ಯುವಜನತೆ ಅನ್ಯಾಯ ಸಹಿಸದಿರಲಿ
Team Udayavani, Jul 6, 2017, 8:54 AM IST
ದಾವಣಗೆರೆ: ಯುವಜನತೆ ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಮೂಕ ಪ್ರೇಕ್ಷಕರಂತೆ ನೋಡಬಾರದು ಎಂದು ಎಐಡಿವೈಒ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಮಂಜುನಾಥ ಕುಕ್ಕವಾಡ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಚಾಮುಂಡೇಶ್ವರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಐಡಿವೈಒನ 51ನೇ ಸಂಸ್ಥಾಪನಾ ದಿನಚರಣೆಯಲ್ಲಿ ಮಾತನಾಡಿದ ಅವರು, ಯುವ ಜನತೆ ನಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ಅನ್ಯಾಯ ನೋಡಿ
ಸುಮ್ಮನಿರಬಾರದು. ಜನರನ್ನು ಶೋ‚ಷಿಸುತ್ತಾ ದೇಶ ಲೂಟಿ ಹೊಡೆಯುತ್ತಿರುವ ಆಳುವ ಬಂಡವಾಳ ಶಾಹಿ ವರ್ಗದ ವಿರುದ್ಧ ದನಿ ಎತ್ತಬೇಕು ಎಂದರು. ಎಲ್ಲಾ ಸರ್ಕಾರಗಳು ಲಾಭದಾಸೆಗೆ ಉದ್ಯಮ ಆರಂಭಿಸುವ ಬಂಡವಾಳದಾರರ ರಕ್ಷಣಗೆ ಟೊಂಕ ಕಟ್ಟಿ ನಿಂತಿವೆ. ಇದರಿಂದ ಸಾಮಾನ್ಯ ಜನ, ರೈತ, ಕಾರ್ಮಿಕರ ಜೀವನ ಸರ್ವನಾಶವಾಗುತ್ತಿದೆ. ಇದನ್ನು ಕಂಡು ಯುವಜನತೆ ಸುಮ್ಮನಿರದೆ ಭಗತ್‌ಸಿಂಗ್, ನೇತಾಜಿ ಸುಭಾ‚ಷ್ ಚಂದ್ರಬೋಸ್ ಮುಂತಾದ
ಮಹಾನ್ ಹೋರಾಟಗಾರಂತೆ ಹೋರಾಡಬೇಕು ಎಂದು ಅವರು ಮನವಿ ಮಾಡಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ದೇಶ ಸ್ವತಂತ್ರ ಪಡೆದು 70 ವರ್ಷ ಕಳೆದರೂ ಇಂದಿನ ಸರ್ಕಾರಗಳು ಖಾಸಗಿಕರಣ ಎಂಬ ಹೆಸರಿನಲ್ಲಿ ಜನತೆಗೆ ನೈಜವಾಗಿ ಸಿಗಬೇಕಾದ ಮೂಲಭೂತ ಸೌಕರ್ಯ ತೆಗೆದು
ಹಾಕಿ ದುಡ್ಡಿದವರಿಗಾಗಿ ಮಾತ್ರ ಸೌಲಭ್ಯ ಎಂಬ ನೀತಿ ಅನುಸರಿಸುತ್ತಿದೆ. ಇದರಿಂದ ಇಂದಿನ ಯುವಕರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗವಿಲ್ಲದೇ ಪ್ರತಿ ವರ್ಷ ಕೋಟ್ಯಂತರ ಯುವಕರು
ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು. ಕಾಲೇಜಿನ ಪ್ರಾಂಶುಪಾಲ ಲಕ್ಷಣ ಅಧ್ಯಕ್ಷತೆ ವಹಿಸಿದ್ದರು. ಶಶಿಕುಮಾರ್, ಗುರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.