ಪಂಚಾಯ್ತಿ ಅಖಾಡದಲ್ಲಿ ನಾರಿ ಶಕ್ತಿ ಪ್ರದರ್ಶನ
ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮಹಿಳೆಯರ ಸ್ಪರ್ಧೆ
Team Udayavani, Dec 8, 2020, 5:10 PM IST
ದಾವಣಗೆರೆ: ಗ್ರಾಮ ಪಂಚಾಯಿತಿಗಳಿಗೆಚುನಾವಣೆ ನಿಗದಿಯಾಗಿದ್ದು, ಚುನಾವಣಾ ಕಣವನ್ನು ರಂಗೇರಿಸಲು ಮಹಿಳಾ ಮಣಿಗಳೂಸಜ್ಜಾಗಿದ್ದಾರೆ. ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನುಮೀಸಲು ಪಡೆದಿರುವ ಸ್ತ್ರೀಯರು ನಾರಿ ಶಕ್ತಿಪ್ರದರ್ಶಿಸಲು ತಾಲೀಮು ನಡೆಸಿದ್ದಾರೆ.
ಜಿಲ್ಲೆಯ 191ಗ್ರಾಪಂಗಳಿಗೆ ಸಂಬಂಧಿಸಿದಂತೆ ಒಟ್ಟು 2628 ಸದಸ್ಯ ಸ್ಥಾನಗಳಿಗೆಚುನಾವಣೆ ನಡೆಯಲಿದೆ. ಇದರಲ್ಲಿಶೇ.50ಕ್ಕೂ ಮೀರಿ ಅಂದರೆ 1359 ಸ್ಥಾನಗಳುಮಹಿಳೆಯರಿಗೇ ಮೀಸಲಿವೆ. 1269 ಸ್ಥಾನಗಳುಸಾಮಾನ್ಯ ವರ್ಗಕ್ಕೆ ಮೀಸಲಿದ್ದು ಇಲ್ಲಿಯೂಒಂದಿಷ್ಟು ಸ್ಥಾನಗಳಿಗೆ ಮಹಿಳೆಯರುಸ್ಪರ್ಧೆಗಿಳಿದರೆ ಸಹಜವಾಗಿ ಪುರುಷರಿಗಿಂತಮಹಿಳಾಮಣಿಗಳ ಸಂಖ್ಯೆಯೇಅಧಿಕವಾಗಲಿದ್ದು ಚುನಾವಣೆಯಲ್ಲಿ ಸ್ತ್ರೀ ಘರ್ಜನೆ ಮೊಳಗಲಿದೆ.
ದಾವಣಗೆರೆ ತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ 281ಸ್ಥಾನಗಳಿದ್ದರೆ ಮಹಿಳೆಯರಿಗೆ 300 ಸ್ಥಾನಗಳು ಮೀಸಲಿವೆ. ಹರಿಹರತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ 182 ಮೀಸಲಿದ್ದರೆ 196ಸ್ಥಾನಗಳು ಮಹಿಳೆಯರಿಗೆಮೀಸಲಿವೆ. ಹೊನ್ನಾಳಿ ತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ 164ಸ್ಥಾನಗಳು ಮೀಸಲಿದ್ದರೆ 177ಸ್ಥಾನಗಳು ನಾರಿಯರಿಗೆಮೀಸಲಿವೆ. ನ್ಯಾಮತಿ ತಾಲೂಕಿನಲ್ಲಿಸಾಮಾನ್ಯ ವರ್ಗಕ್ಕೆ 94 ಸ್ಥಾನಗಳಮೀಸಲಿದ್ದರೆ 102 ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಚನ್ನಗಿರಿ ತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ 354 ಸ್ಥಾನಗಳು ಮೀಸಲಿದ್ದರೆ ಮಹಿಳೆಯರಿಗೆ 381ಸ್ಥಾನಗಳು ಮೀಸಲಿವೆ.
ಜಗಳೂರು ತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ 194 ಸ್ಥಾನಗಳು ಮೀಸಲಿದ್ದರೆ 203ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ.ಮಹಿಳೆಯರು ಸಾಮಾನ್ಯ ವರ್ಗದಲ್ಲಿಯೂಸ್ಪರ್ಧಿಸುವ ಸಾಧ್ಯತೆ ಇರುವುದರಿಂದಚುನಾವಣೆಯಲ್ಲಿ ನಾರಿ ಶಕ್ತಿ ಗೋಚರಿಸಲಿದೆ.ಗ್ರಾಪಂ ಮಹಿಳಾ ಮೀಸಲಾತಿಯಲ್ಲಿವರ್ಗವಾರು ನೋಡಿದರೆ ಅನುಸೂಚಿತ ಜಾತಿವರ್ಗದ 629 ಸ್ಥಾನಗಳಲ್ಲಿ 363ಸ್ಥಾನಗಳು, ಅನುಸೂಚಿತ ಪಂಗಡ ವರ್ಗದ 397ಸ್ಥಾನಗಳಲ್ಲಿ 266 ಸ್ಥಾನಗಳು, ಹಿಂದುಳಿದ ಅವರ್ಗದ 268 ಸ್ಥಾನಗಳಲ್ಲಿ 174 ಸ್ಥಾನಗಳು, ಹಿಂದುಳಿದ ಬ ವರ್ಗದ 49ಸ್ಥಾನಗಳಲ್ಲಿ 15 ಸ್ಥಾನಗಳು, ಸಾಮಾನ್ಯ ವರ್ಗದಲ್ಲಿಒಟ್ಟು 541ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ಬ ವರ್ಗ ಹಾಗೂಸಾಮಾನ್ಯ ವರ್ಗ ಹೊರತುಪಡಿಸಿದರೆ ಉಳಿದೆಲ್ಲ ವರ್ಗಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಸ್ಥಾನಗಳಿಗಿಂತ ಮಹಿಳಾ ಮೀಸಲಾತಿ ಸ್ಥಾನಗಳೇ ಅಧಿಕವಾಗಿರುವುದು ಗಮನಾರ್ಹ.
ಪಕ್ಷಗಳ ಸಹಕಾರಕ್ಕೆ ಮೊರೆ: ರಾಜಕೀಯಪಕ್ಷ, ಚಿಹ್ನೆ ಇಲ್ಲದೆ ನಡೆಯುವ ಚುನಾವಣೆ ಇದಾಗಿರುವುದರಿಂದ ಅರ್ಧಕ್ಕಿಂತ ಹೆಚ್ಚಿನಸ್ಥಾನಗಳನ್ನು ಮೀಸಲು ಪಡೆದಿರುವಮಹಿಳೆಯರು ಸಹಕಾರಕ್ಕಾಗಿ ರಾಜಕೀಯ ಪಕ್ಷಗಳ ಮುಖಂಡರು, ನಾಯಕರ ಮನೆಬಾಗಿಲಿಗೆ ಅಲೆಯಲು ಶುರು ಮಾಡಿದ್ದಾರೆ.
ತಮ್ಮ ಶಕ್ತಿಯ ಜತೆಗೆ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಪ್ರಭಾವವೂ ಸೇರಿದರೆ ಗೆಲುವು ಸುಲಭವಾಗುತ್ತದೆ. ರಾಜಕೀಯ ಪಕ್ಷಗಳ ಬೆಂಬಲ ಸಿಕ್ಕರೆ ಪಕ್ಷಗಳಿಂದಚುನಾವಣೆ ನಡೆಸಲು ಬೇಕಾದ ಎಲ್ಲ ರೀತಿಯ ಸಹಕಾರ ಸಿಗುತ್ತದೆ ಎಂಬ ಲೆಕ್ಕಾಚಾರಕ್ಕೆ ಇಳಿದಿದ್ದಾರೆ. ಇತ್ತ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಬೆನ್ನಿಗೆ ನಿಲ್ಲಲು, ಅವರನ್ನೇ ಕಣಕ್ಕಿಳಿಸಲು ತಂತ್ರಗಾರಿಕೆ ನಡೆಸಿವೆ.
ಸಂಘಗಳತ್ತ ಚಿತ್ತ: ಅಧಿಕಾರ ರಾಜಕಾರಣದ ಮೊದಲ ಮೆಟ್ಟಿಲೇರಲು ಮಹಿಳಾ ಮಣಿಗಳು ನಾನಾ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ತಾವು ಯಾರನ್ನು ಆಕರ್ಷಿಸಿದರೆ ಹೆಚ್ಚು ಮತಗಳನ್ನು ಪಡೆಯಬಹುದುಎಂಬ ಲೆಕ್ಕಾಚಾರ ನಡೆಸಿದ್ದಾರೆ. ಈಗಾಗಲೇ ಊರಲ್ಲಿ ಒಂದೆರಡು ಬಾರಿ ಸದಸ್ಯರಾದವರ ಅನುಭವದ ಪಾಠ ಆಲಿಲಿಸುತ್ತಿದ್ದಾರೆ. ಚುನಾವಣಾ ಕಣಕ್ಕೆ ಇಳಿಯಲು ತಯಾರಿ ನಡೆಸಿರುವ ನಾರಿಯರ ಚಿತ್ತ ಸದ್ಯಕ್ಕೆ ಹಳ್ಳಿಗಳಲ್ಲಿರುವ ಸ್ತ್ರೀಶಕ್ತಿ ಸಂಘಗಳತ್ತ ನೆಟ್ಟಿದ್ದು ಅವರನ್ನು ಆಕರ್ಷಿಸಲು ಏನೆಲ್ಲ ಮಾಡಬಹುದು ಎಂಬ ಯೋಚನೆಗಿಳಿದಿದ್ದಾರೆ.ಒಟ್ಟಾರೆ ಪುರುಷರಿಗಿಂತ ಮಹಿಳೆಯರೇಹೆಚ್ಚು ಇರಬಹುದಾದ ಗ್ರಾಪಂ ಚುನಾವಣಾ ಆಖಾಡದಲ್ಲಿ ನಾರಿ ಶಕ್ತಿ ಪ್ರದರ್ಶನಕ್ಕೆ ವೇದಿಕೆಸಜ್ಜುಗೊಳ್ಳುತ್ತಿರುವುದು ಸುಳ್ಳಲ್ಲ
ಮಹಿಳೆ ಹಿಂದಿನ ಶಕ್ತಿ ಪುರುಷ! :
ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ ಈ ಚುನಾವಣೆ ಕಣದಲ್ಲಿರುವ ಪ್ರತಿ ಮಹಿಳೆ ಹಿಂದಿನ ಶಕ್ತಿ ಪುರುಷನಾಗಿರುವುದು ಸಾಮಾನ್ಯ. ಮಹಿಳೆಯರನ್ನು ಚುನಾವಣಾಕಣಕ್ಕೆ ಇಳಿಸುವುದರಿಂದ ಹಿಡಿದು ಅವರನ್ನು ಆಯ್ಕೆ ಮಾಡುವವರೆಗೂ ಅವರ ಹಿಂದೆಪುರುಷರೇ ಶಕ್ತಿಯಾಗಿ ನಿಲ್ಲುತ್ತಾರೆ. ಕುಟುಂಬದಲ್ಲಿರುವ ಪತಿ, ಸಹೋದರರು, ಚಿಕ್ಕಪ್ಪ,ದೊಡ್ಡಪ್ಪ, ಮಾವ ಇವರೇ ಅವರ ಪರವಾಗಿ ಪ್ರಚಾರ, ತಂತ್ರಗಾರಿಕೆ ಎಲ್ಲವೂ ಮಾಡಿ ತಮ್ಮಮನೆಯ ಮಹಿಳೆ ಗ್ರಾಪಂ ಪ್ರವೇಶಿಸುವಂತೆ ಮಾಡುತ್ತಾರೆ. ಇದು ಒಂದು ರೀತಿಯಲ್ಲಿಮೇಲ್ನೋಟಕ್ಕೆ ಮಹಿಳೆಯರಿಗೆ ಪುರುಷರ ಸಹಕಾರ, ಪ್ರೋತ್ಸಾಹ ಎನ್ನಿಸಿಕೊಳ್ಳುತ್ತದೆ. ಆದರೆಮಹಿಳೆ ಆಯ್ಕೆಯಾದ ಬಳಿಕವೂ ಆಯ್ಕೆಗೆ ಸಹಕರಿಸಿದ ಕುಟುಂಬದ ಪುರುಷರು ಮಹಿಳೆ ಹೆಸರಲ್ಲಿ ತಾವೇ ಅಧಿಕಾರ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿರುವುದು ಮಾತ್ರ ವಿಪರ್ಯಾಸ.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಕಾರಣದಿಂದಾಗಿಯೇ ಇಂದು ಮಹಿಳೆಯರಿಗೆ ಪುರುಷರಷ್ಟೇಸ್ಥಾನಮಾನಗಳು ಸಿಗುತ್ತಿವೆ. ಇದನ್ನುಮಹಿಳೆಯರನ್ನು ಸಮರ್ಥವಾಗಿ ಬಳಸಿಕೊಂಡು ರಾಜಕೀಯ ಶಕ್ತಿಯಾಗಿಮುಂದೆಬರಬೇಕು. ತಮ್ಮ ಹೆಸರಲ್ಲಿಕುಟುಂಬದ ಪುರುಷ ಸದಸ್ಯರುಆಡಳಿತ ನಡೆಸುವಂತಾದರೆ ಅದುಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ.ಆದ್ದರಿಂದ ಗ್ರಾಪಂಗೆ ಆಯ್ಕೆಯಾಗುವ ಪ್ರತಿಯೊಬ್ಬ ಮಹಿಳೆ ಸ್ವಯಂ ಆಗಿಸಮರ್ಥ ರೀತಿಯಲ್ಲಿ ಆಡಳಿತ ನಡೆಸಿ ಸೈಎನ್ನಿಸಿಕೊಳ್ಳಬೇಕು. -ಚಂದ್ರಮ್ಮ ವಿ., ಸಾಮಾಜಿಕ ಕಾರ್ಯಕರ್ತೆ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.