ಮಹಿಳಾ ನಿಲಯಕ್ಕೆ ಹುನಗುಂದ ಭೇಟಿ
Team Udayavani, Jun 2, 2017, 1:29 PM IST
ದಾವಣಗೆರೆ: ನಿರಾಶ್ರಿತ ಯುವತಿಯರ ಮದುವೆಮಾಡುವ ಬದಲು, ಅವರಿಗೆ ಸ್ವಂತ ಉದ್ಯೋಗ ಕೊಡಿಸಿ, ಸ್ವಾವಲಂಬಿ ಮಾಡುವತ್ತ ಗಮನ ಹರಿಸಿ ಎಂದು ರಾಜ್ಯ ಮಾನವ ಹಕ್ಕು ಆಯೋಗ ಸದಸ್ಯ ಸಿ.ಜಿ. ಹುನಗುಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಶ್ರೀರಾಮ ಬಡಾವಣೆಯ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿದ್ದ ಅವರು, ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ ಯುವತಿಯರನ್ನು ಮದುವೆ ಮಾಡುವುದೊಂದೇ ಜವಬ್ದಾರಿ ಅಂದುಕೊಳ್ಳಬೇಡಿ. ಯುವತಿಯರು ವಯಸ್ಕರಾದ ನಂತರ ಅವರಿಗೆ ಸ್ವಂತ ಉದ್ಯೋಗ ಹೊಂದಿ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವಾಗಿ.
ಆ ಮೂಲಕ ಇತರೆಯವರಿಗೆ ನಿಲಯಕ್ಕೆ ಬರಲು ಅವಕಾಶ ಕಲ್ಪಿಸಿಕೊಡಿ ಎಂದರು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದು ದೊಡ್ಡ ಕೆಲಸವಲ್ಲ. ಅದರೊಟ್ಟಿಗೆ ಸ್ವಂತ ಕಾಲ ಮೇಲೆ ನಿಲ್ಲುವಂತಹ ಉದ್ಯೋಗ, ಕುಶಲ ಕಲೆಗಳ ತರಭೇತಿ ನೀಡಬೇಕು ಅದು ನಿಜವಾದ ಪುನರ್ವಸತಿಯಾಗುತ್ತದೆ.
ಇಲ್ಲಿಯವರೆಗೆ ಮಾಡಿದ್ದನ್ನ ಬಿಡಿ. ಮುಂದೆ ಅವರನ್ನು ಸ್ವಾವಲಂಬಿ ಮಾಡಲು ಶ್ರಮ ವಹಿಸಿ ಎಂದು ಸೂಚಿಸಿದರು. ನಂತರ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ ಅಲ್ಲಿನ 6 ರಿಂದ 18 ವರ್ಷ ವಯೋಮಾನದವರ ಯೋಗಕ್ಷೇಮ ವಿಚಾರಿಸಿದರು. ಅಡುಗೆ ಮನೆ, ಮಲಗುವ ಕೊಠಡಿ,ಆಡಳಿತ ಕಚೇರಿ, ಓದುವ ಕೊಠಡಿ ಇತರೆಡೆ ವೀಕ್ಷಿಸಿದರು. ನಿಲಯದ ವಾಸಿಗಳಿಂದ ಮಾಹಿತಿ ಪಡೆದರು.
ಈ ಹಿಂದೆ ನಾನು ಬಂದಾಗ ಇಲ್ಲಿ ಕೆಲ ಸಮಸ್ಯೆ ಇದ್ದವು. ಇದೀಗ ಸುಧಾರಣೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ಸರ್ಕಾರಿ ಬಾಲಕಿಯರ ಬಾಲಮಂದಿರದ ಅ ಧೀಕ್ಷಕಿ ವೀಣಾ, ವಿಶೇಷ ದತ್ತು ಸಂಸ್ಥೆಯ ಅ ಧೀಕ್ಷಕಿ ಪ್ರಫುಲ್ಲರಾವ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬೇಬಿ ಸುನಿತಾ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.