ಧ್ರುವ ಸೋಲಿಸಿ, ಮೋದಿ ನಾಯಕತ್ವಕ್ಕೆ ಬೆಂಬಲಿಸಿ
Team Udayavani, Mar 24, 2019, 1:32 PM IST
ಎಚ್.ಡಿ.ಕೋಟೆ: ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣಗೆ ತಕ್ಕ ಪಾಠ ಕಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಾಯಕ್ವಕ್ಕೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಪಕ್ಷದ ವರಿಷ್ಠರು, ಕಾರ್ಯಕರ್ತರು ಮತ್ತು ಬೆಂಬಲಿಗರು, ಹಿತೈಷಿಗಳ ಇಚ್ಛೆಯಂತೆ ತಾವು ಸ್ಪರ್ಧಿಸಿರುವುದಾಗಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಪಟ್ಟಣದ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ 46 ವರ್ಷದ ರಾಜಕಾರಣದಲ್ಲಿ ಜನರ ಬೆಂಬಲದಿಂದ ರಾಜಕಾರಣ ಮಾಡಿ, ಕ್ಷೇತ್ರದ ಜನರಿಗೆ ಗೌರವ ತಂದಿದ್ದೇನೆ.
ಜನರ ಆಶೀರ್ವಾದದಿಂದ ಸಂಸದನಾಗಿ, ಕೇಂದ್ರ ಹಾಗೂ ರಾಜ್ಯ ಕಂದಾಯ ಸಚಿವನಾಗಿ ಉನ್ನತ ಸ್ಥಾನಕ್ಕೆ ಏರಿ ಒಂದು ಕಪ್ಪು ಚುಕ್ಕೆ ಬಾರದಂತೆ ಸೇವೆ ಸಲ್ಲಿಸಿ, ಮತದಾರನಿಗೆ ಗೌರವ ತಂದಿದ್ದೇನೆ. ಚಾಮರಾಜ ಲೋಕಸಭಾ ಕ್ಷೇತ್ರದ ಜನರ ಭಾವನೆ ಬಗ್ಗೆ ನನಗೆ ತಿಳಿದಿದೆ. ನನಗೆ ಕೋಟೆ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮತದಾರರ ಬೆಂಬಲ ಇದೆ ಎಂದು ತಿಳಿಸಿದರು.
ಸಿದ್ದುಗೆ ಸೋಲಿನ ಪಾಠ: ತಾವು ರಾಜಕೀಯಕ್ಕೆ ಬಂದಾಗ ಸಿದ್ದರಾಮಯ್ಯಗೆ ರಾಜಕೀಯ ಗಂಧವೇ ಗೊತ್ತಿರಲಿಲ್ಲ. ಎಲ್ಲರ ಬಗ್ಗೆಯೂ ಉಡಾಫೆಯಾಗಿ ಮಾತನಾಡುವ ಅವರನ್ನು 35 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಚಾಮುಂಡೇಶ್ವರ ಕ್ಷೇತ್ರ ಜನ ಬುದ್ಧಿ ಕಲಿಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ಗೆ ನಡುಕ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಾಳಿ ಯಾರೂ ಇಲ್ಲ ಅಂದು ಕೊಂಡಿದ್ದವರಿಗೆ, ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಮುತ್ಸದ್ಧಿ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಹೆಸರು ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರಲ್ಲಿ ನಡುಕ ಉಂಟಾಗಿದೆ.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂದು ಪಕ್ಷದಲ್ಲಿ, ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ನಮಗೆ ಪ್ರತಿ ಸ್ಪರ್ಧಿಯೇ ಇಲ್ಲ ಎಂದು ಬೀಗುತ್ತಿದ್ದರು. ಪಕ್ಷದ ವರಿಷ್ಠರು ಪ್ರಸಾದ್ ಹೆಸರು ಸೂಚಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಉಸಿರೇ ನಿಂತು ಹೋಗಿದೆ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಯು.ಎಸ್.ಶೇಖರ್, ಮುಖಂಡರಾದ ಕೃಷ್ಣಸ್ವಾಮಿ, ಸಿದ್ಧಲಿಂಗಸ್ವಾಮಿ, ಅಪ್ಪಣ್ಣ, ಪುರಸಭೆ ಮಾಜಿ ಸದಸ್ಯ ವಿವೇಕ್, ಮೊತ್ತ ಬಸವರಾಜಪ್ಪ, ಜೆ.ಪಿ.ಚಂದ್ರಶೇಖರ್, ವೈ.ಟಿ.ಮಹೇಶ್, ಕೆಂಡಗಣ್ಣಸ್ವಾಮಿ, ಲೋಕೇಶ್, ಮಾದೇಶ್, ರಾಕೇಶ್ ಶರ್ಮ ಇತರರಿದ್ದರು.
ಧ್ರುವಗೆ ನನ್ನ ಸಹಾಯ ಗೊತ್ತಿಲ್ಲವೇ?: ಧ್ರುವನಾರಾಯಣ ಕುತಂತ್ರ ರಾಜಕಾರಣಿಯಾಗಿದ್ದು, ಪೊಲೀಸ್ ಮಾಹಿತಿದಾರ ಇದಾಂಗೆ, ಇಂದು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಸಂತೇಮರಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತದ ಅಂತರದಲ್ಲಿ ಗೆಲ್ಲಲು ಯಾರು ಕಾರಣ, ಅಲ್ಲದೇ ಕೊಳ್ಳೇಗಾಲ ಕ್ಷೇತ್ರದಲ್ಲಿ ಟಿಕೆಟ್ ಕೋಡಿಸಿದವರು ಯಾರು,
ಕಳೆದ ಎರಡು ಅವಧಿಗೆ ಸಂಸದರನ್ನಾಗಿ ಮಾಡಲು ಶ್ರಮಿಸಿದವರು ಯಾರು ಎಂದು ಪ್ರಶ್ನಿಸಿದ ಶ್ರೀನಿವಾಸಪ್ರಸಾದ್, ದೆಹಲಿಗೆ ಹೋಗಿ ಬಿ.ಫಾರಂ ಕೊಡಿಸಿದ್ದನ್ನು ಧ್ರುವ ಮರೆತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಿರುವುದನ್ನು ಕ್ಷೇತ್ರದ ಜನ ನೋಡುತ್ತಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶ್ರೀನಿವಾಸ್‌ಪ್ರಸಾದ್ ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.