ಜಿಲ್ಲೆಯಾದ್ಯಂತ ಮಳೆಯ ಕಣ್ಣಾಮುಚ್ಚಾಲೆ!
ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುವಷ್ಟೂ ಆಗಿಲ್ಲ ಮಳೆ•ಆವರಿಸುತ್ತಿದೆ ಬರದ ಛಾಯೆ
Team Udayavani, Jun 24, 2019, 9:57 AM IST
ದಾವಣಗೆರೆ: ಹೊನ್ನಾಳಿ ತಾಲೂಕಿನ ಗ್ರಾಮವೊಂದರಲ್ಲಿ ನೀರಿಗಾಗಿ ಸರತಿ ಸಾಲು. (ಸಂಗ್ರಹ ಚಿತ್ರ)
ದಾವಣಗೆರೆ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಯೋಗವೇ ಇಲ್ಲದಂತಾಗಿದೆ.
ಪೂರ್ವ ಮುಂಗಾರು ಒಳಗೊಂಡಂತೆ ಈವರೆಗೆ ಎಲ್ಲಿಯೋ ಕೆಲವೇ ಭಾಗದಲ್ಲಿ ಒಂದರೆಡು ಬಾರಿ ಹಸಿ, ಹದವಾದ ಮಳೆ ಆಗಿದ್ದು ಬಿಟ್ಟರೆ ದಾವಣಗೆರೆ ಭಾಗದಲ್ಲಿ ಜೂನ್ ಮೂರನೇ ವಾರದಲ್ಲೂ ಮಳೆ ಎಂಬುದು ಅಕ್ಷರಶಃ ಮರೀಚಿಕೆ.
ಕಳೆದ ಎರಡು-ಮೂರು ವರ್ಷದಿಂದ ಮಳೆಯ ಕಣ್ಣಾಮುಚ್ಚಾಲೆಯಾಟ ನಿರಂತರವಾಗಿ ನಡೆಯುತ್ತಲೇ ಇದೆ. ಆಗ ಪೂರ್ವ ಮುಂಗಾರು ಮತ್ತು ಹಂಗಾಮಿನ ಪ್ರಾರಂಭದಲ್ಲಿ ಧೋ… ಎಂದು ಮಳೆಯಾಗಿ ಸಾಕಷ್ಟು ಅನಾಹುತವೂ ಸಂಭವಿಸಿದ್ದುಂಟು. ಆದರೆ, ಈ ಬಾರಿಯಂತೆ ಮಳೆ ಸಂಪೂರ್ಣ ಕೈ ಕೊಟ್ಟಿರಲಿಲ್ಲ.
ಈ ವರ್ಷ ಮಳೆ ಆಗುವುದು ಇರಲಿ ಮಳೆಗಾಲ… ಎನ್ನುವುದು ಗಮನಕ್ಕೂ ಬರದಂತೆ ಬಿರು ಬಿಸಿಲು ಕಾಡಿದ್ದು ವಿಶೇಷ. ಮಾರ್ಚ್, ಏಪ್ರಿಲ್ಗಿಂತಲೂ ಅತೀ ಹೆಚ್ಚಿನ ಬಿಸಿಲಿನ ಅನುಭವ ಆಗಿದ್ದೇ ಮೇ ಮತ್ತು ಜೂನ್ ತಿಂಗಳಲ್ಲಿ. ಈಗ್ಗೆ ಒಂದರೆಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡು ಬರುತ್ತಿರುವುದು ಬಿಟ್ಟರೆ ಬಿಸಿಲ ಬೇಗೆ ಜನರನ್ನು ಹೈರಾಣಾಗುವಂತೆ ಮಾಡಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ಹದವಾದ ಮಳೆಯಾದ ಉದಾಹರಣೆ ಭಾರೀ ಕಡಿಮೆ. ಮುಂಗಾರು ಹಂಗಾಮಿನ ಪ್ರಾರಂಭಿಕ ಮಳೆಗಳು ಕೈ ಕೊಟ್ಟ ಪರಿಣಾಮ ಅನೇಕ ಕಡೆ ಬಿತ್ತನೆಯೇ ಆಗಿಲ್ಲ. ಮಾತ್ರವಲ್ಲ, ಹೊಲಗಳನ್ನ ಹದ ಮಾಡಿಕೊಳ್ಳಲಿಕ್ಕೂ ಸಾಧ್ಯವಾಗದೇ ಇರುವುದು ರೈತಾಪಿ ವರ್ಗದ ಜಂಘಾಬಲವನ್ನೇ ಕುಸಿಯುವಂತೆ ಮಾಡುತ್ತಿದೆ.
ಈಗ ಮಳೆ ಬಂದರೆ ಮಾತ್ರವೇ ಹೊಲಗಳನ್ನು ಬಿತ್ತನೆಗೆ ಸಜ್ಜು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ.
ಮಳೆಯ ಕೊರತೆಯ ಪರಿಣಾಮ ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಸದಾ ಬರಕ್ಕೆ ತುತ್ತಾಗುವ ಜಗಳೂರು ತಾಲೂಕಿನಲ್ಲಿ ನೀರು… ಎಂಬುದು ಅಮೃತಕ್ಕೆ ಸಮಾನವಾಗಿದೆ. ಯಾವುದೇ ಜಲ ಮೂಲ ಇಲ್ಲದ ಜಗಳೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲೇ ಹೇಳಲಿಕ್ಕೂ ಆಗದಂತಹ ಸಮಸ್ಯೆ ಉಲ್ಬಣವಾಗಿದೆ. ಜನರು ನೀರಿಗಾಗಿ ಅಲೆಯಬೇಕಾಗಿದೆ. ಟ್ಯಾಂಕರ್ ಮೂಲಕ ಒದಗಿಸುವ ನೀರು ಜನರ ದಾಹ ತೀರಿಸುತ್ತಿಲ್ಲ. ಜಾನುವಾರುಗಳಿಗೆ ನೀರುಣಿಸಲು ಸಾಧ್ಯವಾಗದೇ ಇರುವುದು ಅನ್ನದಾತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಟ್ಯಾಂಕರ್‌ನಲ್ಲಿ ತಂದಂತಹ ನೀರನ್ನು ತೊಟ್ಟಿಗಳಲ್ಲಿ ಹಾಕಿ ಅಲ್ಲಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ.
ಕಳೆದ ವರ್ಷವಷ್ಟೇ ಬರದ ಬೇಗೆಯಲ್ಲಿ ತತ್ತರಿಸಿ ಹೋಗಿರುವ ರೈತರು, ಜನರು ಈಗ ಯಾವುದನ್ನೂ ತಡೆದುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯ ಅಂಚಿನಲ್ಲಿದ್ದಾರೆ. ಉತ್ತಮ ಮಳೆ ಮಾತ್ರವೇ ಜನರನ್ನು ಕಾಪಾಡಬಲ್ಲದು. ಸರ್ಕಾರಗಳು ನೀಡುವ ಯಾವುದೇ ವ್ಯವಸ್ಥೆ ಜನರ ಸಂಕಷ್ಟ ದೂರ ಮಾಡಲಿಕ್ಕಾಗದಷ್ಟು ಸಮಸ್ಯೆ ನಿರ್ಮಾಣವಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬರದ ಕಾರ್ಮೋಡದ ಛಾಯೆ ನಿಧಾನಕ್ಕೆ ಆವರಿಸುತ್ತಿದೆ.
ಮುಂದಿನ ವಾರದಲ್ಲಿ ಮುಂಗಾರು ಪ್ರವೇಶ, 2-3 ದಿನ ಭಾರೀ ಮಳೆ ಆಗುತ್ತದೆ. ಹವಾಮಾನ ವೈಪರಿತ್ಯದಿಂದ ಮಳೆ ಆಗುತ್ತಿಲ್ಲ. ಇಲ್ಲ ಮಳೆ ಆಗುತ್ತದೆ… ಎಂಬ ಮುನ್ಸೂಚನೆ ನೆಚ್ಚಿಕೊಂಡೇ ಜನರು ಉಸಿರು ಬಿಗಿ ಹಿಡಿದುಕೊಂಡಿದ್ದಾರೆ. ಮಳೆ ಆಗುತ್ತದೆ ಎಂಬ ನಿರೀಕ್ಷೆಯಲ್ಲೇ ಕಾಲ ತಳ್ಳುತ್ತಿದ್ದಾರೆ. ಒಂದೊಮ್ಮೆ ಮಳೆ ಆಗದೇ ಹೋದರೆ ಊಹಿಸಲಿಕ್ಕೂ ಆಗದಂತಹ ಭೀಕರ ವಾತಾವರಣ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.