ಏ.15ರಿಂದ ಮೊದಲ ಹಂತದ ಜನಗಣತಿ ಆರಂಭ

ಸಮನ್ವಯದಿಂದ ಕೆಲಸ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ ಸಿದ್ಧತೆಏ.15ರಿಂದ ಮೊದಲ ಹಂತದ

Team Udayavani, Jan 13, 2020, 11:33 AM IST

13-Jnauary-4

ದಾವಣಗೆರೆ: 2021ರಲ್ಲಿ ನಡೆಯಲಿರುವ ಜನಗಣತಿ ಪೂರಕವಾಗಿ ಮೊದಲನೇ ಹಂತದಲ್ಲಿ ಜಿಲ್ಲೆಯಲ್ಲಿ ಏಪ್ರಿಲ್‌ 15ರಿಂದ ಮೇ 19ರ ವರೆಗೆ ಮನೆಗಳ ಪಟ್ಟಿ ತಯಾರಿಸಲು ಪ್ರಕಾರ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು/ ಸಿಬ್ಬಂದಿ ನಿಯೋಜಿಸಲಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚಿಸಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿ ಭಾರತೀಯ ಜನಗಣತಿ 2021ರ ಪೂರ್ವಭಾವಿಯಾಗಿ ನಡೆಸಬೇಕಾದ ತಯಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊದಲನೇ ಹಂತದ ಜನಗಣತಿಗೆ ಜಿಲ್ಲಾಧಿಕಾರಿಗಳು ಪ್ರಧಾನ ಜನಗಣತಿ ಅಧಿಕಾರಿಯಾಗಿರುತ್ತಾರೆ. ಅಪರ ಜಿಲ್ಲಾಧಿಕಾರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿದ್ದು, ಎನ್‌ ಐಸಿ ಅಧಿಕಾರಿಗಳು, ನಗರಸಭೆ, ಪುರಸಭೆಗಳ ಆಯುಕ್ತರು, ಉಪ ಆಯುಕ್ತರು, ಮುಖ್ಯ ಅಧಿಕಾರಿಗಳು, ತಹಶೀಲ್ದಾರ್‌, ಶಿರಸ್ತೇದಾರರು ಕ್ರಮವಾಗಿ ನಗರ ಗಣತಿ ಅಧಿಕಾರಿಗಳು, ಚಾರ್ಜ್‌ ಅಧಿಕಾರಿಗಳು, ಹೆಚ್ಚುವರಿ ಚಾರ್ಜ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಹಾಗೂ ಸರ್ವ ಶಿಕ್ಷಣ ಅಭಿಯಾನದ ಉಪ ಯೋಜನಾ ಸಂಯೋಜಕ ಎಂ. ಮಂಜುನಾಥಸ್ವಾಮಿ ಮಾಸ್ಟರ್‌ ಟ್ರೈನರ್‌ ಗಳಾಗಿ ಈಗಾಗಲೇ ಮೈಸೂರಿನಲ್ಲಿ ತರಬೇತಿ ಪಡೆದಿದ್ದಾರೆ. ಮಾಸ್ಟರ್‌ ಟ್ರೈನರ್ ಚಾರ್ಜ್‌ ಸೆನ್ಸಸ್‌ ಅಧಿಕಾರಿಗಳು ಮತ್ತು ಕ್ಷೇತ್ರಅಧಿಕಾರಿಗಳಿಗೆ ತರಬೇತಿ ನೀಡುವರು ಎಂದು ಹೇಳಿದರು.

ಜನಗಣತಿ ನಿರ್ದೇಶನಾಲಯದ ಜಿಲ್ಲಾ ನೋಡಲ್‌ ಅಧಿಕಾರಿ ಜಿ.ಶ್ರೀನಿವಾಸ್‌ ಮಾತನಾಡಿ, 2011ರ ಜನಗಣಯನ್ನು ಉಲ್ಲೇಖವಾಗಿರಿಸಿಕೊಂಡು ಬ್ಲಾಕ್‌ಗಳನ್ನು ವಿಂಗಡಿಸಬೇಕು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ವಾರ್ಡ್‌ಗಳ ಸಂಖ್ಯೆ ಮತ್ತು ತಾಲ್ಲೂಕುಗಳಲ್ಲಿ ಜನಸಂಖ್ಯೆ
ಹೆಚ್ಚಿದ್ದು ಇದಕ್ಕೆ ಅನುಗುಣವಾಗಿ ಬ್ಲಾಕ್‌ ಗಳನ್ನು ವಿಂಗಡಿಸಿಕೊಳ್ಳಬೇಕು. ಈ ಜನಗಣತಿ ಚುನಾವಣೆ ಜನಸಂಖ್ಯೆಗೂ ಸಂಬಂಧಿ ಸಿದ್ದರಿಂದ ವಾರ್ಡ್‌, ಬೂತ್‌ಗಳನ್ನು ಬದಲಾಯಿಸದಂತೆ ಗಣತಿ ಪ್ರದೇಶಗಳನ್ನು ವಿಂಗಡಿಸಬೇಕು ಎಂದು
ತಿಳಿಸಿದರು.

ಪ್ರಥಮ ಬಾರಿಗೆ ಜನಗಣತಿಯನ್ನು ಮೊಬೈಲ್‌ ಆ್ಯಪ್‌ ಬಳಸಿ ಮಾಡಲಾಗುತ್ತಿದೆ. ಇದು ಮ್ಯಾನುವಲ್‌ಗಿಂತ ಸುಲಭವಾಗಿದ್ದು, ಈ ಗಣತಿ ಆ್ಯಪ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ನಾವು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ನೀಡುತ್ತೇವೆ. ಮಾಸ್ಟರ್‌ ಟ್ರೈನರ್‌ ಈ ಆ್ಯಪ್‌ ಬಳಕೆ ಬಗ್ಗೆ ತರಬೇತಿ ನೀಡುವರು ಎಂದು ತಿಳಿಸಿದರು.

150 ರಿಂದ 180 ಮನೆಗಳಿಗೆ ಅಥವಾ 650 ರಿಂದ 800 ಜನಸಂಖ್ಯೆಗೆ ಒಬ್ಬ ಗಣತಿದಾರರನ್ನು ನೇಮಿಸಿಬೇಕು. 6 ಜನ ಗಣತಿದಾರರಿಗೆ ಒಬ್ಬ ಸೂಪರ್‌ವೈಸರ್‌ ನೇಮಿಸಬೇಕಿದ್ದು. ಇವರು ಹೈಸ್ಕೂಲ್‌ ಶಿಕ್ಷಕರಾಗಿರಬೇಕು. ಬ್ಲಾಕ್‌ ಗಳಲ್ಲಿ ಒಬ್ಬ ಕಂಪ್ಯೂಟರ್‌ ಆಪರೇಟರ್‌
ನೇಮಿಸಿಕೊಳ್ಳಬಹುದಾಗಿದೆ. ಗಣತಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ನಿಗದಿತ ಸಂಭಾವನೆ ಅದರಲ್ಲೂ ಮೊಬೈಲ್‌ ಬಳಸಿ ಗಣತಿ ಮಾಡುವವರಿಗೆ ಹೆಚ್ಚಿನ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಾತನಾಡಿ, ಆದಷ್ಟು ಬೇಗ ಚಾರ್ಜ್‌ ಆಫೀಸರ್‌ಗಳು ಸಭೆ ನಡೆಸಿ, ಕ್ಷೇತ್ರ ಅಧಿಕಾರಿಗಳನ್ನು ನೇಮಿಸಬೇಕು.
ಗ್ರಾಮ ಲೆಕ್ಕಿಗರು, ಪಿಡಿಒ, ಸರ್ವೇಯರ್‌ ಹಾಗೂ ನಗರ ಪ್ರದೇಶಗಳಲ್ಲಿ ಬಿಲ್‌ ಕಲೆಕ್ಟರ್‌, ಅಭಿಯಂತರರು ಗಣತಿ ಬ್ಲಾಕ್‌ಗಳನ್ನು ಗುರುತಿಸಿಕೊಡಬೇಕು. ಗಣತಿದಾರರನ್ನಾಗಿ
ನೇಮಿಸಲು ಗ್ರಾಮ ಲೆಕ್ಕಿಗರು ಗಣಿತ, ಇಂಗ್ಲಿಷ್‌ ಮತ್ತು ವಿಜ್ಞಾನ ಶಿಕ್ಷಕರ ಪಟ್ಟಿ ಪಡೆದು ನೀಡಬೇಕು. ಎಲ್ಲ ಹಂತದ ಅಧಿಕಾರಿಗಳು/ ಸಿಬ್ಬಂದಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು, ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ಜನಗಣತಿಗೆ ಎಲ್ಲರೂ
ಪೂರಕ ಸಿದ್ದತೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಾಸ್ಟರ್‌ ಟ್ರೈನರ್ ಎಂ. ಮಂಜುನಾಥ ಸ್ವಾಮಿ, ದಕ್ಷಿಣ ವಲಯ ಕ್ಷೇತ್ರದ ಶಿಕ್ಷಣಾಧಿಕಾರಿ ಬಿ.ಸಿ ಸಿದ್ದಪ್ಪ, ಶೀರಸ್ತೇದಾರ್‌ ನಾಗಲಿಂಗೇಶ್ವರ, ಜಗಳೂರು ಶೀರಸ್ತೇದಾರ್‌
ಸುನೀಲ್‌ ಕುಮಾರ್‌ ಡಿ.ಆರ್‌., ಚನ್ನಗಿರಿ ಶೀರಸ್ತೇದಾರ್‌ ಬಿ.ಎಸ್‌.ಅರುಣ್‌ಕುಮಾರ್‌, ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Surya-jaiShankar

US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

3rd ODI: ಐರ್ಲೆಂಡ್‌ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

3rd ODI: ಐರ್ಲೆಂಡ್‌ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Belthangady: ಹಲವೆಡೆ ಕಾಡಾನೆ ಸಂಚಾರ

Belthangady: ಹಲವೆಡೆ ಕಾಡಾನೆ ಸಂಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Surya-jaiShankar

US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Belthangady: ಹಲವೆಡೆ ಕಾಡಾನೆ ಸಂಚಾರ

Belthangady: ಹಲವೆಡೆ ಕಾಡಾನೆ ಸಂಚಾರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್‌ ಫ್ರ್ಯಾಂಕ್

Surya-jaiShankar

US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.