ಕಾಂಗ್ರೆಸ್‌ನ 50 ಕೋಟಿ ರೂ. ಆರೋಪ ಸುಳ್ಳು
Team Udayavani, Apr 10, 2019, 1:10 PM IST
ದಾವಣಗೆರೆ: ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಚುನಾವಣೆಯಲ್ಲಿ ಹಂಚುವುದಕ್ಕೆ ಅಲ್ಲಲ್ಲಿ 50 ಕೋಟಿ ಡಂಪ್ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು ಬಿಜೆಪಿ ವಕ್ತಾರ ಕೊಂಡಜ್ಜಿ ಜಯಪ್ರಕಾಶ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಣ ಡಂಪ್ ಮಾಡಿದ್ದಾರೆ ಎಂಬ ಸಣ್ಣತನದ ಆರೋಪ ಮಾಡಿರುವ ಡಿ. ಬಸವರಾಜ್ ಅವರಿಗೆ ಎಲ್ಲದ್ದಕ್ಕೂ ವಿರೋಧ ಮಾಡಬೇಕು ಎಂಬ ಕಾಯಿಲೆ ಇದೆ. ವಿರೋಧ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುವ ಅವರು ಅಂತಹ ಹೇಳಿಕೆ ಬಿಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ
ಒತ್ತಾಯಿಸಿದರು.
ರಾಜ್ಯದಲ್ಲಿ ಅವರದ್ದೇ ಪಕ್ಷದ ಬೆಂಬಲದ ಸರ್ಕಾರ ಇದೆ. ಇಲಾಖೆಗಳು ಇವೆ. ಅವುಗಳಿಂದಲೇ ತನಿಖೆ ನಡೆಸಲಿ, ಬೇಡ ಎನ್ನುವುದೇ ಇಲ್ಲ. ಬಿಜೆಪಿ ಅಭ್ಯರ್ಥಿಗೆ ಹಣ ಹಂಚಿ ಮತ ಪಡೆಯುವಂತಹ ಸನ್ನಿವೇಶವೇ ಇಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಕೈ ಮುಗಿದುಕೊಂಡು ಹೋಗಿ ಮತಯಾಚನೆ
ಮಾಡುತ್ತಿದ್ದಾರೆ. ಅವರ ಪಕ್ಷದ ಮುಖಂಡರು ಮೂರು ಚುನಾವಣೆಯಲ್ಲಿ ಹಣ ಹಂಚಿ ಈಗ ಮನೆ ಸೇರಿಕೊಂಡಿದ್ದಾರೆ. ಹಣ ಹಂಚಿ ಮತ ಪಡೆಯುವುದೇ ಆಗಿದ್ದರೆ ನಾಲ್ಕು ಚುನಾವಣೆಯಲ್ಲಿ ಅವರ ನಾಯಕ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಕ್ಷೇತ್ರಕ್ಕೆ 10 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.
ಅವರ ಸಾಧನೆ ಶೂನ್ಯ ಎಂದು ಆರೋಪ ಮಾಡಿರುವ ಡಿ. ಬಸವರಾಜ್ ಪಕ್ಷದವರ ಸಾಧನೆ ಏನು? ಅವರ ಪಕ್ಷದ ಅಭ್ಯರ್ಥಿಯಾಗಿರುವ ಎಚ್.ಬಿ. ಮಂಜಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಏನು ಕೆಲಸ ಮಾಡಿಸಿದ್ದಾರೆ ಎಂದು ಪ್ರಶ್ನಿಸಿದರು.
ರೈತ ಕುಟುಂಬದಿಂದ ಬಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ್ ವ್ಯಾಪಾರ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆಯುವ ಅವರು ಯಾರೇ ಆಗಲಿ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಸ್ವೀಕರಿಸುತ್ತಾರೆ. ಜನತೆಗೆ ಸ್ಪಂದಿಸುತ್ತಾರೆ.
ಆ ಕಾರಣದಿಂದಾಗಿಯೇ ಅವರಿಗೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಆಶೀರ್ವಾದ ಮಾಡಲಿದ್ದಾರೆ. ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸುವರು ಎಂದು ವಿಶ್ವಾಸ
ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಸಹ ಸಂಸದರಾಗಿದ್ದರು. ಯಾವುದೇ ಅಭಿವೃದ್ಧಿ ಮಾಡಲೇ ಇಲ್ಲ. ಜನರೊಂದಿಗೆ ಬೆರೆಯಲಿಲ್ಲ. ಬರೀ ದಾವಣಗೆರೆಗೆ
ಸೀಮಿತವಾಗಿದ್ದವರಿಗೆ ನಮ್ಮ ಬಗ್ಗೆ ಮಾತನಾಡುವ ಅಧಿಕಾರ, ನೈತಿಕತೆಯೇ ಇಲ್ಲ ಎಂದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸ್ವಾಗತಾರ್ಹ. ಕಾಂಗ್ರೆಸ್‌ನವರು 70 ವರ್ಷದ ನಂತರ ಈಗ ನ್ಯಾಯ ಕೊಡಿಸುತ್ತೇವೆ ಎಂದು ಹೊರಟಿದ್ದಾರೆ. ಗರೀಬಿ ಹಠಾವೋ ಎಂದರು. ಆದರೆ ಬಡತನ ನಿರ್ಮೂಲನೆ ಆಗಲಿಲ್ಲ. 20 ಅಂಶ ಜಾರಿಯಾಗಲೇ ಇಲ್ಲ.
ಅಲ್ಪಸಂಖ್ಯಾತರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ನಮ್ಮದು ಕನಸನ್ನ ನನಸು ಮಾಡುವಂತಹ, ಸಶಕ್ತ ಭಾರತ ನಿರ್ಮಾಣದ ಪ್ರಣಾಳಿಕೆ ಎಂದು ಹೇಳಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್, ಬಿ.ಎಸ್. ಜಗದೀಶ್, ಬಿ.ಎಂ. ಸತೀಶ್, ಪ್ರಸನ್ನಕುಮಾರ್, ಧನುಷ್ ರೆಡ್ಡಿ, ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಡಿ. ಬಸವರಾಜ್ ಅವರಿಗೆ ಎಲ್ಲದ್ದಕ್ಕೂ ವಿರೋಧ ಮಾಡಬೇಕು ಎಂಬ ಕಾಯಿಲೆ ಇದೆ. ವಿರೋಧ ಮಾಡುವುದನ್ನೇ ಹವ್ಯಾಸ
ಮಾಡಿಕೊಂಡಿರುವ ಅವರು ಅಂತಹ ಹೇಳಿಕೆ ಬಿಡಬೇಕು.
ಕೊಂಡಜ್ಜಿ ಜಯಪ್ರಕಾಶ್, ಬಿಜೆಪಿ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.