಲಿ ಅತ್ಯಂತ ನೈಪುಣ್ಯತೆಯ ಬೋಧಕ ವರ್ಗವಿದೆ. ದಿನದ ವೇಳಾಪಟ್ಟಿಯಂತೆ ಅಭ್ಯಾಸ, ಬೋಧನೆ ನಡೆಯುತ್ತದೆ. ಪ್ರತಿ ವಾರ ಫೌಂಡೇಶನ್ ಮತ್ತು ಸಿಡಿಎಫ್(ಪರಿಕಲ್ಪನೆ, ವ್ಯಾಖ್ಯಾನ ಮತ್ತು ಸೂತ್ರ) ನಡೆಸಲಾಗುತ್ತದೆ. ಪ್ರತಿ ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವಿಶ್ಲೇಷಣೆ, ಸಾಧನೆ, ತಪ್ಪುಗಳು, ಸರಿಪಡಿಸಿಕೊಳ್ಳುವ ಬಗೆ ಹೀಗೆ
ಪ್ರತಿಯೊಂದು ಅಂಶಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸುವ ಮೂಲಕ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಸಿದ್ಧಪಡಿಸಲಾಗುತ್ತದೆ.
ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ ಇಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆ
ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಪೋಷಕರು ಶೈಕ್ಷಣಿಕ ಸಾಧನೆಯ ಬಗೆಗಿನ ಕನಸು, ಆಸೆಗಳನ್ನು ಈಡೇರಿಸುವಲ್ಲಿ ವಿದ್ಯಾಸಂಸ್ಥೆ ಅತ್ಯಂತ ಸಮರ್ಥನೀಯ ಪಾತ್ರ ನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಕಲಿತವರ ಸಾಧನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ತಮ್ಮ ಮಕ್ಕಳ ಸಾಧನೆ ಪೋಷಕರ ಸಂತಸಕ್ಕೆ ಕಾರಣವಾಗುವಂತಿರುತ್ತದೆ. ಬೇಸಿಕ್‌ನಿಂದ ದ್ವಿತೀಯ ಪಿಯು ನಂತರದ ಜೆಇಇ, ನೀಟ್, ಸಿಇಟಿ ಒಳಗೊಂಡಂತೆ ಹಲವಾರು ವೃತ್ತಿ ಪರ ಕೋರ್ಸ್ ಗಳ ಪ್ರವೇಶ ಪಡೆಯುವವರೆಗೆ ಮಕ್ಕಳನ್ನು ರೂಪಿಸಲಾಗುತ್ತದೆ. ಪ್ರತಿ ವರ್ಷ ಸಂಸ್ಥೆಯ ಮಕ್ಕಳ ಸಾಧನೆ ಗಳು ಜ್ವಲಂತ ನಿದರ್ಶನವಾಗುತ್ತ ಸಾಗುತ್ತವೆ. ಎಲ್ಲರೂ ಅಚ್ಚರಿಯಾಗುವಂತಹ ಸಾಧನೆಯನ್ನು ಮಾಡಿ, ಸಮಾಜದಲ್ಲಿ ಉನ್ನತ ಹಂತಕ್ಕೇರಿರುವ ಅದ್ವಿತೀಯ ಸಾಧಕರ ದಂಡೇ ಇದೆ. ವಿದ್ಯಾಸಂಸ್ಥೆಯ ಅತೀ ಗಮನಾರ್ಹ ಮತ್ತು ವಿಶೇಷತೆ ಎಂದರೆ ಶಿಕ್ಷಣ ತಜ್ಞರಿಗೂ ಮಿಗಿಲಾದ ಪಠ್ಯಕ್ರಮ ರೂಪಿಸುವ ಜತೆಗೆ ಅತ್ಯಂತ ಸರಳ ಮಾದರಿಯಲ್ಲಿ ಸುಲಭವಾಗಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವುದು. ಹಾಗಾಗಿಯೇ ಕಬ್ಬಿಣದ ಕಡಲೆ ಎನ್ನಲಾಗುವ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದ ವಿಷಯಗಳು ಮಕ್ಕಳಿಗೆ ಬಲು ಸುಲಭ. ಅದರ ಹಿಂದಿರುವ ಕಾರಣ ಬೋಧನೆಯಲ್ಲಿ ನೂತನ ಆವಿಷ್ಕಾರ, ಪ್ರಯೋಗ, ಬೋಧನಾ ಕ್ರಮ, ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಬೆಳೆಸುವಲ್ಲಿನ ಹೊಸತನ.
ಸಂಪರ್ಕ ಮಾಹಿತಿ…
ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಕಾಲೇಜು 9900052370
7022982906
ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಸ್ಕೂಲ್
9900052517 9900559102
ವಿದ್ಯಾಚೇತನ ಪಿಯು ಕಾಲೇಜು
(ಆಂಜನೇಯ ಬಡಾವಣೆ)
7019009046
9900052362
ಚೇತನ ಒಲಂಪಿಯಾಡ್ ಸ್ಕೂಲ್
(ಆಂಜನೇಯ ಬಡಾವಣೆ)
9900071206 (ಪ್ರೈಮರಿ)
9900559106 (ಹೈಸ್ಕೂಲ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.