ಬಿಜೆಪಿ ಸಂಸದರೇ ಏನು ಮಾಡಿದ್ದೀರಿ ಲೆಕ್ಕ ಕೊಡಿ: ಖರ್ಗೆ
Team Udayavani, Apr 11, 2019, 12:07 PM IST
ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
ಕಲಬುರಗಿ: ನಾನು 10 ವರ್ಷ ಸಂಸದನಾಗಿ ಕಲಬುರಗಿಗೆ ಏನು
ಮಾಡಿದ್ದೇನೆ ಎನ್ನುವ ಲೆಕ್ಕ ಕೊಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ 18
ಸಂಸದರು ಏನು ಮಾಡಿದ್ದಾರೆ ಎನ್ನುವ ಲೆಕ್ಕ ಕೊಡಲಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ಅಫಜಲಪುರ ತಾಲೂಕಿನ ಗೊಬ್ಬುರ (ಬಿ), ಭೈರಾಮಡಗಿ, ಅತನೂರ,
ಮಲ್ಲಾಬಾದ್ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ
ಅವರು, ತಾವು ಪುನಃ ಗೆದ್ದು ಬಂದರೆ ಸುಳ್ಳು ಹೇಳುವುದು ನಡೆಯುವುದಿಲ್ಲ
ಎಂದು ತಿಳಿದು ಪ್ರಧಾನಿ ನರೇಂದ್ರ ಮೋದಿ ಷಡ್ಯಂತ್ರ ರೂಪಿಸುತ್ತಿದ್ದಾರೆ
ಎಂದು ಆಪಾದಿಸಿದರು.
ಕಲಬುರಗಿ ಜನ 11 ಸಲ ಗೆಲ್ಲಿಸುತ್ತಾ ಬಂದಿದ್ದಾರೆ. ಈಗಲೂ ಗೆಲ್ಲಿಸುತ್ತಾರೆ.
ಜನ ಬೆಂಬಲ ಇರುವವರೆಗೂ ಇಂತಹ ನಾಯಕರ್ಯಾರು ಏನು
ಮಾಡಲಿಕ್ಕಾಗುವುದಿಲ್ಲ. ಪ್ರಧಾನಿ ಮೋದಿ ಕಲಬುರಗಿಗೆ ಏನು ಕೊಟ್ಟಿದ್ದಾರೆಂಬುದನ್ನು ಹೇಳಲಿ ಎಂದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ
ನಾಯಕನಾಗಲು ನಾಲ್ಕು ದಶಕಗಳೇ ಹಿಡಿದಿವೆ. ಇಂತಹ ನಾಯಕನನ್ನು
ಗೆಲ್ಲಿಸುವ ಮುಖಾಂತರ ಜಿಲ್ಲೆಯ ಕೀರ್ತಿ ದೇಶಕ್ಕೆ ಪರಿಚಯಿಸಬೇಕೆಂದು
ಕೋರಿದರು. ಮಾಜಿ ಸಂಸದ ಕೆ.ಬಿ. ಶಾಣಪ್ಪ, ಮಾಜಿ ಸಚಿವ ಬಾಬುರಾವ್
ಚವ್ಹಾಣ, ಮುಖಂಡರಾದ ರಾಜೇಂದ್ರ ಪಾಟೀಲ ರೇವೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.