ಸ್ವಂತಿಕೆಗೆ ವಿಶ್ವಾದ್ಯಂತ ಅವಕಾಶ: ಅಶ್ವತಿ
Team Udayavani, Mar 21, 2018, 7:15 PM IST
ದಾವಣಗೆರೆ: ಸ್ವಂತಿಕೆ ಇರುವವರಿಗೆ ವಿಶ್ವಾದ್ಯಂತ ಅವಕಾಶಗಳಿವೆ. ನಕಲು ಮಾಡುವವರಿಗಲ್ಲ. ಪದವೀಧರರಾದಾಕ್ಷಣ ಸ್ವಂತಿಕೆ ಬರದು. ಅದಕ್ಕೆ ಸಾಧನೆಯ ವ್ಯಸನವೂ ಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಅಶ್ವತಿ ಹೇಳಿದರು.
ಮಂಗಳವಾರ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ, ಬಾಪೂಜಿ ಮೇನೇಜ್‌ಮೆಂಟ್ ಕಾಲೇಜ್, ಬಾಪೂಜಿ ಅಕಾಡೆಮಿ ಆಫ್ ಮೇನೇಜ್‌ಮೆಂಟ್ ಅಂಡ್ ರೀಸರ್ಚ್ನಲ್ಲಿ ಏರ್ಪಡಿಸಿದ್ದ ಅಂತರ ಕಾಲೇಜ್ ಯುವಜನೋತ್ಸವ ಆಕ್ಟಾಗಾನ್-2018 ಉದ್ಘಾಟಿಸಿ ಅವರು ಮಾತನಾಡಿದರು. ಬದಲಾವಣೆ ಬಯಸುವವರು ಮೊದಲು ತಾವು ಬದಲಾಗಬೇಕು. ಬದಲಾವಣೆ ಸಮಾಜಕ್ಕೆ ಒಳ್ಳೆಯದನ್ನ
ಉಂಟು ಮಾಡುವಂತಿರಬೇಕು. ಇದಕ್ಕಾಗಿ ತಲೆಯಿಂದ ಯೋಚಿಸಿದರೆ ಸಾಲದು. ಹೃದಯದ ಅಂತರ್‌ಧ್ವನಿಯೂ ಹೇಳಬೇಕು. ಜತೆಗೆ ಮನಸ್ಸು ಮತ್ತು ಅಭಿರುಚಿಯೂ ಇದಕ್ಕೆ ಸ್ಪಂದಿಸಬೇಕು. ಇಂತಹ ಅಭಿರುಚಿ ಬೆಳೆಯಲು ಈ ರೀತಿಯ ಯುವಜನೋತ್ಸವ ಪೂರಕ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಕಾಲ್ ಇನ್ ಇಟ್ ಸಂಸ್ಥೆ ಮುಖ್ಯಾಧಿಕಾರಿ ರಘುರಾಜ್ ಬಂಡಿ, ಕಡಿಮೆ ಸಮಯದಲ್ಲಿ ಹೆಚ್ಚಿನದನ್ನ ಸಾಧಿಸಬೇಕಾದ್ದು ಇಂದಿನ ಅವಶ್ಯಕ. ಅಮೇರಿಕಾದಂತಹ ರಾಷ್ಟ್ರದಲ್ಲಿ ಪದವಿ, ವಿದ್ಯಾರ್ಹತೆಗಿಂತ ಸಾಮರ್ಥ್ಯ ಗುರುತಿಸಿ, ಉದ್ಯೋಗ ನೀಡಲಾಗುವುದು. ಸಾಮರ್ಥ್ಯ ಬೆಳಕಿಗೆ ಬರಲು ಸ್ಪರ್ಧೆಗಳು ಸಹಕಾರಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಹಿರಿಯ ನಿರ್ದೇಶಕ ಡಾ| ಆರ್.ಎಲ್. ನಂದೀಶ್ವರ್, ಉನ್ನತ ಶಿಕ್ಷಣ, ಅತ್ಯುನ್ನತ ಹುದ್ದೆ ಬಯಸುವವರು ಸ್ಪರ್ಧಾತ್ಮಕ
ಮನೋಭಾವದೊಂದಿಗೆ ಸವಾಲು ಎದುರಿಸುವಲ್ಲೂ ಸಿದ್ದರಾಗಿರಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ತೀವ್ರಗತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವ ಜಗತ್ತಲ್ಲಿ ಕ್ಷಣ ಕ್ಷಣಕ್ಕೂ ಹೊಸದನ್ನ ತಿಳಿದುಕೊಂಡು, ಅದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ನವೀನ್, ಇತರರು ವೇದಿಕೆಯಲ್ಲಿದ್ದರು. 35ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಈ ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆ. ನಿಖೀತಾ ಉಡುಪಡಿ, ಕೆಲ್ವಿನ್ ನಿರೂಪಿಸಿದರು. ಕಾಲೇಜಿನ ನಿರ್ದೇಶಕ ಡಾ| ಎಚ್.ವಿ. ತ್ರಿಭುವಾನಂದ ಸ್ವಾಮಿ
ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.