ಅಭಿವೃದ್ಧಿ ಕಾರ್ಯಕ್ಕೆ ಕಡೆಗಣನೆ ಏಕೆ?
Team Udayavani, Apr 2, 2021, 12:17 PM IST
ಮಲೇಬೆನ್ನೂರು: ಗ್ರಾಮ ಪಂಚಾಯಿತಿಯಿಂದಪುರಸಭೆಯಾಗಿ ಮೇಲ್ದರ್ಜೆಗೇರಿರುವಮಲೇಬೆನ್ನೂರು ಪುರಸಭೆಯ ಅಭಿವೃದ್ಧಿಕಾರ್ಯಗಳಲ್ಲಿ ಸಾಧನೆ ಶೂನ್ಯ. ಇದಕ್ಕೆಯಾರು ಜವಾಬ್ದಾರಿ ಎಂದು ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ನಜ್ಮಾಪ್ರಶ್ನಿಸಿದರು.ಗುರುವಾರ ಪುರಸಭೆ ಸಭಾಂಗಣದಲ್ಲಿನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರುಮಾತನಾಡಿದರು.
ಸ್ವತ್ಛತೆ, ಶುದ್ಧ ಕುಡಿಯುವನೀರು, ಸಮರ್ಪಕ ವಿದ್ಯುತ್ ಸಂಪರ್ಕವನ್ನುಪುರಸಭೆಯಿಂದ ಜನರು ಬಯಸುತ್ತಾರೆ.ಅವುಗಳನ್ನು ಸರಿಯಾಗಿ ನೀಡಿದಲ್ಲಿ ನಿಮಗೆಹೆಚ್ಚಿನ ರೀತಿ ಗೌರವ ಸಿಗುತ್ತದೆ. ಅದನ್ನೇ ಇಲ್ಲಿಸರಿಯಗಿ ನಿರ್ವಹಿಸುತ್ತಿಲ್ಲ. ಮಲೇಬೆನ್ನೂರುಪುರಸಭೆ ಎಂದರೆ ಸಮಸ್ಯೆಗಳ ಲೇಬಲ್‌ಹಾಕಿದ್ದಾರೆ.
ಚನ್ನಗಿರಿಯಲ್ಲಿ 5, ಜಗಳೂರಿನಲ್ಲಿ6 ಮತ್ತು ಹೊನ್ನಾಳಿಯಲ್ಲಿ 4 ಸಿಬ್ಬಂದಿ ಮಾತ್ರಇದ್ದರೂ ನೂರಕ್ಕೆ ನೂರು ಸುಧಾರಣೆಯಾಗಿದೆ.ಇಲ್ಲಿ ಸಿಬ್ಬಂದಿಗಳು ಹೆಚ್ಚಿಗೆ ಇದ್ದರೂ ನಿರೀಕ್ಷಿತಪ್ರಗತಿ ಆಗಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.ಜಿಲ್ಲಾಧಿ ಕಾರಿಗಳ ಕೆಲಸದ ವೇಗಕ್ಕೆ ತಕ್ಕಂತೆನಾವೂ ಕಾರ್ಯ ನಿರ್ವಹಿಸುತ್ತಿದ್ದೇವೆ.
ಯಾವುದೇ ಸಮಯದಲ್ಲೂ ನಿಮ್ಮ ಸಂಪರ್ಕಕ್ಕೆಸಿಗುತ್ತೇವೆ, ಸಮಸ್ಯೆಗೆ ಸ್ಪಂದಿಸುತ್ತೇವೆ. ನಿಮ್ಮಊರಿನ ಅಭಿವೃದ್ಧಿಗೆ ಕ್ರಿಯಾಯೋಜನೆಕಳುಹಿಸಿದರೆ ಒಂದೇ ದಿನದಲ್ಲಿ ಅನುಮೋದನೆಮಾಡಿಸಿ ಕಳುಹಿಸುತ್ತೇನೆ. ಎಲ್ಲಾ ಸ್ಕೀಂಗಳಿಗೆಸಾಕಷ್ಟು ಅನುದಾನ ಇದ್ದರೂ ಅದನ್ನುಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ.ಜಿಲ್ಲಾ ಕಾರಿಗಳು ಸಭೆಯಲ್ಲಿ ಮಲೇಬೆನ್ನೂರಿನಬಗ್ಗೆ ಕೇಳಿದಾಗ ಎಲ್ಲಾ ವಿಭಾಗಗಳಲ್ಲೂಶೂನ್ಯ ಸಾಧನೆ ಎಂದು ಹೇಳಲು ನಮಗೆನಾಚಿಕೆಯಾಗುತ್ತೆ ಎಂದರು.
ಪುರಸಭೆ ಸದಸ್ಯ ಬಿ. ಸುರೇಶ್ ಮಾತನಾಡಿ,ನಮ್ಮ ಪುರಸಭೆಗೆ ಸಿಬ್ಬಂದಿಗಳು ಹೆಚ್ಚಾಗಿದ್ದಾರೆ.ಅವರನ್ನು ಬೇರೆಡೆಗೆ ಕಳುಹಿಸಿಕೊಡಿ.ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲಎಂದು ದೂರಿದರು. ಘನತ್ಯಾಜ್ಯ ಹಾಕುತ್ತಿರುವಜಮೀನಿನ ಸುತ್ತ ತಗಡಿನ ಬ್ಯಾರಿಕೇಡ್‌ನಿರ್ಮಿಸಿಕೊಡುವಂತೆ ಕೋರಿದರು.
ಬಾಪೂಜಿ ಹಾಲ್ ಸುರಕ್ಷತೆಗಾಗಿ ಒಂದುಸಿಸಿ ಕ್ಯಾಮರಾ ಮತ್ತು ಹೈಮಾಸ್ಟ್ ದೀಪಅಳವಡಿಸುವಂತೆ ಒಂದು ವರ್ಷದಿಂದಕೇಳುತ್ತಿದ್ದಾರೆ, ಇದರ ಬಗ್ಗೆ ಯಾಕೆಪ್ರಸ್ತಾವನೆ ಕಳುಹಿಸಿಲ್ಲ, 14ನೇ ಹಣಕಾಸಿನಯೋಜನೆಯಲ್ಲಿ 57.31ಲಕ್ಷ ರೂ.ಉಳಿತಾಯವಾಗಿದ್ದು ಅದನ್ನು ಏನುಮಾಡಿದ್ದೀರಿ ಎಂದು ನಜ್ಮಾ ಪ್ರಶ್ನಿಸಿದರು. ಈಗಅನುಮೋದನೆಯಾಗಿರುವ ಕಾಮಗಾರಿಗಳಿಗೆಅಲ್ಪಾವಧಿ ಟೆಂಡರ್ ಕರೆಯಿರಿ. ಒಂದುವಾರದೊಳಗೆ ಯಾವ ಖಾತೆಯಲ್ಲಿಉಳಿತಾಯ ಹಣವಿದೆ, ಯಾವ ಟೆಂಡರ್‌ಕಾಲ್ ಮಾಡಬೇಕಿದೆ, ಯಾವ ಕೆಲಸ ಆಗಿಲ್ಲಎಂಬುದನ್ನು ಮುಖ್ಯಾ ಧಿಕಾರಿ ಮತ್ತು ಅಧ್ಯಕ್ಷರಗಮನಕ್ಕೆ ತರಬೇಕು.
ಅದನ್ನು ತುರ್ತುಸಭೆಯಲ್ಲಿಟ್ಟು ನಮ್ಮ ಗಮನಕ್ಕೆ ತರಬೇಕುಎಂದು ಇಂಜಿನಿಯರ್ ಮನೋಜ್‌ಗೆತಾಕೀತು ಮಾಡಿದರು.ಪುರಸಭೆ ಅಧ್ಯಕ್ಷೆ ಶ್ರೀಮತಿ, ಸದಸ್ಯರಾದದಾದಾವಲಿ, ಯೂಸೂಫ್ ಖಾನ್, ಎಇಇಪ್ರಸನ್ನ, ನೋಡಲ್ ಆμàಸರ್ ಪ್ರಶಾಂತ್,ಪ್ರಭಾರಿ ಮುಖ್ಯಾ ಧಿಕಾರಿ ದಿನಕರ್,ಗುರುಪ್ರಸಾದ್, ನವೀನ್, ಉಮೇಶ್‌ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.