ಮನವಿಗೆ ಮಣಿಯದ ಕಿರಿಯ ವೈದ್ಯರು
Team Udayavani, Oct 25, 2018, 2:33 PM IST
ದಾವಣಗೆರೆ: ಶಿಷ್ಯವೇತನಕ್ಕಾಗಿ ಕಿರಿಯ ವೈದ್ಯರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದೆ.
ಕಳೆದ ಫೆಬ್ರವರಿಯಿಂದ ಬಾಕಿ ಇರುವ ಶಿಷ್ಯವೇತನ ಬಿಡುಗಡೆ ಸಂಬಂಧ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್(ವಾಸು) ಭರವಸೆ ನೀಡಿದರೂ ಅವರ ಮಾತಿಗೆ ಮಣಿಯದ ಕಿರಿಯ ವೈದ್ಯರು ಧರಣಿ ಮುಂದುವರೆಸಲು ನಿರ್ಧರಿಸಿದ್ದಾರೆ.
ಬುಧವಾರ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡ ನಂತರ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್, ಅವರ ಬೇಡಿಕೆ ಆಲಿಸಿದರು. ಬಾಕಿ ಇರುವ ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಕಿರಿಯ ವೈದ್ಯರು ಧರಣಿ ಆರಂಭಿಸಿರುವುದು ಗಮನಕ್ಕೆ ಬಂದ ತಕ್ಷಣ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದೇನೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಕಿರಿಯ ವೈದ್ಯರ ಪ್ರತಿನಿಧಿಗಳು ನನ್ನೊಂದಿಗೆ ಬೇಡಿಕೆಯ ಬಗ್ಗೆ ಚರ್ಚಿಸಿದ್ದಾರೆ. ಗುರುವಾರ ಆ ಪ್ರತಿನಿಧಿಗಳನ್ನು ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಚರ್ಚೆಗೆ ಕರೆದುಕೊಂಡು ಹೋಗುತ್ತೇನೆ. ಧರಣಿ ನಿರತರಲ್ಲಿ ಬಹುತೇಕರು ಶಿಷ್ಯವೇತನ ನೆಚ್ಚಿಕೊಂಡೇ ಓದುತ್ತಿದ್ದಾರೆ ಎಂಬುದು ಗೊತ್ತಿದೆ.
ನೀವು ಸರ್ಕಾರದ ಗಮನ ಸೆಳೆದಿದ್ದೀರಿ. ಸಮಸ್ಯೆ ಬಗೆಹರಿಸುತ್ತೇನೆ. ರೋಗಿಗಳ ಹಿತದೃಷ್ಟಿಯಿಂದ ಹೋರಾಟ ನಿಲ್ಲಿಸಿ, ಸೇವೆಗೆ ಹಿಂತಿರುಗಿ ಎಂಬುದಾಗಿ ಸಚಿವರು ಮನವಿ ಮಾಡಿದರು. ಆದರೆ, ಕಿರಿಯ ವೈದ್ಯರು ಲಿಖೀತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
ಸರ್ಕಾರ ದಾವಣಗೆರೆ ಮತ್ತು ಮಂಗಳೂರು ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿದೆ. ಆ ಬಗ್ಗೆ ಈಗ ಆಡಿಟ್ ಅಬೆಕ್ಷನ್ ಆಗಿದೆ. ದಾವಣಗೆರೆ ಆಸ್ಪತ್ರೆಯಿಂದ ವರ್ಷಕ್ಕೆ 75 ಲಕ್ಷದಿಂದ 1.25 ಕೋಟಿವರೆಗೆ ಆದಾಯ ಬರುತ್ತಿದೆ. ವರ್ಷಕ್ಕೆ 8-10 ಕೋಟಿಯಷ್ಟು ಶಿಷ್ಯವೇತನ ನೀಡಲಾಗುತ್ತಿದೆ ಎಂದು ಆಡಿಟ್ ಅಬೆಕ್ಷನ್ ಆಗಿರುವುದು ನಿಮಗೆ ಗೊತ್ತೇ ಇದೆ. ದಾವಣಗೆರೆ ಆಸ್ಪತ್ರೆಯಿಂದ
ಬರುವ ಆದಾಯದ ಬಗ್ಗೆ ಆದಷ್ಟು ಬೇಗ ವರದಿ ನೀಡಲು ಸಂಬಂಧಿತರಿಗೆ ಸೂಚನೆ ನೀಡಿದ್ದೇನೆ.
ಈವರೆಗೆ ಶಿಷ್ಯವೇತನ ನೀಡುತ್ತಿರುವಂತೆ ಈಗಲೂ ನೀಡಬೇಕು ಎಂಬುದು ಸರ್ಕಾರದ ಬಯಕೆ. ಹಾಗಾಗಿಯೇ ನಾನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಹೋರಾಟ ಕೈ ಬಿಡಿ ಎಂದು ಧರಣಿನಿರತ ಕಿರಿಯ ವೈದ್ಯರನ್ನು ಮತ್ತೆ ವಿನಂತಿಸಿದರು.
ಆದರೂ, ಧರಣಿ ನಿರತರು ಒಪ್ಪಲೇ ಇಲ್ಲ. ನೀವು ಹೀಗೆ ಹೋದರೆ ನಷ್ಟವಾಗುವುದು ನಿಮಗೆ. ನಿಮ್ಮ ಸೇವೆ ನಮಗೆ ಬೇಡ. ನೀವು ಯಾವ ಕಾಲೇಜಿನಲ್ಲಿ ಓದುತ್ತಿರುವಿರೋ ಅಲ್ಲೇ ಆಸ್ಪತ್ರೆ ಮಾಡಿಕೊಂಡು, ಹೌಸ್ ಸರ್ಜನ್ ಆಗಿ ಕೆಲಸ ಮಾಡಿ ಎಂಬುದಾಗಿ ಹೇಳಿದರೆ ನಷ್ಟವಾಗುವುದು ನಿಮಗೆ. ನಿಮ್ಮಂತೆಯೇ ಹೋದರೆ ಕೆಲಸ ಆಗೊಲ್ಲ. ಹಾಗಾಗಿ ಹೋರಾಟ ಕೈ ಬಿಡಿ ಎಂದರು. ಆದರೂ, ಧರಣಿ ನಿರತರು ಪಟ್ಟು ಸಡಿಸಲಿಲ್ಲ. ಧರಣಿ ಮುಂದುವರೆಸುತ್ತೇವೆ ಎಂದು ಸಚಿವರಿಗೆ ತಿಳಿಸಿ, ಧರಣಿ ಮುಂದುವರೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.