ಕಾಂಗ್ರೆಸ್‌ಗೆ ಯುವ ಕಾರ್ಯಕರ್ತರೇ ದೊಡ್ಡ ಶಕ್ತಿ: ನಲಪಾಡ್‌

ರಾಜ್ಯದ ಜನ ವಿರೋಧಿ ಸರಕಾರ ಕಿತ್ತೆಸೆಯಲು ಕಾರ್ಯಪ್ರವೃತ್ತರಾಗಿ

Team Udayavani, May 1, 2022, 4:49 PM IST

congress

ದಾವಣಗೆರೆ: ಕಾಂಗ್ರೆಸ್‌ಗೆ ಯುವ ಕಾರ್ಯಕರ್ತರೇ ದೊಡ್ಡ ಶಕ್ತಿಯಾಗಿದ್ದಾರೆ. ಪಕ್ಷದ ಅಭಿವೃದ್ಧಿಯಲ್ಲಿ ಯುವ ಕಾರ್ಯಕರ್ತರ ಕೊಡುಗೆ ಅಪಾರ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ತಿಳಿಸಿದರು.

ಶುಕ್ರವಾರ ತಡರಾತ್ರಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್‌ ಅಡ್ಮಿನ್‌ ಮಹಬೂಬ್‌ ಬಾಷಾರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ವಿಷಯ ಬಂದಾಗ ಯುವಕರ ಕೊಡುಗೆ ಅತ್ಯಮೂಲ್ಯ ವಾದದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ವಿರುದ್ಧ ಹೋರಾಡಲು ಯುವ ಕಾರ್ಯಕರ್ತರು ಇನ್ನೂ ಹೆಚ್ಚು ಉತ್ಸುಕರಾಗಿ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಕಿತ್ತೂಗೆಯುವವರೆಗೂ ವಿರಮಿಸದೆ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.

ರಾಜ್ಯ ಕಂಡ ಅತೀ ಭ್ರಷ್ಟ ಹಾಗೂ ಕೋಮುದ್ವೇಷ ಸಾಧಿಸುವ ಸರ್ಕಾರ ಯಾವುದಾದರೂ ಇದ್ದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಾಗಿದೆ. ಸರ್ಕಾರಕ್ಕೆ ಜನ ಹಿತಕ್ಕಿಂತ ತನ್ನ ಪಕ್ಷದ ಸಿದ್ಧಾಂತ ಹಾಗೂ ಭ್ರಷ್ಟರನ್ನು ರಕ್ಷಿಸುವ ಹೊಣೆಗಾರಿಕೆಯೇ ಮುಖ್ಯವಾಗಿದೆ. ಆದ್ದರಿಂದ ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ಸಹ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಅಸಹಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ನಿಖೀಲ್‌ ಕೊಂಡಜ್ಜಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ನಿಶ್ಚಯ. ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಗಲಿರುಳೆನ್ನದೆ ಇನ್ನಷ್ಟು ಶ್ರಮವಹಿಸಬೇಕಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್‌ ಖಾಲಿದ್‌ ಅಹ್ಮದ್‌ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯ ನಾಯಕರ ಕೈ ಬಲಪಡಿಸಲು ಶ್ರಮವಹಿಸಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮಿರ್ನಲ್‌ ಹೆಬ್ಟಾಳ್ಕರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಚೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಸಾಗರ್‌, ರಂಜಿತ್‌, ನವೀನ್‌ ನಲವಾಡಿ, ಅವಿನಾಶ್‌, ವಿನಯ್‌ ಜೋಗಪ್ಪನವರ್‌, ರಿಹಾನ್‌, ಮೊಹಮ್ಮದ್‌ ಜಿಕ್ರಿಯಾ, ಲಿಯಾಖತ್‌ ಅಲಿ, ಸುರೇಶ್‌ ಜಾಧವ್‌, ಹರೀಶ್‌, ಫಜ್ಲೂರ್‌ ರಹಮಾನ್‌, ಸೈಯದ್‌ ತಾಜ್‌ ಇತರರು ಇದ್ದರು.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Davanagere: Special tax operation: 1.65 crore tax collection in a single day

Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ

Siddaramaiah will resigns before Assembly session: R. Ashok

Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.