ವೇಟ್ ಲಿಫ್ಟಿಂಗ್‌ಗೆ ಪ್ರೋತ್ಸಾಹ ದೊರೆಯಲಿ
Team Udayavani, Nov 1, 2021, 12:57 PM IST
ದಾವಣಗೆರೆ: ಒಲಿಂಪಿಕ್ಸ್ ಮಾನ್ಯತೆ ಹೊಂದಿರುವ ವೇಟ್‌ಲಿಫ್ಟಿಂಗ್‌ಗೆ ಹೆಚ್ಚು ಉತ್ತೇಜನ,ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾವಂತ ಕ್ರೀಡಾಪಟುಗಳ ಅನ್ವೇಷಣಾ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ(ಸೆಕ್ರೆಟರಿ ಜನರಲ್) ಎಸ್. ಎಚ್. ಆನಂದೇಗೌಡ ಹೇಳಿದರು.
ಭಾನುವಾರ ನಗರದ ಗುಂಡಿ ಮಹದೇವಪ್ಪ ಕಲ್ಯಾಣಮಂಟಪದಲ್ಲಿ ರಾಜ್ಯ, ಜಿಲ್ಲಾ ವೇಟ್ ಲಿಫ್ಟರ್ ಅಸೋಸಿಯೇಷನ್, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಹಿರಿಯರ ಮತ್ತು ಕಿರಿಯರು, ಪುರುಷರ ಮತ್ತು ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
“ಐರನ್ ಗೇಮ್’ ಖ್ಯಾತಿಯ ವೇಟ್ ಲಿಫ್ಟಿಂಗ್ ಒಲಂಪಿಕ್ಸ್ ಕ್ರೀಡೆಯಾಗಿದೆ. ಟೋಕ್ಯೊದಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ವೇಟ್ ಲಿಫ್ಟರ್ ಮೀರಾಬಾಯಿಚಾನು ಭಾರತಕ್ಕೆ ಮೊಟ್ಟ ಮೊದಲ ಬೆಳ್ಳಿ ಪದಕ ತಂದಿತ್ತರು ಎಂಬುದನ್ನ ಮರೆಯುವಂತೆಯೇ ಇಲ್ಲ. ಮುಂದಿನ ಒಲಂಪಿಕ್ಸ್‌ಗಾಗಿ ಪ್ರತಿಭಾವಂತವೇಟ್ ಲಿಫ್ಟರ್ ಗುರುತಿಸಿ ಸೂಕ್ತ ತರಬೇತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಕಳೆದ ಬಾರಿಯಿಂದ ಮಂಗಳೂರಿನಲ್ಲಿ ಕಿರಿಯ, ಜ್ಯೂನಿಯರ್ ವಿಭಾಗ ಪ್ರಾರಂಭಿಸಲಾಗಿದೆ.ತಳಮಟ್ಟದಿಂದ ಪ್ರತಿಭಾವಂತರನ್ನು ಗುರುತಿಸಿ ತರಬೇತಿಗೆ ಆಯ್ಕೆ ಮಾಡಲಾಗುವುದು ಖೇಲೋಇಂಡಿಯಾ, ಖೇಲೋ ಯೂನಿವರ್ಸಿಟಿಯೋಜನೆಗಳ ಮೂಲಕ ಒಲಂಪಿಕ್ಸ್‌ನವರೆಗೆ 5 ಲಕ್ಷ ರೂ. ಸಹಾಯಧನದೊಂದಿಗೆ ತರಬೇತಿ ನೀಡಲಾಗುವುದು. ಮುಂದಿನ ವರ್ಷ ಬೆಂಗಳೂರಿನಜೈನ್ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಖೇಲೋ ಯೂನಿವರ್ಸಿಟಿ ನಡೆಯಲಿದೆ. ಭಾರ ಎತ್ತುವ ಸ್ಪರ್ಧೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಪ್ರೋತ್ಸಾಹ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿ, ಭಾರ ಎತ್ತುವ ಸ್ಪರ್ಧೆ ಶಕ್ತಿ ಪ್ರದರ್ಶಿಸುವಂತಹ ಕ್ರೀಡೆ. ಅತಿ ಪ್ರಯಾಸದಿಂದಭಾರ ಎತ್ತುವ, ವರ್ಕ್‌ಔಟ್ ಮಾಡುವಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಭಾರ ಎತ್ತಬೇಕು.ಪ್ರಶಸ್ತಿ ಗೆಲ್ಲಬೇಕು ಎನ್ನುವ ಭರದಲ್ಲಿ ಇನ್ನೂ ಹೆಚ್ಚಿನಶ್ರಮ ಹಾಕಿ ಭಾರ ಎತ್ತಲಿಕ್ಕೆ ಹೋಗಬಾರದು. ನಿಶ್ಯಕ್ತಿ ಎನ್ನಿಸಿದಾಗ ಬಿಟ್ಟು ಬಿಡಬೇಕು. ನಿಗದಿತ ಅವಧಿಯಲ್ಲಿ ರಕ್ತದೊತ್ತಡ, ಶುಗರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕೊರೊನಾ ಕಾರಣಕ್ಕೆ ಎಲ್ಲ ಕ್ಷೇತ್ರಗಳು ಸ್ತಬ್ಧವಾಗಿದ್ದವು. ಕ್ರೀಡಾ ಚಟುವಟಿಕೆ, ಕ್ರೀಡಾಕೂಟಗಳು ನಡೆದಿರಲಿಲ್ಲ. ಕೊರೊನಾಎರಡನೇ ಅಲೆ ನಂತರದಲ್ಲಿ ಮತ್ತೆ ಕ್ರೀಡಾಕೂಟ ನಡೆಯುತ್ತಿವೆ. ರಾಜ್ಯ ಮಟ್ಟದ ಭಾರ ಎತ್ತುವಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಕ್ರೀಡೆಗಳಿಗೆ ಸದಾ ಪ್ರೋತ್ಸಾಹ, ಸಹಕಾರ ನೀಡುತ್ತಿದೆ. ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ 2 ಲಕ್ಷ ರೂ.ಅನುದಾನ ನೀಡಿದೆ. ದಾವಣಗೆರೆಯಲ್ಲಿ ಉತ್ತಮ ಜಿಮ್ ಪ್ರಾರಂಭಕ್ಕೆ ಬಜೆಟ್‌ನಲ್ಲಿ ಅನುದಾನಮೀಸಲಿಡಲಾಗಿದೆ. ಆದಷ್ಟು ಬೇಗ ಜಿಮ್ ಕಾರ್ಯಾರಂಭ ಮಾಡಲಿದೆ ಎಂದರು.
ಜಿಲ್ಲಾ ವೇಟ್‌ಲಿಫ್ಟರ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್. ಅನಿತ್‌ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಕೆ.ಎಂ. ವೀರೇಶ್,ಸೋಗಿ ಶಾಂತಕುಮಾರ್, ವೀಣಾ ನಂಜಪ್ಪ,ಜಯಮ್ಮ ಗೋಪಿನಾಥ್, ಎಲ್.ಡಿ. ಗೋಣೆಪ್ಪ, ದೋಣಿ ನಿಂಗಪ್ಪ, ಶ್ರೀನಿವಾಸ್ ದಾಸಕರಿಯಪ್ಪ, ಎಲ್.ಎನ್. ಕಲ್ಲೇಶ್ ಇತರರು ಇದ್ದರು.
ನಾನೂ ವೇಟ್‌ಲಿಫ್ಟರ್ ಆಗಿದ್ದೆ : ನಾನು ಸಹ ವೇಟ್ ಲಿಫ್ಟರ್ ಆಗಿದ್ದವನು. ಭಾರ ಎತ್ತುವಾಗ ನಿಶ್ಯಕ್ತಿ ಆಗುತ್ತಿತ್ತು. ಕೋಚ್ ಕೇಳಿದಾಗ ಮೊಟ್ಟೆ, ಮಟನ್ ತಿನ್ನಬೇಕುಎಂದು ಹೇಳಿದರು. ನನಗೆ ಸರಿ ಬರುವುದಿಲ್ಲಎಂದು ವೇಟ್ ಲಿಫ್ಟಿಂಗ್ ನಿಲ್ಲಿಸಿದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅನುಭವ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.