ಯಶ್ ಹವಾಕ್ಕೆ ಅಭಿಮಾನಿಗಳು ಖುಷ್
Team Udayavani, Dec 22, 2018, 4:17 PM IST
ದಾವಣಗೆರೆ: ಕನ್ನಡಿಗರ ಬಹುನಿರೀಕ್ಷೆಯ ನಟ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರ ಶುಕ್ರವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ನಗರದ ಗೀತಾಂಜಲಿ, ವಸಂತ ಚಿತ್ರಮಂದಿರಗಳಲ್ಲೂ ಅಭಿಮಾನಿಗಳು ಯಶ್ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಭಾವಚಿತ್ರದ ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ನೆರವೇರಿಸಿ ಸಂಭ್ರಮಿಸಿದರು.
ಗೀತಾಂಜಲಿ ಚಿತ್ರಮಂದಿರದಲ್ಲಿ ನಸುಕಿನ 4.30ಕ್ಕೆ ಆರಂಭವಾದ ಚಿತ್ರದ ಪ್ರಥಮ ಶೋನಲ್ಲಿ ಯುವಕರದ್ದೇ ಹವಾ. ಆಗಲೇ ಯಶ್ ಅಭಿಮಾನಿ ಬಳಗದ ಯುವಕರು ಫ್ಲೆಕ್ಸ್‌ಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು. ನಂತರದ ಪ್ರದರ್ಶನ ವೀಕ್ಷಿಸಲು ಅಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಧಾವಿಸುತ್ತಿದ್ದರು.
ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರದ ಪ್ರಥಮ ಶೋ ಮುಗಿಯುವ ಮುನ್ನ ಬೆಳಿಗ್ಗೆಯಿಂದಲೇ ಕಾಲೇಜು ವಿದ್ಯಾರ್ಥಿಗಳು ಟಿಕೆಟ್ ಕೌಂಟರ್ ತೆರೆಯುವವರಿಗೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆದು ಚಿತ್ರ ವೀಕ್ಷಿಸಿದರು. ವಸಂತ ಚಿತ್ರಮಂದಿರದಲ್ಲಿ ಕೂಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗೀತಾಂಜಲಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 4.30 ರಿಂದ ಒಟ್ಟು 5 ಪ್ರದರ್ಶನ ನಡೆದರೆ, ವಸಂತ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ನಾಲ್ಕು ಶೋಗಳು ನಡೆದವು. ಗೀತಾಂಜಲಿ ಚಿತ್ರಮಂದಿರದಲ್ಲಿ ಬಾಲ್ಕನಿ ಟಿಕೆಟ್ 200, ಫಸ್ಟ್ ಕ್ಲಾಸ್ 150 ರೂಪಾಯಿ ನಿಗದಿ ಪಡಿಸಲಾಗಿತ್ತು. ವಸಂತ ಚಿತ್ರಮಂದಿರದಲ್ಲೂ ಸಹ ಬಾಲ್ಕನಿ 200, ಫಸ್ಟ್ ಕ್ಲಾಸ್ ಟಿಕೆಟ್ ಗೆ 150 ರೂ, ನಿಗದಿ ಪಡಿಸಲಾಗಿದೆ.
ಶುಕ್ರವಾರದ ಬಾಲ್ಕನಿ ಎಲ್ಲಾ ಶೋನ ಟಿಕೆಟ್ ಮುಂಗಡವಾಗಿ ಬುಕ್ಕಿಂಗ್ ಹಾಗೂ ಮಾರಾಟಗೊಂಡಿದ್ದವು. 300 ರೂ.ಗಳಿಗಿಂತಲೂ ಹೆಚ್ಚಿನ ದರಕ್ಕೆ ಟಿಕೆಟ್ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದುದು ಕಂಡುಬಂತು. ಚಿತ್ರ ವೀಕ್ಷಣೆಗೆ ಬಂದ ಅನೇಕ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಕ್ಯೂನಲ್ಲಿ ಟಿಕೆಟ್ ಸಿಗದಿದ್ದಾಗ ಬ್ಲಾಕ್‌ನಲ್ಲಿ ಹೆಚ್ಚು ಹಣ ನೀಡಿ ಚಿತ್ರ ವೀಕ್ಷಿಸಲು ತೆರಳಿದ್ದು ಕಂಡುಬಂತು.
ಯಶ್ ಅಭಿಮಾನಿಗಳು ಕೆ.ಜಿ.ಎಫ್ ಚಿತ್ರಕ್ಕೆ ಶುಭಕೋರಿ ಗೀತಾಂಜಲಿ ಚಿತ್ರಮಂದಿರದಲ್ಲಿ ಹಾಕಿದ್ದ ಫ್ಲೆಕ್ಸ್‌ಗಳು ತುಂಬಿ ತುಳುಕುತ್ತಿದ್ದವು. ಒಳಗಡೆ ಜಾಗ ಸಾಲದೇ ರಸ್ತೆಯಲ್ಲೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ವಸಂತ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಆ ಚಿತ್ರಮಂದಿರದ ಬಳಿಯೂ ಯಶ್ ದೊಡ್ಡ ಕಟೌಟ್‌ಗಳು ಗೋಚರಿಸುತ್ತಿವೆ.
ಆನ್‌ಲೈನ್ ಟಿಕೆಟ್ ಹೊಂಬಾಳೆ ಫಿಲಂಸ್‌ನ ಕೆ.ಜಿ.ಎಫ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ ಮಾಮೂಲಿಯಾಗಿ ಕ್ಯೂನಲ್ಲಿ ನಿಂತು ಬಾಲ್ಕನಿ ಟಿಕೆಟ್ ಬೇಕು ಎಂದರೆ ಸಿಗುವಂತಿಲ್ಲ. ಏಕೆಂದರೆ, ಆನ್‌ಲೈನ್‌ನಲ್ಲಿ ಪೇಟಿಎಮ್ ಮೂಲಕ ಬಾಲ್ಕನಿ ಸೀಟ್‌ಗಳ ಬುಕ್ಕಿಂಗ್ ಪ್ರಕ್ರಿಯೆ ನಡೆದಿದ್ದು, ಸೋಮವಾರದವರೆಗೆ ಟಿಕೆಟ್ ಮಾರಾಟ ಆಗಿವೆ. ಬಾಲ್ಕನಿ ಟಿಕೆಟ್ ಸೋಮವಾರವರೆಗೆ ಸಿಗುವುದು ಸಂದೇಹ.
ಮಹಾದೇವಗೌಡ, ಗೀತಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.