ರಥೋತ್ಸವದಲ್ಲಿ ಮಹಿಳಾ ಪಾರುಪತ್ಯ!
Team Udayavani, Dec 3, 2018, 3:31 PM IST
ದಾವಣಗೆರೆ: ರಥೋತ್ಸವ ಎಂದರೆ ಅಲ್ಲಿ ಪುರುಷರದ್ದೇ ಆಧಿಪತ್ಯ. ಮಹಿಳೆಯರು ರಥೋತ್ಸವದ ಪೂಜೆ ಮತ್ತಿತರೆ ಕಾರ್ಯಕ್ಕೆ ಮಾತ್ರ ಎನ್ನುವುದು ಎಲ್ಲೆಡೆ ಸಾಮಾನ್ಯ. ಆದರೆ, ದಾವಣಗೆರೆ ಸಮೀಪದ ಯರಗುಂಟೆಯ ಶ್ರೀ ಕರಿಬಸವೇಶ್ವರಸ್ವಾಮಿ ರಥೋತ್ಸವ ಮಾತ್ರ ತದ್ವಿರುದ್ಧ. ರಥೋತ್ಸವಕ್ಕೆ ಸಿದ್ಧತೆಯಿಂದ ಹಿಡಿದು ರಥ ಎಳೆಯುವುದು ಒಳಗೊಂಡಂತೆ ಎಲ್ಲದ್ದರಲ್ಲೂ ಪ್ರಮಿಳೆಯರದ್ದೇ ಪಾರುಪತ್ಯ.
ಕಳೆದ 7 ವರ್ಷದಿಂದ ಯರಗುಂಟೆ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರಸ್ವಾಮಿ ರಥೋತ್ಸವ ನಡೆಯುತ್ತಿದೆ. 6 ವರ್ಷದಿಂದ ಮಹಿಳೆಯರೇ ರಥ ಶ್ರೀ ಕರಿಬಸವೇಶ್ವರಸ್ವಾಮಿ ರಥ ಎಳೆಯುವುದು ವಿಶೇಷ. ಮೊದಲು ಎಲ್ಲಾ ಕಡೆಯಂತೆ ಪುರುಷರೇ ರಥ ಎಳೆಯುತ್ತಿದ್ದರು. ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ, ಒಮ್ಮೆ ಉತ್ತರ ಕರ್ನಾಟಕಕ ಒಂದು ಪ್ರದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಮಹಿಳೆಯರೇ ರಥ ಎಳೆಯುವುದನ್ನ ಕಂಡಂತಹ ಸ್ವಾಮೀಜಿ, ನಮ್ಮೆಲ್ಲೂ ಏಕೆ ಮಹಿಳೆಯರಿಂದಲೇ ರಥ ಎಳೆಸಬಾರದು ಅಂದುಕೊಂಡರು.
ಅವರ ನಿರ್ಧಾರದ ಫಲವಾಗಿಯೇ ಕಳೆದ 6 ವರ್ಷದಿಂದ ಮಹಿಳೆಯರೇ ರಥ ಎಳೆಯುತ್ತಿದ್ದಾರೆ. ಆ ಮೂಲಕ ಸಮಾನತೆಯ ಸಾಧಿಸಲಾಗುತ್ತಿದೆ. ಭಾನುವಾರ ಯರಗುಂಟೆಯಲ್ಲಿ ನಡೆದ ಶ್ರೀ ಕರಿಬಸವೇಶ್ವರಸ್ವಾಮಿ ರಥೋತ್ಸವವನ್ನೇ ಮಹಿಳೆಯರೆ ನಿರ್ವಹಿಸುವ ಮೂಲಕ ಗಮನ ಸೆಳೆದರು. ರಥೋತ್ಸವದಲ್ಲಿ ಭಾಗವಹಿಸಲಿಕ್ಕಾಗಿಯೇ ದೂರದ ಊರುಗಳಿಂದ ಬಂದಂತಹ ಅನೇಕ ಮಹಿಳೆಯರು ಅತೀ ಉತ್ಸಾಹದಿಂದಲೇ ರಥ ಎಳೆದರು. ಮಹಿಳೆಯರೇ ರಥ ಎಳೆಯುವ ಕಾರ್ಯಕ್ಕೆ ಮೆಚ್ಚುಗೆ, ಸಂತಸ ವ್ಯಕ್ತಪಡಿಸಿದರು.
ಭಾರತ ಪುರುಷ ಪ್ರಧಾನ ಸಮಾಜ. ಮಹಿಳೆಯರಿಗೂ ಸಮಾನತೆ ಒದಗಿಸಿಕೊಡುವ ಉದ್ದೇಶದಿಂದ ಕಳೆದ 6 ವರ್ಷದಿಂದ ಮಹಿಳೆಯರಿಗೆ ರಥ ಎಳೆಯುವ ಅವಕಾಶ ಮಾಡಿಕೊಡಲಾಗಿದೆ. ಸೃಷ್ಟಿಗೆ ಕಾರಣವಾಗುವ ಮಹಿಳೆಯರು ಕೂಡಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಾಮುಖ್ಯ ವಹಿಸಬೇಕು ಎಂಬ ಸದಾಶಯದಿಂದ ಈ ಕಾರು ಪ್ರಾರಂಭಿಸಲಾಗಿದೆ ಎಂದು ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.