ಶ್ರಮಿಕರು-ಕಾರ್ಮಿಕರಿಗೆ ಜಾಗತೀಕರಣದ ಪೆಟ್ಟು
Team Udayavani, May 2, 2017, 12:54 PM IST
ದಾವಣಗೆರೆ: ಬಂಡವಾಳಶಾಹಿ ಜಾಗತೀಕರಣ ನೀತಿಯಿಂದಾಗಿ ಶ್ರಮಿಕರು, ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ| ಸಿದ್ದನಗೌಡ ಪಾಟೀಲ್ ಆತಂಕ ವ್ಯಕ್ತಪಪಡಿಸಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆ, ಹುತಾತ್ಮರ 47ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಕಾಯಕದ ಜಾಗತೀಕರಣ ಆಗುತ್ತಿಲ್ಲ.
ಸರ್ಕಾರಗಳು ರೂಪಿಸುತ್ತಿರುವ ಕಾನೂನು ಕಾರ್ಮಿಕ ವರ್ಗವನ್ನು ದುಡಿಮೆಯಿಂದ ದೂರ ಮಾಡುತ್ತಿವೆ. ಕೆಲಸ ಇಲ್ಲದಂತಾಗಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತ ಸಮೂಹ ಸಹ ಜಮೀನು, ಕೆಲಸ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಜವಳಿ ಒಳಗೊಂಡಂತೆ ಅನೇಕ ಮಿಲ್, ಕೈಗಾರಿಕೆಗಳು ಮುಚ್ಚಿ ಹೋಗಲಿಕ್ಕೆ ಕಾರ್ಮಿಕರ ಹೋರಾಟ, ಚಳವಳಿ ಕಾರಣ ಅಲ್ಲವೇ ಅಲ್ಲ. ಬದಲಿಗೆ ಬಹು ರಾಷ್ಟ್ರೀಯ ಕಂಪನಿಗಳಿಂದ ಪಕ್ಷಕ್ಕೆ ವಂತಿಗೆ ಪಡೆದು, ಅದರ ಋಣ ತೀರಸಲಿಕ್ಕಾಗಿ ಸರ್ಕಾರಗಳು ರೂಪಿಸುತ್ತಿರುವ ನೀತಿಗಳೇ ಕಾರಣ.
ದಾವಣಗೆರೆಯಲ್ಲಿ ಜವಳಿ ಮಿಲ್ ಮುಚ್ಚಿದಂತೆ ಹುಬ್ಬಳ್ಳಿ, ಬೆಂಗಳೂರನಲ್ಲಿ ಸಹ ಅನೇಕ ಕೈಗಾರಿಕೆ ಮುಚ್ಚಲ್ಪಟ್ಟವು. ಅಲ್ಲಿ ದಾವಣಗೆರೆಯಂತೆ ಕಾರ್ಮಿಕರ ಚಳವಳಿ ಇರಲಿಲ್ಲ. ಕೈಗಾರಿಕೆ ಮುಚ್ಚಲಿಕ್ಕೆ ಕಾರ್ಮಿಕರು ಕಾರಣ ಅಲ್ಲ ಎಂಬುದನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತೀಕರಣ ನೀತಿ ಪ್ರವೇಶಕ್ಕೆ ಮುಕ್ತ ಆಹ್ವಾನ ನೀಡಿದ ಡಾ| ಮನಮೋಹನ್‌ಸಿಂಗ್ ಫಸ್ಟ್ ಗೇರ್‌ನಲ್ಲಿ ನೀತಿ ಜಾರಿಗೆ ತಂದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಟಾಪ್ ಗೇರ್‌ನಲ್ಲಿ ಜಾಗತೀಕರಣ ನೀತಿ ಜಾರಿಗೆ ತರುತ್ತಿದ್ದಾರೆ.
ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರ ಜಮೀನು ಕಿತ್ತುಕೊಂಡು ವಿದೇಶಿ ಕಂಪನಿಗಳ ಕೃಷಿ ಚಟುವಟಿಕೆಗೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ದೇಶದ ಕೃಷಿ ಕ್ಷೇತ್ರ ಪ್ರವೇಶಿಸಲಿವೆ. ದೇಶದ ರೈತರು ಕೆಲಸ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 2011ರ ಜನಗಣತಿ ಪ್ರಕಾರ ಶೇ.49ರಷ್ಟು ಜನರು ದೇಶದ್ಯಾಂತ ಕೃಷಿ ಅವಲಂಬಿಸಿದ್ದಾರೆ.
ಸಣ್ಣ ಪುಟ್ಟ ಕೆಲಸಕ್ಕೂ ಯಂತ್ರೋಪಕರಣ ಬಳಕೆ ಪ್ರಾರಂಭಿಸುವ ಮೂಲಕ ಜನರ ದುಡಿಮೆ ಕಿತ್ತುಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ 75 ಕೋಟಿಯಷ್ಟು ಜನರು ನಿರುದ್ಯೋಗಿಗಳಾಗುವುದು ಶತಃಸಿದ್ಧ. ವ್ಯವಸ್ಥೆಯ ಹುನ್ನಾರ, ಪಿತೂರಿಯಿಂದ ಈಗಾಗಲೇ ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುತ್ತಿರುವ ಅನ್ನದಾತರು ಮುಂದೆ ಅತಿ ಭೀಕರ ಪರಿಣಾಮ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.