ರಂಗೇರಿದ ಸರ್ಕಾರಿ ನೌಕರರ ಚುನಾವಣೆ
•23 ಸ್ಥಾನಕ್ಕೆ ಅವಿರೋಧ ಆಯ್ಕೆ; ಉಳಿದ 12 ಸ್ಥಾನಕ್ಕೆ 25 ಜನ ಕಣದಲ್ಲಿ •ಪ್ರಚಾರ ಜೋರು
Team Udayavani, Jun 6, 2019, 10:45 AM IST
ನಾಗರಾಜ ತೇಲ್ಕರ್
ದೇವದುರ್ಗ: ರಾಜ್ಯ ಸರಕಾರಿ ನೌಕರರ ಸಂಘದ ದೇವದುರ್ಗ ತಾಲೂಕು ಘಟಕದ ಚುನಾವಣೆ ದಿನೇದಿನೇ ರಂಗೇರುತ್ತಿದೆ. 35 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ 23 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 12 ಸ್ಥಾನಗಳಿಗೆ 25 ಜನ ಕಣದಲ್ಲಿದ್ದು ತೀವ್ರ ಪೈಪೋಟಿ ನಡೆಸಿದ್ದಾರೆ.
12 ಸ್ಥಾನಕ್ಕೆ ತೀವ್ರ ಪೈಪೋಟಿ: ರಾಜ್ಯ ಸರಕಾರಿ ನೌಕರರ ತಾಲೂಕು ಘಟಕದ ಚುನಾವಣೆ ತೀವ್ರ ಪೈಪೋಟಿ ಶುರುವಾಗಿದೆ. 12 ಸ್ಥಾನಕ್ಕೆ 25 ಜನ ಕಣದಲ್ಲಿದ್ದಾರೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರ ಹೆಣೆಯುತ್ತಿದ್ದಾರೆ. ವಿವಿಧ ಸರಕಾರಿ ಇಲಾಖೆ ಸೇರಿ 1,710 ಜನ ಮತದಾರರು ಇದ್ದಾರೆ. ಅದರಲ್ಲಿ ಶಿಕ್ಷಕ-ಶಿಕ್ಷಕಿಯರೇ ಹೆಚ್ಚಿದ್ದಾರೆ. ಹೀಗಾಗಿ ಕೆಲ ಸಿಆರ್‌ಪಿಗಳ ಮೂಲಕ ಶಿಕ್ಷಕರ ಮತಗಳು ಸೆಳೆಯಲು ಅಭ್ಯರ್ಥಿಗಳು ತಂತ್ರ ರೂಪಿಸಿದ್ದಾರೆ.
ಯಾರ್ಯಾರು ಕಣದಲ್ಲಿ: ಪಶು ಸಂಗೋಪನಾ ಕ್ಷೇತ್ರದ ಒಂದು ಸ್ಥಾನಕ್ಕೆ ಇಮಾಮಸಾಬ್, ಮಲ್ಲಪ್ಪ ಎಲ್.ಒ. ಕಣದಲ್ಲಿದ್ದಾರೆ. ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ಷೇತ್ರದ 5 ಸ್ಥಾನಕ್ಕೆ 9 ಜನ ಕಣದಲ್ಲಿದ್ದಾರೆ. ಅಭಿಷೇಕ ಹುಡೇದ ಪರಿಚಾರಕ, ಉಮೇಶ, ಕೆ. ಮಲ್ಲಪ್ಪ, ಗೋವಿಂದ ಆರ್.ಐ., ಬಸವರಾಜ, ಭೀಮರಾಯ ಆರ್.ಐ. ಅರಕೇರಾ, ಯಂಕಪ್ಪ, ರಾಮನಗೌಡ, ಶರಣಬಸವ ಸೇರಿ 9 ಜನ ಸ್ಪರ್ಧಿಸಿದ್ದಾರೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5 ಸ್ಥಾನಕ್ಕೆ 12 ಜನ ಕಣದಲ್ಲಿದ್ದಾರೆ. ಇಬ್ರಾಹಿಂಸಾಬ್, ಚನ್ನಬಸವ ಕೋಳೂರು, ದೇವರಾಜ ಕೆ.ಎಚ್. ಪ್ರಕಾಶ, ಬಸವರಾಜ, ಬೂದೆಪ್ಪ ಪೂಜಾರ, ಮಲ್ಲಿಕಾರ್ಜುನ, ವೆಂಕಟಾಂಜನೇಯ, ಶಂಕ್ರಪ್ಪ, ಶಾಂತಗೌಡ ಬಿ.ನಾಗರಾಜ, ಸದಾಶಿವಪ್ಪ ಗುಡಿಮನಿ, ಹನುಮಂತ ಟಿ. ಸೇರಿ 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸರಕಾರಿ ಪ್ರೌಢ ಶಾಲೆಯ ಒಂದೇ ಸ್ಥಾನಕ್ಕೆ ಗೀತಾ, ವೆಂಕಟೇಶ ಸೇರಿ ಇಬ್ಬರೂ ಸ್ಪರ್ಧಿಸಿದ್ದಾರೆ. ಜೂ.13ರಂದು ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ವ್ಯಾಟ್ಸ್‌ಆ್ಯಪ್ ಮೂಲಕ ಪ್ರಚಾರ: ಕಣದಲ್ಲಿರುವ ಬಹುತೇಕ ಅಭ್ಯರ್ಥಿಗಳು ವ್ಯಾಟ್ಸ್‌ಆ್ಯಪ್ ಮೂಲಕ ಪ್ರಚಾರ ನಡೆಸಿದ್ದಾರೆ. ಶಿಕ್ಷಕರ ಗ್ರೂಪ್‌ನಲ್ಲಿ ಬ್ಯಾನರ್ ಭಾವಚಿತ್ರದೊಂದಿಗೆ ಪ್ರಚಾರ ಜೋರಾಗಿ ನಡೆದಿದೆ. ಅತಿ ಹೆಚ್ಚು ಮತದಾರರು ಶಿಕ್ಷಕರೇ ಇರುವ ಕಾರಣ ಶಿಕ್ಷಕರ ಮಧ್ಯೆ ಪರ, ವಿರೋಧ ಅಲೆ ಎದ್ದಿದೆ.
ಅಧ್ಯಕ್ಷ ಸ್ಥಾನಕ್ಕೆ ಕಣ್ಣು: ರಾಜ್ಯ ಸರಕಾರಿ ನೌಕರರ ತಾಲೂಕು ಅಧ್ಯಕ್ಷ ಸ್ಥಾನದ ಮೇಲೆ ಬಹುತೇಕರ ಕಣ್ಣಿದೆ. 35 ಸ್ಥಾನಗಳಲ್ಲಿ ಈಗಾಗಲೇ 23 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. 12 ಸ್ಥಾನಕ್ಕೆ ಮಾತ್ರ ಮತದಾನ ನಡೆಯಲಿದೆ. 35 ಸ್ಥಾನಕ್ಕೆ ಆಯ್ಕೆಯಾದವರ ಘೋಷಣೆ ಬಳಿಕ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರ ಆಯ್ಕೆ ನಡೆಯಲಿದೆ. 35 ಸ್ಥಾನಕ್ಕೆ ಆಯ್ಕೆಗೊಂಡವರು ಮಾತ್ರ ಮತದಾನ ಮಾಡಲು ಅವಕಾಶವಿದೆ. ಈ ಸ್ಥಾನಗಳಿಗೆ ಜೂ. 17ರಿಂದ 20ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಂದೇ ಪರಿಶೀಲನೆ ನಡೆಯಲಿದೆ. 21ಕ್ಕೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. 27ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ತಾಲೂಕು ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಕುತೂಹಲ ನೌಕರರಲ್ಲಿ ಮೂಡಿದೆ.
ಸರಕಾರಿ ಶಾಲಾ ಶಿಕ್ಷಕರ ಮತಗಳನ್ನು ಸೆಳೆಯಲು ಕೆಲ ಅಭ್ಯರ್ಥಿಗಳು ಗ್ರೂಪ್‌ನಲ್ಲಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಕೆಲ ಸಿಆರ್‌ಪಿಗಳ ಮೂಲಕ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
•ಹೆಸರು ಹೇಳಲು ಇಚ್ಛಿಸಿದ ಶಿಕ್ಷಕ
12 ಸ್ಥಾನಕ್ಕೆ 25 ಜನ ಕಣದಲ್ಲಿದ್ದಾರೆ. 13ರಂದು ನಡೆಯಲಿರುವ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದೆ. ಶಾಂತಿಯುತ ಚುನಾವಣೆಗೆ ತಯಾರಿ ಮಾಡಲಾಗಿದೆ.
•ಬಾಲಪ್ಪ ಬಾವಿಮನಿ,
ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.