ಮತ ಪಟ್ಟಿ ಶುದ್ಧೀಕರಣಕ್ಕೆ ಮನೆ ಮನೆ ಭೇಟಿ; ದೋಷಮುಕ್ತ ಮತದಾರ ಪಟ್ಟಿಗಾಗಿ ಆಯೋಗ ಸಮೀಕ್ಷೆ
ಪ್ರಾಯೋಗಿಕವಾಗಿ ರಾಜ್ಯದ 43 ಕ್ಷೇತ್ರಗಳ ಆಯ್ಕೆ
Team Udayavani, Mar 26, 2022, 7:15 AM IST
ದಾವಣಗೆರೆ: ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯನ್ನು ಸುವ್ಯವಸ್ಥಿತವಾಗಿ ನಡೆಸಲು ರಾಜ್ಯ ಚುನಾವಣ ಆಯೋಗ ಸಿದ್ಧತೆ ಆರಂಭಿಸಿದ್ದು, ಮನೆ ಮನೆ ಸಮೀಕ್ಷೆ ಕೈಗೊಂಡು ದೋಷಮುಕ್ತ ಮತದಾರರ ಪಟ್ಟಿ ತಯಾರಿಸಲು ಮುಂದಾಗಿದೆ.
ಪ್ರಸ್ತುತ ಪ್ರಾಯೋಗಿಕವಾಗಿ ರಾಜ್ಯದ 43 ವಿಧಾನಸಭಾ ಕ್ಷೇತ್ರಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದೆ. ಮನೆ ಮನೆಗೆ ಭೇಟಿ ನೀಡಿ ಅರ್ಹ ಮತದಾರರ ಮಾಹಿತಿ ಸಂಗ್ರಹಿಸಿ ವಿಧಾನ ಸಭೆ ಮತಕ್ಷೇತ್ರದ ಮತದಾರರ ಪಟ್ಟಿ ಶುದ್ಧೀ ಕರಣಗೊಳಿಸಬೇಕು. ತನ್ಮೂಲಕ ಮತದಾರರ ಪಟ್ಟಿ ನಿಖರ ಮತ್ತು ದೋಷ ಮುಕ್ತವಾಗುವಂತೆ ಮಾಡುವ ಪರಿ ಶೀಲನ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ.
ನಿರ್ದೇಶನವೇನು?
ಮತದಾರರ ನೋಂದಣಾಧಿಕಾರಿಗಳು ಮತಗಟ್ಟೆಗಳ ಮತದಾರರ ಪಟ್ಟಿ ಸಮೀಕ್ಷೆಯ ಪರಿಶೀಲನೆ ಹಾಗೂ ಅಪೇಕ್ಷಿಸಿರುವ ಎಲ್ಲ ವಿವರಗಳನ್ನು ಆಯೋಗದ ನಿಗದಿತ ನಮೂನೆ, ಅನುಬಂಧದಲ್ಲಿ ಒದಗಿಸ ಬೇಕು. ತತ್‌ಕ್ಷಣದಿಂದಲೇ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ), ಗ್ರಾಮ ಲೆಕ್ಕಾಧಿ ಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್‌ಗೆ ಸಮೀಕ್ಷೆ ಕುರಿತು ತರಬೇತಿ ನೀಡಬೇಕು. ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಮತದಾರರ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಚುನಾವಣ ಆಯೋಗ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಭಾರತದ 16 ಮಂದಿ ಮೀನುಗಾರರನ್ನು ವಾಪಸ್ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ
ಸಮೀಕ್ಷೆಗೆ ಆಯ್ಕೆಯಾದ ಕ್ಷೇತ್ರಗಳು
ದಕ್ಷಿಣ ಕನ್ನಡದ ಮಂಗಳೂರು, ಉಡುಪಿಯ ಕಾಪು, ಬೈಂದೂರು, ಕೊಡಗಿನ ಮಡಿಕೇರಿ, ವಿರಾಜಪೇಟೆ, ಉತ್ತರ ಕನ್ನಡದ ಭಟ್ಕಳ, ಚಿಕ್ಕಮಗಳೂರಿನ ಕಡೂರು, ಬೆಂಗಳೂರು ನಗರದ ಚಿಕ್ಕಪೇಟೆ, ಸರ್ವಜ್ಞನಗರ, ಬಸವನಗುಡಿ, ಯಶವಂತಪುರ. ಬಾಗಲಕೋಟೆಯ ತೇರದಾಳ, ಬೆಂಗಳೂರು ಗ್ರಾಮೀಣದ ಹೊಸಕೋಟೆ, ಬೆಳಗಾವಿಯ ಕಾಗವಾಡ, ನಿಪ್ಪಾಣಿ, ಬಳ್ಳಾರಿಯ ಹಡಗಲಿ, ಕಂಪ್ಲಿ, ಬೀದರ್ ದಕ್ಷಿಣ, ವಿಜಯಪುರದ ವಿಜಯಪುರ ನಗರ, ಸಿಂಧಗಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿತ್ರದುರ್ಗದ ಹಿರಿಯೂರು, ದಾವಣಗೆರೆ ಉತ್ತರ, ಧಾರವಾಡದ ಕುಂದ ಗೋಳ, ಕಲಬುರಗಿ ಗ್ರಾಮೀಣ, ಚಿಂಚೋಳಿ, ಹಾಸನದ ಶ್ರವಣಬೆಳಗೋಳ, ಹಾವೇರಿಯ ಬ್ಯಾಡಗಿ,ಕೋಲಾರದ ಮುಳಬಾಗಿಲು, ಕೊಪ್ಪಳದ ಕುಷ್ಟಗಿ, ಮಂಡ್ಯದ ಮಳವಳ್ಳಿ, ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ, ರಾಯಚೂರಿನ ಮಾನ್ವಿ, ರಾಯಚೂರು ಗ್ರಾಮೀಣ, ರಾಮನಗರದ ಕನಕಪುರ, ಶಿವಮೊಗ್ಗ ಗ್ರಾಮೀಣ, ಚಾಮರಾಜನಗರ, ಗದಗ, ತುಮಕೂರಿನ ಮಧುಗಿರಿ, ತುರುವೇಕೆರೆ, ಯಾದಗಿರಿಯ ಸುರಪುರ, ಗುರುಮಿಠಕಲ್ ಕ್ಷೇತ್ರಗಳು.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Controversy: ಅಂಬೇಡ್ಕರ್ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ
MUST WATCH
ಹೊಸ ಸೇರ್ಪಡೆ
Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!
Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Controversy: ಅಂಬೇಡ್ಕರ್ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.