ಆವರಗೆರೆ ಹಸಿರಾಗಿಸಿದ ಪರಿಸರ ಯೋಗಿಗಳು!


Team Udayavani, Jun 5, 2021, 9:32 AM IST

Untitled-1

ದಾವಣಗೆರೆ: ಪರಿಸರದ ಬಗ್ಗೆ ಕೇವಲ ಕಾಳಜಿ ತೋರ್ಪಡಿಸುವ ಜತೆಗೆ ಪರಿಸರ ಕಾಪಾಡಲು, ಸ್ವಚ್ಛ ಹಾಗೂ ಸುಂದರಗೊಳಿಸಲು ನಾವೂ ಏನಾದರೂ ಕೊಡುಗೆ ನೀಡಬೇಕು ಎಂಬ ಮನಸ್ಸಿದ್ದರೆ ನಮ್ಮ ಸುತ್ತಲಿನ ಪರಿಸರವನ್ನೇ ಹಸೀರಿಕರಣಗೊಳಿಸಿ ಸಂಭ್ರವಿಸಬಹುದು ಎಂಬುದನ್ನು ತಾಲೂಕಿನ ಆವರಗೆರೆಯ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸಾಬೀತು ಪಡಿಸಿದೆ.

ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರು ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ನಿತ್ಯ ಪೋಷಣೆ ಮಾಡುತ್ತಿದ್ದು ಅವು ಈಗ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿವೆ. ಇದರ ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಸೌಂದರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.

ಹೀಗಾಗಿ ಅವರು ವೇದಿಕೆ ಸದಸ್ಯರು ಕೇವಲ ಪರಿಸರ ಪ್ರೇಮಿಗಳಲ್ಲ; ಪರಿಸರ ಯೋಗಿಗಳಾಗಿದ್ದಾರೆ. ಇವರ ಈ ಕಾರ್ಯದಿಂದ ಇಡೀ ಗ್ರಾಮದಲ್ಲೀಗ ಹಸಿರು ಕಂಗೊಳಿಸುವಂತಾಗಿದೆ.

ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆಯಲ್ಲಿ 35 ಸದಸ್ಯರಿದ್ದು ಪ್ರತಿ ರವಿವಾರ ಬೆಳಗ್ಗೆ 6ರಿಂದ 9 ಗಂಟೆವರೆಗೆ ಶ್ರಮದಾನದ ಮೂಲಕ ಗ್ರಾಮದಲ್ಲಿರುವ ನಾಲ್ಕು ಉದ್ಯಾನಗಳು, ಶಾಲಾ ಆವರಣಗಳು, ದೇವಸ್ಥಾನದ ಆವರಣಗಳು, ಮುಖ್ಯ ರಸ್ತೆ ಸೇರಿದಂತೆ ವಿವಿಧ ಸ್ಥಳಗಳ ಸ್ವತ್ಛತಾ ಕಾರ್ಯ ನೆರವೇರಿಸುತ್ತಾರೆ. ಗ್ರಾಮದಲ್ಲಿದ್ದ ಹಳೆಯ ಹೊಂಡವನ್ನು ಸ್ವತ್ಛಗೊಳಿಸಿ ಅದರ ಅಂದ ಹೆಚ್ಚಿಸಿದ್ದಾರೆ.

ಆವರಗೆರೆ ಗ್ರಾಮದ ಶೇಖರಪ್ಪ ಬಡಾವಣೆ, ಹಳೆ ಊರು, ಎಲ್ಲ ಶಾಲಾ ಆವರಣ, ದೇವಸ್ಥಾನಗಳ ಸುತ್ತಮುತ್ತ, ಉತ್ತಮ್‌ ಚಂದ್‌ ಬಡಾವಣೆ ಹಾಗೂ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಟ್ಟು ಪ್ರತಿದಿನಕೊಡದಿಂದ ನೀರುಣಿಸುತ್ತಿದ್ದಾರೆ. ಕನಕದಾಸ ಪಾರ್ಕ್‌, ವಾಲ್ಮೀಕಿ ಪಾರ್ಕ್‌ ನಲ್ಲಿನ ಗಿಡ ಮರಗಳನ್ನುಸಂರಕ್ಷಿಸುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ರಸ್ತೆ ಬದಿ ಫಲಕ, ಪ್ರಮುಖ ಸ್ಥಳಗಳಲ್ಲಿ ಬೆಂಚ್‌ಗಳನ್ನು ಹಾಕಿಸಿ ಇಡೀ ಊರಿನ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ.

ಮರ ಬೆಳೆಸುವ ಕಾಳಜಿ, ಪರಿಸರ ಪ್ರೀತಿ ಸಾರ್ವಜನಿಕರಲ್ಲಿಯೂ ಬೆಳೆಸುವ ಉದ್ದೇಶದಿಂದರಾಷ್ಟ್ರೀಯ ಕಾರ್ಯಕ್ರಮ, ಹಬ್ಟಾಚರಣೆ ಹಾಗೂ ವಿಶೇಷ ಸಂದರ್ಭದಲ್ಲಿ ಸಸಿ ವಿತರಿಸುವ ಕಾರ್ಯವೂ ನಿರಂತರವಾಗಿ ವೇದಿಕೆವತಿಯಿಂದ ನಡೆಯುತ್ತಿದೆ.

ಪರಿಸರಕ್ಕಾಗಿ ದೇಣಿಗೆ: ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರಿಂದ ಪರಿಸರಚಟುವಟಿಕೆಗಾಗಿ ಪ್ರತಿ ತಿಂಗಳು 200 ರೂ. ದೇಣಿಗೆಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನೂ ತೆರೆಯಲಾಗಿದೆ. ಸ್ವತ್ಛತಾಚಟುವಟಿಕೆಗೆ ಬೇಕಾದ ಗಾರೆ, ಬುಟ್ಟಿಯಂತಹಪರಿಕರ ಖರೀದಿಸಿಟ್ಟುಕೊಳ್ಳಲಾಗಿದೆ. ಇದರೊಂದಿಗೆ ದಾನಿಗಳ ಸಹಾಯದಿಂದ ಗ್ರಾಮದಲ್ಲಿ ಅಲ್ಲಲ್ಲಿಬೆಂಚ್‌, ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ಸಸಿಗಳಿಗೆ ನೀರುಣಿಸಲಾಗುತ್ತಿದೆ.

ಗ್ರಾಮದ ಹಿರಿಯರಾದ ನಾಯಕನಹಟ್ಟಿ ರುದ್ರಪ್ಪ, ಶಿಕ್ಷಕ ಎಂ. ಗುರುಸಿದ್ದಸ್ವಾಮಿ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಚ್‌.ಜಿ. ಉಮೇಶ್‌, ಮೈಸೂರು ಹನುಮಂತಪ್ಪ, ಕೆ.ಬಾನಪ್ಪ, ತಿಪ್ಪೇಸ್ವಾಮಿ, ಮಂಜುನಾಥ, ಶಿವರುದ್ರಪ್ಪ ಸೇರಿದಂತೆ ಸಂಘಟನೆಯಎಲ್ಲ ಸದಸ್ಯರು ಪರಿಸರ ಸಂರಕ್ಷಣೆ ಕಾಯಕದಲ್ಲಿ ಕೈಜೋಡಿಸಿದ್ದಾರೆ.

ಒಟ್ಟಾರೆ ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರ ಪರಿಸರ ಪ್ರೇಮ ಹಾಗೂ ಪರಿಸರ ಪೂರಕ ಚಟುವಟಿಕೆ ಇತರರಿಗೂ ಮಾದರಿಯಾಗಿದೆ.

ಕಳೆದ ಎರಡು ವರ್ಷಗಳಿಂದಆವರಗೆರೆಯಲ್ಲಿ ಶ್ರೀಕಾಯಕಯೋಗಿಬಸವ ಪರಿಸರ ವೇದಿಕೆ ಮಾಡಿಕೊಂಡು ಗ್ರಾಮದವಿವಿಧೆಡೆ ಸಸಿ ನೆಟ್ಟು ಪೋಷಿಸುತ್ತ ಬರಲಾಗುತ್ತಿದೆ.ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕಗ್ರಾಮದ ಸ್ವಚ್ಛತಾ ಕಾರ್ಯ ಮಾಡಿ, ಗ್ರಾಮದ ಸೌಂದರ್ಯ ಹೆಚ್ಚಿಸಲಾಗುತ್ತಿದೆ. ವೇದಿಕೆಯಈ ಕಾರ್ಯಕ್ಕೆ ಗ್ರಾಮಸ್ಥರಿಂದ ಸಹಕಾರ,ಪ್ರೋತ್ಸಾಹವೂ ದೊರೆತಿದೆ.- ಎಂ. ಗುರುಸಿದ್ಧಸ್ವಾಮಿ, ಶಿಕ್ಷಕರು, ಸದಸ್ಯರು, ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ.

 

-ಎಚ್‌.ಕೆ. ನಟರಾಜ

 

ಟಾಪ್ ನ್ಯೂಸ್

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.