ಶಿವ ದೇವಾಲಯಗಳಿಗೆ ಗಂಗಾಜಲ ವಿತರಣೆ
Team Udayavani, Feb 25, 2017, 1:24 PM IST
ಹರಪನಹಳ್ಳಿ: ಮಹಾ ಶಿವರಾತ್ರಿ ಅಂಗವಾಗಿ ಮುಜರಾಯಿ ಇಲಾಖೆ ವತಿಯಿಂದ ಪವಿತ್ರ ಗಂಗಾ ಜಲವನ್ನು ತಾಲೂಕಿನ ಎಲ್ಲಾ ಶಿವ ದೇವಾಲಯಗಳಿಗೂ ಶುಕ್ರವಾರ ವಿತರಿಸಲಾಯಿತು.
ಪಟ್ಟಣದ ಹಳೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕೆ.ಗುರುಬಸವರಾಜ್ ಅವರು ಕೂಲಹಳ್ಳಿ ಗ್ರಾಮದ ಪೋತರಾಜ್ ಹಾಗೂ ಆಂಜನೇಯ ದೇವಸ್ಥಾನಗಳ ಅರ್ಚಕರಿಗೆ ಗಂಗಾಜಲ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಿದರು. ಒಟ್ಟು 10 ಲೀಟರ್‌ನ ನಾಲ್ಕು ಕ್ಯಾನ್‌ಗಳು ಜಲ ಬಂದಿದ್ದು, ನಾಲ್ಕು ಹೋಬಳಿಗೂ ತಲಾ 10 ಲೀಟರ್‌ನಂತೆ ಗಂಗಾಜಲವನ್ನು ಹಂಚಲಾಯಿತು.
ತಾಲೂಕಿನಲ್ಲಿ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಮಹಾ ಶಿವರಾತ್ರಿಯನ್ನು ಜನರು ಆಚರಿಸಿದ್ದು, ಪಟ್ಟಣದ ಗೋಕರ್ಣೇಶ್ವರ ದೇವಾಲಯ, ನಗರೇಶ್ವರ, ಎಸ್‌ಬಿಎಂ ಬಳಿಯಿರುವ ಗಣೇಶ ದೇವಸ್ಥಾನದ ಶಿವ ದೇವಾಲಯ, ಬೆಸ್ಕಾಂ ಕಚೇರಿ ಬಳಿ ಹೀಗೆ ವಿವಿಧೆಡೆ ಶಿವ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಬಾಗಳಿಯ ಐತಿಹಾಸಿಕ ಕಲ್ಲೇಶ್ವರ ದೇವಾಲಯದಲ್ಲಿ ಬೇರೆ ಬೇರೆ ಗ್ರಾಮಗಳ ಭಕ್ತರು ಆಗಮಿಸಿ ಅಭಿಷೇಕ ಮಾಡಿಸಿದರು. ಪಟ್ಟಣದ ಐತಿಹಾಸಿಕ ಗೋಕರ್ಣೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕೈಗೊಂಡಿದ್ದು, ಸುಣ್ಣ, ಬಣ್ಣ, ಸ್ವತ್ಛತೆ, ಭಕ್ತರನ್ನು ಸೆಳೆಯಿತು. ಗಂಗಾಜಲ ವಿತರಣಾ ಸಂದರ್ಭದಲ್ಲಿ ಕಂದಾಯ ಅಧಿಧಿಕಾರಿಗಳಾದ ಅರವಿಂದ, ಶಿವಮೂರ್ತೆಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.