ಈದ್ ಮಿಲಾದ್ ಸಂಭ್ರಮ
ಮೆಕ್ಕಾ-ಮದೀನಾ ಪ್ರತಿಕೃತಿ ಮೆರವಣಿಗೆಶುಭಾಶಯ ವಿನಿಮಯತಂಪು ಪಾನೀಯ, ಉಪಾಹಾರ ವ್ಯವಸ್ಥೆ
Team Udayavani, Nov 11, 2019, 11:27 AM IST
ದಾವಣಗೆರೆ: ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್‌ರವರ 1494ನೇ ಜನ್ಮ ದಿನದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭಾನುವಾರ ಅತ್ಯಂತ ಸಂಭ್ರಮದಿಂದ ಜಸ್ನೆ ಈದ್ ಮಿಲಾದ್ ಉನ್ನದಿ ಆಚರಿಸಲಾಯಿತು.
ಆಜಾದ್ ನಗರದಲ್ಲಿರುವ ಈದ್ ಮಿಲಾದ್ ಕಮಿಟಿ ಕಚೇರಿ ಎದುರು ವಿಶೇಷ ಫಾತೇಹಖಾನಿ… ಓದುವ ಮೂಲಕ ಭವ್ಯ ಈದ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈದ್ ಮಿಲಾದ್ ಕಮಿಟಿ ಕಚೇರಿ ಎದುರಿನಿಂದ ಪ್ರಾರಂಭವಾದ ಮೆರವಣಿಗೆ ಅಹಮ್ಮದ್‌ನಗರ, ಚಾಮರಾಜ ಪೇಟೆ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಬಾರ್‌ಲೈನ್ ರಸ್ತೆ, ಅರುಣಾ ಚಿತ್ರಮಂದಿರದ ವೃತ್ತ, ಹಳೆ ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಕೆ.ಆರ್. ರಸ್ತೆ ಮೂಲಕ ಮಾಗಾನಹಳ್ಳಿ ರಸ್ತೆಯಲ್ಲಿರುವ ಮಹಮ್ಮದ್ ಅಲಿ ಜೋಹರ್ ನಗರದಲ್ಲಿನ ಈದ್ ಮಿಲಾದ್ ಮೈದಾನದಲ್ಲಿ ವಿಶೇಷ ಫಾತೇಹಖಾನಿ ಮೂಲಕ ಮುಕ್ತಾಯವಾಯಿತು.
ವಿನೋಬ ನಗರದಿಂದ ಪ್ರಾರಂಭವಾದ ಈದ್ ಮೆರವಣಿಗೆ ಅರುಣಾ ಚಿತ್ರಮಂದಿರ ವೃತ್ತದಲ್ಲಿ ಮುಖ್ಯ ಮೆರವಣಿಗೆ ಸೇರಿ ಮುಂದೆ ಸಾಗಿತು. ಕೆಟಿಜೆ ನಗರ 8 ನೇ ಕ್ರಾಸ್‌ನಿಂದ ಪ್ರಾರಂಭವಾದ ಮೆರವಣಿಗೆ ಶಿವಪ್ಪಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತದಲ್ಲಿ ಮುಖ್ಯ ಮೆರವಣಿಗೆ ಕೂಡಿಕೊಂಡಿತು.
ಈದ್ ಮಿಲಾದ್ ಮೆರವಣಿಗೆಯಲ್ಲಿ ಜನಸಾಗರವೇ ಹರಿದು ಬಂತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ಸಾಗಿ ಬರುವ ಅಕ್ಕಪಕ್ಕದ ವೃತ್ತ, ಪ್ರಮುಖ ಸ್ಥಳಗಳಲ್ಲಿ ತಂಪು ಪಾನೀಯ, ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಮಕ್ಕಳು ಈದ್ ಮೆರವಣಿಗೆ ವೈಭವವನ್ನು ಕಣ್ತುಂಬಿಕೊಂಡರು.
ಮೆರವಣಿಗೆಯಲ್ಲಿ ಅತ್ಯಾಕರ್ಷಕ ಗುಂಬಜ್‌ಗಳು ಕಂಡು ಬಂದವು. ಪ್ರಮುಖ ಸ್ಥಳದಲ್ಲಿ ದತ್… ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಈದ್ ಮೆರವಣಿಗೆ ಸಾಗಿ ಬಂದ ಚಾಮರಾಜಪೇಟೆ ವೃತ್ತದಲ್ಲಿ ರಾಷ್ಟ್ರಧ್ವಜ ರಾರಾಜಿಸಿದ್ದು ದೇಶಪ್ರೇಮದ ಪ್ರತೀಕವಾಗಿತ್ತು. ಹಿಂದೂ ಸಮಾಜದ ಮುಖಂಡರು ಸಹ ಈದ್ ಮೆರವಣಿಗೆ ಚಾಲನೆ ಸಂದರ್ಭದಲ್ಲಿದ್ದರು.
ಅತ್ಯಂತ ಶಾಂತಿಯುತವಾಗಿ ಸಡಗರ, ಸಂಭ್ರಮದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ಮಾ ಡಲಾಗಿತ್ತು. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ,ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಈದ್ ಲಾದ್ ಕಮಿಟಿ ಅಧ್ಯಕ್ಷ ಖಾಜಿ ಅತಾವುಲ್ಲಾ ರಜ್ವಿ, ಯಾಸೀನ್‌ಪೀರ್ ರಜ್ವಿ, ಮುಖಂಡರಾದ ಸಾದಿಕ್ ಪೈಲ್ವಾನ್, ಹಿಂದೂ ಸಮಾಜದ ಮುಖಂಡ ಕೆ.ಬಿ. ಶಂಕರನಾರಾಯಣ, ಅಯೂಬ್ ಪೈಲ್ವಾನ್, ಸೈಯದ್ ಸೈಪುಲ್ಲಾ, ಅಲ್ಲಾವಲಿ ಗಾಜಿಖಾನ್, ಡಿ. ಅಸ್ಲಾಂಖಾನ್, ಎಸ್.ಎಂ. ಗೌಸ್, ಜೆ. ಅಮಾನುಲ್ಲಾ ಖಾನ್, ಎಂ. ಟಿಪ್ಪುಸುಲ್ತಾನ್, ಸೈಯದ್ ಶಾಹೀನ್, ಕೋಳಿ ಇಬ್ರಾಹಿಂ, ಅಬ್ದುಲ್ ಲತೀಫ್, ಟಾರ್ಗೆಟ್ ಅಸ್ಲಾಂ, ಎ.ಬಿ. ರಹೀಂಸಾಬ್, ಜಬೀವುಲ್ಲಾ, ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.