ಗಾಜಿನಮನೆಯಲ್ಲಿ ಹಣ್ಣುಗಳ ರಾಜನ ದರ್ಬಾರ್‌!

Team Udayavani, May 18, 2019, 10:29 AM IST

18-May-4

ದಾವಣಗೆರೆ: ಮಾವು ಮೇಳದಲ್ಲಿ ಡಿಸಿ ಜಿ.ಎನ್‌. ಶಿವಮೂರ್ತಿ, ಸಿಇಒ ಬಸವರಾಜೇಂದ್ರ, ಎಸಿ ಕುಮಾರಸ್ವಾಮಿ.

ದಾವಣಗೆರೆ: ಆಮ್ಲೆಟ್, ಮರಿಗೌಡ, ಕಾಲಾಪಾಡ್‌, ಕಲರ್‌ಪಳ್‌, ಆಮ್ರಪಾಲಿ, ಗೋಲಿಲ್ನಾಟಿ, ರತ್ನ, ಇಮಾಮ್‌ ಪಸಂದ್‌, ಎಚ್-13, ನಿರಂಜನ್‌, ಅರ್ಕ ಪುನೀತ್‌, ಸುಂದರ್‌ ಷಾ, ಅರ್ಕನೀಲ ಕಿರಣ್‌, ರಂಗೂನ್‌ ಗೋವಾ, ಲಾಲ್ಖಾತ್ರ, ಚಿರುಕು ರಸಂ, ಪೂಸಾ ಸೂರ್ಯ, ಮಾನ್ಯ-2, ಬನೇಶಾನ್‌, ಬಂದಾರಿಯಾ, ಇಲೈಸಿ, ಐಶ್ವರ್ಯ….

ಅರೇ ಇವೆಲ್ಲಾ ಏನು ಅನ್ನಿಸಬಹುದು. ಇವು ಹಣ್ಣುಗಳ ರಾಜ… ಎಂದೇ ಕರೆಯಲ್ಪಡುವ ಮಾವಿನ ವಿವಿಧ ತಳಿಗಳ ಹೆಸರು!.

ಹ್ಹಾ …ಆಮ್ಲೆಟ್, ಕಲರ್‌ಪಳ್‌, ಮರಿಗೌಡ, ಗೋಲಿಲ್ನಾಟಿ, ಆಮ್ರಪಾಲಿ, ಎಚ್-13, ನಿರಂಜನ್‌, ರತ್ನ, ಮಾನ್ಯ… ಎನ್ನುವಂತಹ ಮಾವಿನ ಹಣ್ಣುಗಳು ಇದಾವಾ ಎಂದು ಆಶ್ಚರ್ಯ ಆಗಬಹುದು. ನಿಜವಾಗಿಯೂ ಇವು ಮಾವಿನ ಹಣ್ಣುಗಳ ವಿವಿಧ ತಳಿಗಳು. ಅಂತಹ ಎಲ್ಲ ಮಾವಿನ ಹಣ್ಣುಗಳನ್ನ ಒಟ್ಟಿಗೆ ನೋಡಬೇಕು ಎನ್ನುವುದಾದರೆ ಗಾಜಿನಮನೆಗೆ ಭೇಟಿ ನೀಡಿದರೆ ಸಾಕು. ಒಂದೇ ಕಡೆ 30ಕ್ಕೂ ಹೆಚ್ಚು ವಿವಿಧ ಮಾವಿನ ಹಣ್ಣುಗಳನ್ನ ನೋಡಬಹುದು, ಮಾತ್ರವಲ್ಲ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನ ಮನಃಪೂರ್ವಕವಾಗಿ ಸವಿಯಲೂಬಹುದು.

ನೈಸರ್ಗಿಕವಾಗಿ ಮಾಗಿಸಿದ, ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವ, ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ, ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಒಳಗೊಂಡಂತೆ ವಿವಿಧ ಉದ್ದೇಶದೊಂದಿಗೆ ಆಯೋಜಿಸಲಾಗಿರುವ ಮೇಳದಲ್ಲಿ ಸಂತೇಬೆನ್ನೂರು, ಹಾವೇರಿ ಮುಂತಾದ ಕಡೆಯಲ್ಲಿ ಬೆಳೆಯಲಾಗಿರುವ ಹಣ್ಣುಗಳನ್ನ ಗ್ರಾಹಕರು ಯೋಗ್ಯ ಬೆಲೆಗೆ ಕೊಂಡುಕೊಳ್ಳಬಹುದು.

ಅಡಕೆ ಮಾವು… ಎಂಬ ಸಣ್ಣ ಗಾತ್ರದ ಮಾವಿನ ರುಚಿ ಸಖತ್‌ ಟೇಸ್ಟ್‌. ನೋಡಲಿಕ್ಕೆ ಅಡಕೆ ಗಾತ್ರದಂತಿರುವ ಈ ಮಾವಿನ ಹಣ್ಣನ್ನು ನಮ್ಮ ಸಂತೇಬೆನ್ನೂರು ಬಳಿ ಬೆಳೆಯಲಾಗುತ್ತದೆ. ಆದರೆ, ಅಡಕೆ ಮಾವು ಹೆಚ್ಚಾಗಿ ಬೆಳೆಯುವುದಿಲ್ಲ ಎನ್ನುವುದೇ ವಿಶೇಷ. ಹಣ್ಣಿನ ಗಾತ್ರ ಸಣ್ಣದ್ದಾಗಿದ್ದರೂ ರುಚಿ ಬಹಳ ಚೆನ್ನಾಗಿ ಇರುತ್ತದೆ ಎನ್ನುತ್ತಾರೆ ಸಂತೇಬೆನ್ನೂರಿನ ರೋಷನ್‌.

ಕರ್ನಾಟಕದಲ್ಲಿ ಅತಿ ಕಡಿಮೆಯಾಗಿ ಬೆಳೆಯುವ ಕೇಸರ್‌… ಹಣ್ಣು ಬಹಳ ರುಚಿಯಾಗಿರುತ್ತದೆ. ನಮಗಿಂತಲೂ ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚಾಗಿ ಕೇಸರ್‌… ಮಾವಿನಹಣ್ಣು ಬೆಳೆಯಲಾಗುತ್ತದೆ. ಮೇಳದ ಅಂಗವಾಗಿ ದೂರದ ಮಹಾರಾಷ್ಟ್ರದಿಂದ ತರಿಸಿ, ಮಾರಾಟ ಮಾಡಲಾಗುತ್ತಿದೆ.

ಇತರೆ ಎಲ್ಲಾ ಹಣ್ಣುಗಳಿಗಿಂತಲೂ ಡಿಫರೆಂಟ್ ಟೇಸ್ಟ್‌ನ ಮಲಗೋವಾ, ಸ್ಥಳೀಯ ತಳಿ ಸಿಂಧೂರ, ನಾರು ಹೆಚ್ಚಾಗಿ ಇರದ, ಸಿಪ್ಪೆ ತಿನ್ನುತ್ತಿದ್ದಂತೆ ಸಕ್ಕರೆ ತಿಂದ ಸವಿ ನೀಡುವ ಬೇನಿಶಾನ್‌, ಎಲ್ಲಕ್ಕಿಂತಲೂ ಬಲು ರುಚಿಯ ದಶೆಹರಿ, ಸಾರ್ವಜನಿಕರು, ಮಾವಿನ ಪ್ರಿಯರು ಅತೀ ಹೆಚ್ಚಾಗಿಯೇ ಬಯಸುವ ಬಾದಾಮಿ, ಅತಿ ಹೆಚ್ಚಿನ ಉದ್ದನೆಯ, ಭರಪೂರ ಸಿಹಿಯ ಮಲ್ಲಿಕಾ… ಎಲ್ಲಾ ಬಗೆಯ ಹಣ್ಣುಗಳು ಮೇಳದಲ್ಲಿ ಲಭ್ಯ. ರಾಜ್ಯ ಮಾರುಕಟ್ಟೆ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಈ ತಿಂಗಳ 23ರ ವರೆಗೆ ನಡೆಯಲಿದೆ. ಮಾವು ಪ್ರಿಯರು ಎಲ್ಲ ರೀತಿಯ ಹಣ್ಣುಗಳ ಸವಿಯನ್ನು ಸವಿಯಬಹುದು.

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.