43,565 ಹೆಕ್ಟೇರ್ ಬಿತ್ತನೆ ಗುರಿ
ನೀರಾವರಿ 18,500-ಖುಷ್ಕಿ-25,065 ಹೆಕ್ಟೇರ್ ಬಿತ್ತನೆ ಗುರಿ ಜೋಳ ಬೀಜಕ್ಕೆ ಬೇಡಿಕೆ ಹೆಚ್ಚಳ
Team Udayavani, Oct 16, 2019, 12:10 PM IST
ನಾಗರಾಜ ತೇಲ್ಕರ್
ದೇವದುರ್ಗ: ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂಗಾರು ಬಿತ್ತನೆ ಚುರುಕು ಪಡೆದಿದ್ದು, ತಾಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ 43,565 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ ಸಂಗ್ರಹಿಸಲಾಗಿದ್ದು, ಜೋಳ ಬೀಜಕ್ಕೆ ಬೇಡಿಕೆ ಹೆಚ್ಚಿದೆ.
ಎಷ್ಟು ಬೀಜ ಸಂಗ್ರಹ: ಪಟ್ಟಣ ಸೇರಿ ತಾಲೂಕಿನಾದ್ಯಂತ ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜೋಳ, ಕಡಲೆ ಬೀಜ ಸಂಗ್ರಹಿಸಲಾಗಿದೆ. ದೇವದುರ್ಗದಲ್ಲಿ 95 ಕ್ವಿಂಟಲ್ ಕಡಲೆ, 21 ಕ್ವಿಂಟಲ್ ಜೋಳ, ಜಾಲಹಳ್ಳಿಯಲ್ಲಿ 54 ಕ್ವಿಂಟಲ್ ಕಡಲೆ, 21 ಕ್ವಿಂಟಲ್ ಜೋಳ, ಅರಕೇರಾದಲ್ಲಿ 80 ಕ್ವಿಂಟಲ್ ಕಡಲೆ, 10 ಕ್ವಿಂಟಲ್ ಜೋಳ, ಗಬ್ಬೂರಲ್ಲಿ 54 ಕ್ವಿಂಟಲ್ ಕಡಲೆ, 6 ಕ್ವಿಂಟಲ್ ಜೋಳ ಸಂಗ್ರಹಿಸಲಾಗಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ಪೂರೈಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಆಧಾರ್, ಪಹಣಿ ಕಾರ್ಡ್ ಪಡೆದು, ಎಸ್‌ಸಿ. ಎಸ್‌ಟಿ ವರ್ಗದ ರೈತರಿಗೆ ಜಾತಿ, ಆದಾಯ, ಆಧಾರ್ ಕಾರ್ಡ್ ಪಹಣಿ ದಾಖಲೆ ಪಡೆದು ಸಬ್ಸಿಡಿಯಲ್ಲಿ ಬೀಜ ನೀಡಲಾಗುತ್ತಿದೆ.
ಬಿತ್ತನೆ ಗುರಿ: 2019-20ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ 43,565 ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಕಡಲೆ ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ 15 ಸಾವಿರ ಹೆಕ್ಟೇರ್ ಖುಷ್ಕಿ 3,500 ನೀರಾವರಿ ಪ್ರದೇಶ ಸೇರಿ ಒಟ್ಟು 18,500 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ ಇದೆ.
22,040 ಹೆಕ್ಟೇರ್ ಖುಷ್ಕಿ ಮತ್ತು 3,025 ಹೆಕ್ಟೇರ್ ನೀರಾವರಿ ಸೇರಿ ಒಟ್ಟು 25,065 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಗುರಿ ಹೊಂದಲಾಗಿದೆ.
ಸಬ್ಸಿಡಿ ದರದಲ್ಲಿ ಬೀಜ: ಸಾಮಾನ್ಯ ವರ್ಗ, ಎಸ್‌ಸಿ, ಎಸ್‌ಟಿ ವರ್ಗದವರಿಗೆ ಸಬ್ಸಿಡಿ ದರದಲ್ಲಿ ಕಡಲೆ, ಜೋಳ ಬೀಜ ಒದಗಿಸಲಾಗುತ್ತಿದೆ. ಕಡಲೆ 2 ಕೆಜಿ ಒಂದು ಪಾಕೆಟ್‌ಗೆ ಸಾಮಾನ್ಯ ವರ್ಗಕ್ಕೆ 900 ರೂ. ನಿಗದಿ ಮಾಡಿದ್ದರೆ, ಎಸ್‌ಸಿ, ಎಸ್‌ಟಿ ರೈತರಿಗೆ 650 ರೂ. ನಿಗದಿ ಮಾಡಲಾಗಿದೆ. ಜೋಳ ಸಾಮಾನ್ಯ ವರ್ಗದ ರೈತರಿಗೆ ಒಂದು 3 ಕೆಜಿಯ ಒಂದು ಪಾಕೆಟ್‌ಗೆ 90 ರೂ. ಇದ್ದರೆ, ಎಸ್‌ಸಿ, ಎಸ್‌ಟಿ ರೈತರಿಗೆ 60 ರೂ. ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಒದಗಿಸಲಾಗುತ್ತಿದೆ.
ರೈತರಿಗೆ ಜಾಗೃತಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ ಬಿತ್ತನೆ ಕೈಗೊಳ್ಳುವ ರೈತರಿಗೆ ಈಗಾಗಲೇ ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ಬೆಳೆಗಳಿಗೆ ರಸಗೊಬ್ಬರ, ಔಷಧ ಹೇಗೆ ಬಳಸಬೇಕು, ಬೆಳೆ ಸಂರಕ್ಷಣೆ, ಭೂಮಿ ಫಲವತ್ತತೆ ಕಾಯ್ದುಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೀಜ ಪೂರೈಸುವ ಮಧ್ಯವರ್ತಿಗಳಿಂದ ಬೀಜ ಖರೀದಿದಂತೆ ತಿಳಿವಳಿಕೆ ನೀಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.