ಜಗಳೂರಲ್ಲಿ ಜಲಕ್ಷಾಮ!
Team Udayavani, Feb 26, 2019, 5:33 AM IST
ಜಗಳೂರು: ಮಳೆ ಇಲ್ಲದೇ ಕಳೆದ ಮೂರು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಜಲ ಪಾತಾಳ ಸೇರಿರುವ ಪರಿಣಾಮ ಸಹಜವಾಗಿ ಈ ಬಾರಿಯೂ ಜಲಕ್ಷಾಮ ಎದುರಾಗಿದೆ…!
ಒಂದೆಡೆ ಬರ, ಇನ್ನೊಂದೆಡೆ ಜಲ ಕ್ಷಾಮ ಈ ಎರಡರ ಮಧ್ಯೆ ಬಡ ಕೂಲಿಕಾರ್ಮಿಕ ಮಹಿಳೆಯರು ಕೂಲಿಗೆ ಹೋಗದಂತಾಗಿದೆ. ದಿನನಿತ್ಯ ನೀರಿಗಾಗಿ ಕಾಯುವುದೇ ಇವರ ಕಾಯಕವಾಗಿದೆ. ಬಹುತೇಕ ಬೋರ್‌ವೆಲ್‌ಗಳ ಮುಂದೆ ರಾಶಿ ರಾಶಿ ಬಿಂದಿಗೆ ಕಂಡು ಬರುತ್ತಿವೆ. ಆದರೆ ನಲ್ಲಿಗಳಲ್ಲಿ ಹನಿ ಹನಿ ಜಿನಗು ನೀರು ಮಾತ್ರ ಸಿಗುತ್ತದೆ.
ಈ ಮಧ್ಯೆ ದಿನದಿಂದ ದಿನಕ್ಕೆ ಕೊಳವೆಬಾವಿಗಳು ಕೂಡ ವಿಫಲವಾಗುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಒಂದರ ಮೇಲೊಂದು ಕೊಳವೆಬಾವಿಗಳನ್ನು ಕೊರೆಯಿಸುತ್ತಿದ್ದಾರೆ. ಆದರೆ ಸಾವಿರ ಅಡಿ ಕೊರೆದರೂ ಒಂದೇ ಒಂದು ಹನಿ ನೀರು ಸಿಗುತ್ತಿಲ್ಲ.
ಮಾರ್ಚ್ 2018ರಿಂದ ತಾಲೂಕಿನ ಮತಿಗಟ್ಟಹಳ್ಳಿ, ಚಿಕ್ಕಅರಕೆರೆ, ಚಿಕ್ಕಅರಕೆರೆ ಹೊಸೂರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು ಚಿಕ್ಕಬನ್ನಿಹಟ್ಟಿ, ಗೋಡೆ, ಪಾಲನಾಯಕನಕೋಟೆ, ತಾರೇಹಳ್ಳಿ, ಪಲ್ಲಾಗಟ್ಟೆ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ನಿರಂತರವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರೆ ತಾಲೂಕಿನ ನೀರಿನ ಸಮಸ್ಯೆ ತೀವ್ರತೆ ಅರಿವಾಗಬಹುದು. ಸುಮಾರು 60 ಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು ಸದ್ಯ 27 ಗ್ರಾಮಗಳಿಗೆ ಟ್ಯಾಂಕರ್ ಹಾಗೂ 28 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. 38 ರೈತರು ತಮ್ಮ ಖಾಸಗಿ ಬೋರ್ ವೆಲ್‌ಗಳಿಂದ ನೀರು ಪೂರೈಕೆಗೆ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕ ಸ್ತಬ್ಧ: ತಾಲೂಕಿನ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ನೀರಿನ ಮೂಲವಿಲ್ಲದೇ ಸ್ತಬ್ಧವಾಗಿವೆ. ಕೆಲ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆಯಾಗುತ್ತಿರುವುದು ಜನರಲ್ಲಿ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ.
ಬೇಸಿಗೆ ನಿಭಾಯಿಸಲು ಅಧಿಕಾರಿಗಳು ಸಜ್ಜು: ಆರಂಭವಾಗಿರುವ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ತಯಾರಿಸಿ ನೀರು ಸಿಗುವ ಕಡೆ ಬೋರ್
ವೆಲ್ ಕೊರೆಯಿಸುವುದು, ಕೈಕೊಟ್ಟಿರುವ ಬೋರ್ ವೆಲ್‌ಗಳ ಪುನಶ್ಚೇತನಕ್ಕೆ ಕ್ರಿಯಾ ಯೋಜನೆಯನ್ನು ಟಾಸ್ಕ್ಫೋರ್ಸ್ ಸಮಿತಿಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಾ ಲಭ್ಯ ಅನುದಾನವನ್ನು ಬಳಸಿಕೊಂಡು ಮೋಟರ್ ಪಂಪ್‌ಗ್ಳ ರಿಪೇರಿ, ಪೈಪ್‌ಲೈನ್ ಸೇರಿದಂತೆ ಇತರೇ ಕುಡಿಯುವ ನೀರಿನ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ಆರಂಭಿಸಿದೆ. ಮೇವಿನ ಕೊರತೆ : ಸದ್ಯ ಮೇವಿನ ಕೊರತೆ ಇಲ್ಲದಿದ್ದರೂ ಶೇಖರಿಸಿರುವ ಅಲ್ಪ ಸ್ವಲ್ಪ ಮೇವು ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ರೈತ ಸಂಘಟನೆಗಳು ಅನೇಕ ಬಾರಿ ಜಗಳೂರು ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ನನೆಗುದಿಗೆ ಬಿದ್ದ ಬಹುಗ್ರಾಮ ಯೋಜನೆ ನನೆಗುದಿಗೆ ಬಿದ್ದ ಬಹುಗ್ರಾಮ ಯೋಜನೆ 2008ರಲ್ಲಿ ಜಗಳೂರು ತಾಲೂಕಿಗೆ ಮಂಜೂರಾಗಿದ್ದ ರಾಜೀವ ಗಾಂಧಿ ಸಬ್ ಮಿಷನ್ ಯೋಜನೆ ಅನುಷ್ಠಾನವಾಗಿದ್ದರೆ ಜಲಕ್ಷಾಮ ತಲೆದೋರುತ್ತಿರಲಿಲ್ಲ. ಆದರೆ ದಶಕವೇ ಕಳೆದರೂ ಯೋಜನೆ ಅನುಷ್ಠಾನವಾಗಿಲ್ಲ. 157 ಹಳ್ಳಿಗಳಿಗೆ ನೀರು ಒದಗಿಸುವ ಬಹು ದೊಡ್ಡ ಯೋಜನೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ. ವರ್ಷಗಳು ಉರುಳಿದಂತೆ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ಬಹುಗ್ರಾಮ ಯೋಜನೆಯಾಗಿ ಮಾರ್ಪಟ್ಟಿತು. ಹಿಂದಿನ ಸಿಎಂ ಸಿದ್ದರಾಮಯ್ಯ ಬಹುಗ್ರಾಮ ಯೋಜನೆಗೆ ಮಂಜೂರಾತಿ ನೀಡಲಾಗುವುದು ಎಂದು ಇಲ್ಲಿ ಬಂದಾಗ ಭರವಸೆ ನೀಡಿದ್ದರೂ ಮುಂದೆ ಏನೂ ಆಗಲಿಲ್ಲ. ಜನಪ್ರತಿನಿಧಿ ಗಳು ಮಾತ್ರ ಈ ಯೋಜನೆ ಮಂಜೂರು ಮಾಡಿಸುವುದಾಗಿ ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವುದು ಮಾತ್ರ ನಿಂತಿಲ್ಲ ಹೋರಾಟಗಾರರ ವಿರುದ್ಧ ಜನರ ಬೇಸರ ಹೋರಾಟಗಾರರ ವಿರುದ್ಧ ಜನರ ಬೇಸರ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದರೆ ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಗೆ ಸೇರಬೇಕೆಂದು ಒಂದು ಬಣ, ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕು ಉಳಿಯಲಿ ಎಂದು ಮತ್ತೂಂದು ಬಣ ಹೋರಾಟ ನಡೆಸುತ್ತಿದೆ. ಆದರೆ ಜನರಿಗೆ ಅತ್ಯವಶ್ಯವಾಗಿರುವ ಜೀವಜಲಕ್ಕಾಗಿ ಯಾರೂ ಹೋರಾಟ ನಡೆಸದಿರುವುದಕ್ಕೆ ಸಹಜವಾಗಿ ಇಲ್ಲಿನ ಸಾರ್ವಜನಿಕರು ಬೇಸರಗೊಂಡಿದ್ದಾರೆ.
ಜಗಳೂರು ತಾಲೂಕಿನಲ್ಲಿ 45 ಸಾವಿರ ಜಾನುವಾರುಗಳು ಇರುವ ಬಗ್ಗೆ ಅಂದಾಜಿಸಲಾಗಿದೆ. ಈ ಸದ್ಯ ಮೇವಿಗೆ ತೊಂದರೆ ಇಲ್ಲ. ಬಹುಶಃ ಏಪ್ರಿಲ್ ತಿಂಗಳಲ್ಲಿ ಮೇವಿನ ಕೊರೆತೆಯಾಗುವ ಸಾಧ್ಯತೆ ಇದೆ.
ರಂಗಪ್ಪ, ಪಶು ಸಹಾಯಕ ನಿರ್ದೇಶಕ
ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗಿರುವ 60 ಕ್ಕೂ ಹೆಚ್ಚು ಗ್ರಾಮಗಳ ಪೈಕಿ 27 ಗ್ರಾಮಗಳಲ್ಲಿ ಟ್ಯಾಂಕರ್
ಮೂಲಕ, 28 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇನ್ನೂ 44 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಎಲ್ಲಾ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.
ಜಾನಕಿರಾಮ್, ಇಒ, ತಾ.ಪಂ. ಜಗಳೂರು
ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ
ಕೈಗೊಳ್ಳಬೇಕು. ಈಗಾಗಲೇ ಮೇವಿನ ಕೊರತೆ ಎದುರಾಗಿದೆ. ಕೂಡಲೇ ಜಗಳೂರು ತಾಲೂಕಿನಲ್ಲಿ ಗೋಶಾಲೆ ತೆರೆಯಬೇಕು. ಬರ ನಿರ್ವಹಣೆ ಸಂಬಂಧ ಕಾಮಗಾರಿಗಳನ್ನು ಆರಂಭಿಸಿ ಗುಳೇ ಹೋಗುವುದನ್ನು ತಪ್ಪಿಸಬೇಕು.
ಪಟೇಲ್ ಮಾರಪ್ಪ, ಮುಖಂಡರು, ರೈತ ಸಂಘ.
ಬಸವರಾಜ ಜಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.