ಕಾಂಗ್ರೆಸ್‌ನ ಎರಡೂ ಕ್ಷೇತ್ರದಲ್ಲೂ ಬಿಜೆಪಿಗೆ ಲೀಡ್!
ಬಿಜೆಪಿ ಶಾಸಕರ ಕ್ಷೇತ್ರದಲ್ಲೂ ಉತ್ತಮ ಸಾಧನೆ
Team Udayavani, May 25, 2019, 10:28 AM IST
ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲೇ ಬಿಜೆಪಿ ಲೀಡ್ ಪಡೆದಿದೆ.
ಬಿಜೆಪಿಯ ಪಾಲಿಗೆ ಕಠಿಣ… ಎಂದೇ ಪರಿಗಣಿಸಲ್ಪಡುವ, ಕಾಂಗ್ರೆಸ್ ಅಭೇದ್ಯ ಕೋಟೆ, ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೇ ಬಿಜೆಪಿ 8,516 ಮತಗಳ ಮಹತ್ತರ ಲೀಡ್ ಪಡೆದುಕೊಂಡಿದೆ.
ದಾವಣಗೆರೆ ಮಹಾನಗರ ಪಾಲಿಕೆಯ 1 ರಿಂದ 17 ಮತ್ತು 23ನೇ ವಾರ್ಡ್ ಹಾಗೂ ಹದಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿ ಹೊಂದಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 65 ಸಾವಿರದಷ್ಟಿರುವ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಹದಡಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಶಾಮನೂರು ಶಿವಶಂಕರಪ್ಪ ಕಳೆದ 15 ವರ್ಷದಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ರಾಜಕೀಯದ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ 8,516 ಲೀಡ್ ಗಳಿಸಿದ್ದಾರೆ. ಸಿದ್ದೇಶ್ವರ್ 70,765 ಮತ ಪಡೆದಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 62,249 ಮತ ಗಳಿಸಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 8,516 ಮತಗಳ ಮುನ್ನಡೆ ಕಂಡಿರುವುದು ಬಿಜೆಪಿ ಮಟ್ಟಿಗಂತೂ ಗಮನಾರ್ಹ ಸಾಧನೆ.
ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಪ್ರತಿನಿಧಿಸುವ ಹರಿಹರ ಕ್ಷೇತ್ರದಲ್ಲಿ ಸಹ ಬಿಜೆಪಿ ಲೀಡ್ ಪಡೆದುಕೊಂಡಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲೂ ಸೋಲಿನ ಕಹಿ ಕಂಡಿರುವ ಹರಿಹರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ಗಳಿಸಿಕೊಂಡಿರುವುದು ಮುಂದಿನ ಚುನಾವಣೆಯಲ್ಲಿನ ಬದಲಾವಣೆಯ ಮುನ್ಸೂಚನೆ.
ಹರಿಹರ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ 80,779 ಮತ ಗಳಿಸಿದರೆ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 67,215 ಮತ ಪಡೆದಿದ್ದಾರೆ. ಸಿದ್ದೇಶ್ವರ್ 13,564 ಮತಗಳ ಲೀಡ್ ಗಳಿಸಿದ್ದಾರೆ.
ಹರಿಹರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರ ಕುರುಬ ಸಮುದಾಯದ ಮತಗಳು ನಿರ್ಣಾಯಕ. ಮೈತ್ರಿ ಅಭ್ಯರ್ಥಿ ಪರವಾದ ಪ್ರಬಲ ಅಲೆಯೂ ಇತ್ತು. ಹಾಗಾಗಿ ಹರಿಹರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಅತೀ ಹೆಚ್ಚಿನ ಮತ ಪಡೆಯಲಿದ್ದಾರೆ ಎಂಬ ಲೆಕ್ಕಾಚಾರ ಇತ್ತು. ಆ ನಡುವೆಯೂ ಬಿಜೆಪಿ ಹರಿಹರದಲ್ಲಿ ಲೀಡ್ ಪಡೆಯುವ ಮೂಲಕ ಮತ್ತೆ ಕಮಲದ ಕರಾಮತ್… ಪ್ರದರ್ಶಿಸಿದೆ.
ಕಾಂಗ್ರೆಸ್ ಶಾಸಕರು ಇರುವಂತಹ ಹರಿಹರ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲೀಡ್ ಪಡೆದಿರುವ ಬಿಜೆಪಿ ತನ್ನದೇ ಶಾಸಕರ ಕ್ಷೇತ್ರದಲ್ಲೂ ಭರ್ಜರಿ ಎನ್ನುವಂತಹ ಲೀಡ್ ಪಡೆದುಕೊಂಡಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಬಿಜೆಪಿಯವರೇ ನಿಬ್ಬೆರಗಾಗುವಂತಹ ಶಾಕಿಂಗ್ ಫಲಿತಾಂಶ ನೀಡಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗಳಿಸಿರುವ ಮತಗಳು ಮತ್ತು ಲೀಡ್ ದಾವಣಗೆರೆ ಉತ್ತರ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾರಿ ಸಾರಿ ಹೇಳುವಂತಿವೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಬರೋಬರಿ 1,04,480 ಮತ ಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ದೊರೆತಿರುವ ಲೀಡ್ ಪ್ರಮಾಣ 54,106 ಮತಗಳು. ಸಿದ್ದೇಶ್ವರ್ ಗೆಲುವು ಸಾಧಿಸಿರುವ 1,69,702 ಮತಗಳ ಅಂತರದಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಪಾಲೇ ಸುಮಾರು ಮೂರರಲ್ಲಿ ಒಂದರಷ್ಟು.
ದಾವಣಗೆರೆ ಉತ್ತರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ಷೇತ್ರ. ತಮ್ಮ ನೆಚ್ಚಿನ ಶಿಷ್ಯನನ್ನ ಅಖಾಡಕ್ಕಿಳಿಸಿ, ಗೆಲ್ಲಿಸುವ ಮೂಲಕ ತಮ್ಮ ಶಕ್ತಿ, ಪಾರಮ್ಯ ಏನು ಎಂಬುದನ್ನ ಜಗಜ್ಜಾಹೀರುಗೊಳಿಸಲು ಮತ್ತು ದಾವಣಗೆರೆ ಉತ್ತರದಲ್ಲಿ ಖದರ್…. ಇದೆ. ಸೋತ ಮಾತ್ರಕ್ಕೆ ತಮ್ಮ ಪ್ರಭಾವ ಕಡಿಮೆ ಆಗಿಲ್ಲ ಎಂದು ತೋರಿಸಲು ಸ್ವತಃ ಎಸ್.ಎಸ್. ಮಲ್ಲಿಕಾರ್ಜುನ್ ಕಾಲಿಗೆ ಚಕ್ರ ಕಟ್ಟಿಕೊಂಡಿರುವಂತೆ ಭಾರೀ ಪ್ರಚಾರ ನಡೆಸಿದ್ದರು.
ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಹೆಚ್ಚಿನ ಮತಗಳು ಮಾತ್ರವಲ್ಲ ಲೀಡ್ ಪಡೆದೇ ತೀರುತ್ತಾರೆ ಎಂಬ ಲೆಕ್ಕಾಚಾರ ಇತ್ತು. ಆದರೆ, ಮತದಾರರು ಬಿಜೆಪಿಯತ್ತ ಭಾರೀ ಒಲವು ತೋರಿದ್ದಲ್ಲದೆ ಭರ್ಜರಿ ಲೀಡ್ ಸಹ ನೀಡಿದ್ದಾರೆ.
ಈಗ ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಕೆಲವಾರು ಆಂತರಿಕ ವಿಚಾರ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದೇ ಊಹಿಸಲಾಗಿತ್ತಾದರೂ ಬಿಜೆಪಿ 22,016 ಲೀಡ್ ಪಡೆದಿದೆ. ಜಿ.ಎಂ. ಸಿದ್ದೇಶ್ವರ್ 80,779 ಮತ ಪಡೆದಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 61,210 ಮತ ಗಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಮೂಲ ಹೊನ್ನಾಳಿಯಲ್ಲೂ ಬಿಜೆಪಿ 13,375 ಮತಗಳ ಲೀಡ್ ಪಡೆದಿದೆ. ಚನ್ನಯ್ಯ ಒಡೆಯರ್ ನಂತರ ಹಿಂದುಳಿದ ಸಮಾಜ ಅಭ್ಯರ್ಥಿಯೊಬ್ಬರು ಕಣದಲ್ಲಿದ್ದಾರೆ ಎನ್ನುವ ಜೊತೆಗೆ ಮಂಜಪ್ಪ ಅವರ ಸಮುದಾಯದ ಮತಗಳು ಹೆಚ್ಚಿರುವುದು, ನಮ್ಮ ತಾಲೂಕಿನವರಿಗೆ ಅವಕಾಶ ನೀಡೋಣ… ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಹೊನ್ನಾಳಿ ಕ್ಷೇತ್ರದಲ್ಲಿ ಲೀಡ್ ಪಡೆದೇ ಪಡೆಯುತ್ತಾರೆ ಎಂದು ಅಂದಾಜಿಸಲಾಗಿತ್ತು.
ಆದರೂ, ಬಿಜೆಪಿ 13,375 ಲೀಡ್ ಪಡೆಯುವ ಮೂಲಕ ಹೊನ್ನಾಳಿ ಬಿಜೆಪಿಯ ಭದ್ರಕೋಟೆ ಎಂಬುದು ಸಾಬೀತುಪಡಿಸಿದೆ. ಜಿ.ಎಂ. ಸಿದ್ದೇಶ್ವರ್ 79,857 ಮತ ಪಡೆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 66,482 ಮತ ಗಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿಕೊಟ್ಟ ಖ್ಯಾತಿಯ ಮಾಯಕೊಂಡ ಮೀಸಲು ಕ್ಷೇತ್ರ ಎಂದಿನಂತೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಒಲವು ತೋರಿದೆ. ಜಿ.ಎಂ. ಸಿದ್ದೇಶ್ವರ್ 80,955 ಮತಗಳನ್ನ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 59,534 ಮತ ಗಳಿಸಿದ್ದಾರೆ. ಬಿಜೆಪಿಯ ಜಿ.ಎಂ. ಸಿದ್ದೇಶ್ವರ್‌ಗೆ ಇಲ್ಲಿ 21,421 ಮತಗಳ ಲೀಡ್ ದೊರೆತಿದೆ.
ಕಳೆದ ಎರಡು ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಅತೀ ನಿರ್ಣಾಯಕ ಪಾತ್ರ ವಹಿಸಿದ್ದ ಅಡಕೆ ನಾಡು ಚನ್ನಗಿರಿಯಲ್ಲೂ ಕಮಲ… ಕಂಗೊಳಿಸಿದೆ. ಬಿಜೆಪಿ ಅತಿ ನಂಬಿಕೆ ಇಟ್ಟುಕೊಳ್ಳಬಹುದಾದ ಚನ್ನಗಿರಿಯಲ್ಲಿ ಬಿಜೆಪಿ ಈ ಬಾರಿ 19,692 ಮತಗಳ ಲೀಡ್ ಗಳಿಸಿದೆ. ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ 79,857 ಮತ ಗಳಿಸಿದರೆ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 66,482 ಮತ ಗಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಜಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ 72,942 ಮತ ಗಳಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 56,968 ಮತ ಪಡೆದಿದ್ದಾರೆ. ಜಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ 15,974 ಮತಗಳ ಲೀಡ್ ಸಿಕ್ಕಿದೆ.
ಕಾಂಗ್ರೆಸ್ ಶಾಸಕರು ಇರುವ ಎರಡೂ ಕ್ಷೇತ್ರದಲ್ಲಿ ಲೀಡ್ ಪಡೆಯುವ ಜೊತೆಗೆ ತನ್ನದೇ ಶಾಸಕರು ಇರುವ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿರುವ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಸತತ ನಾಲ್ಕನೇ ಬಾರಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.