ಆಹಾರ ನಿಗಮಕ್ಕಿಲ್ಲ ಭದ್ರತೆ

ಗೋದಾಮುಗಳಿಗೆ ಬೇಕಾಗಿದೆ ಕಾಯಕಲ್ಪ•ಆಹಾರ ಸಂರಕ್ಷಣೆಗೆ ಹೈರಾಣು

Team Udayavani, Jun 8, 2019, 11:32 AM IST

08-Juen-10

ದೇವದುರ್ಗ: ಆಹಾರ ನಿಗಮದ ಗೋದಾಮಿನ ಹೊರನೋಟ.

ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದ ಪಶು ಆಸ್ಪತ್ರೆ ಪಕ್ಕದಲ್ಲಿರುವ ಆಹಾರ ಸರಬರಾಜು ನಿಗಮದ ಹಳೆ ಗೋದಾಮುಗಳಿಗೆ ಭದ್ರತೆ ಕೊರತೆ ಕಾಡುತ್ತಿದೆ.

ಗೋದಾಮುಗಳಲ್ಲಿ ಸಾವಿರಾರೂ ಕ್ವಿಂಟಲ್ ಅಕ್ಕಿ, ಬೆಳೆ, ಗೋಧಿ ಸೇರಿ ಇತರೆ ಆಹಾರ ಸಂಗ್ರಹಿಸಲಾಗುತ್ತಿದೆ. ಗೋದಾಮು ಸುತ್ತಲೂ ಮಲ ಮೂತ್ರವಿಸರ್ಜನೆ ಮಾಡಲಾಗುತ್ತಿದೆ. ಅವ್ಯವಸ್ಥೆ ಆಗರ ವಾತಾವರಣದಲ್ಲಿ ಆಹಾರ ಸಂಗ್ರಹ ಮಾಡಲಾಗಿದೆ. 50 ಸಾವಿರ 200 ಬಿಪಿಎಲ್ ಪಡಿತರ್‌ ಕಾರ್ಡ್‌, 9800 ಅತ್ಯೋದಯ, ತಿಂಥಿಣಿ ಬ್ರಿಜ್‌ನಲ್ಲಿರುವ ಕನಕ ಗುರು ಪೀಠ ಕಾಗಿನಲೆಗೆ 24 ಕ್ವಿಂಟಲ್ ಅಕ್ಕಿ ಉಚಿತವಾಗಿ ಪೂರೈಸಲಾಗುತ್ತಿದೆ.

108 ನ್ಯಾಯಬೆಲೆ ಅಂಗಡಿ: ಪಟ್ಟಣ ಸೇರಿ ತಾಲೂಕಿನಾದ್ಯಂತ 108 ನ್ಯಾಯಬೆಲೆ ಅಂಗಡಿಗಳು ನಿರ್ವಹಿಸುತ್ತಿವೆ. ಜಾಲಹಳ್ಳಿ, ಅರಕೇರಾ, ಕೊಪ್ಪರ, ಗಬ್ಬೂರು, ದೇವದುರ್ಗ, ಮಸರಕಲ್, ಗಣೇಕಲ್, ಚಿಂಚೋಡಿ ಸೇರಿ 108 ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡದೇ ಇರುವುದರಿಂದ ಬಿಪಿಎಲ್ ಸೌಲಭ್ಯ ಹೊಂದಿದ ಬಡಕುಟುಂಬಗಳಿಗೆ ಸಮರ್ಪಕವಾಗಿ ಆಹಾರ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಹೊನ್ನಕಾಟಮಳ್ಳಿ ಗ್ರಾಮಸ್ಥರು ಮಸರಕಲ್ ಗ್ರಾಮಕ್ಕೆ ಹೋಗಿ ಆಹಾರ ಪಡೆಯಬೇಕು. ಸರಕಾರ ಪೂರೈಸುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಕಳೆದ ವಾರ ಹೊನ್ನಕಾಟಮಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಇಲ್ಲಿ ಸ್ಮರಿಸಬೇಕು. ಪಡಿತರ ಗ್ರಾಹಕರು ಹೀಗೆ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ.

ಬ್ರಿಟಿಷರ ಕಾಲದ ಗೋದಾಮು: ಪಟ್ಟಣದ ಪಶು ಆಸ್ಪತ್ರೆ ಪಕ್ಕದಲ್ಲಿರುವ 1954ರ ದಶಕದ ಬ್ರಿಟಿಷರ ಕಾಲದ ಗೋದಾಮುಗಳಿಗೆ ಭದ್ರತೆ ಕೊರತೆ ಕಾಡುತ್ತಿದೆ. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌ ಆಡಳಿತ ಅವಧಿಯಲ್ಲಿ ಸುಮಾರ 45 ಲಕ್ಷಾಂತರ ರೂ. ವೆಚ್ಚದಲ್ಲಿ ಗೋದಾಮುಗಳನ್ನು ದುರಸ್ತಿ ಮಾಡಲಾಗಿತ್ತು. ಇದೀಗ ಆಹಾರ ಪದಾರ್ಥಗಳಿಗೆ ಇಲಿ, ಹೆಗ್ಗಣ ಕಾಟ ವಿಪರೀತವಾಗಿದೆ. ಮಳೆಗಾದಲ್ಲಿ ಆಹಾರ ಸಂರಕ್ಷಣೆ ಮಾಡಲು ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಗೋದಾಮು ಸುತ್ತಲೂ ಮಲ ಮೂತ್ರವಿಸರ್ಜನೆ ಮಾಡುವುದರಿಂದ ಅವ್ಯವಸ್ಥೆ ಆಗರ ವಾತಾವರಣ ನಿರ್ಮಾಣವಾಗಿದೆ. ಆಹಾರ ಪದಾರ್ಥಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಳೆಗಾಲದಲ್ಲಿ ಸಾವಿರಾರು ಕ್ವಿಂಟಲ್ ಅಕ್ಕಿ, ಬೆಳೆ, ಗೋಧಿ ಸೇರಿ ಇತರೆ ಆಹಾರ ರಕ್ಷಣೆಗೆ ತೊಡಕಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಸಾವಿರಾರು ಕ್ವಿಂಟಲ್ ಆಹಾರ: ಪಟ್ಟಣ ಸೇರಿ ತಾಲೂಕಿನಾದ್ಯಂತ 108 ನ್ಯಾಯಬೆಲೆ ಅಂಗಡಿಗಳಿಗೆ 12 ಸಾವಿರ ಕ್ವಿಂಟಲ್ ಅಕ್ಕಿ, 558 ಕ್ವಿಂಟಲ್ ಬೆಳೆ ಪೂರೈಸಲಾಗುತ್ತಿದೆ. ಸರಕಾರದಿಂದ ಆಹಾರ ನಿಗಮಕ್ಕೆ ಗೋಧಿ ಸಮರ್ಪಕವಾಗಿ ಪೂರೈಕೆಯಾಗದೇ ಇರುವುದರಿಂದ ವಿಳಂಬವಾಗುತ್ತಿದೆ. ಮಧ್ಯಾಹ್ನ ಬಿಸಿಊಟ ಯೋಜನೆಗೆ ನಿಗಮದಿಂದ 350 ಸರಕಾರಿಗೆ ಶಾಲೆಗಳಿಗೆ 1500 ಕ್ವಿಂಟಲ್ ಅಕ್ಕಿ ಸೇರಿ ಎಣ್ಣೆ, ಗೋಧಿ, ಬೆಳೆ ಸೇರಿ ಇತರೆ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಬಿಸಿಎಂ, ಸಮಾಜ ಕಲ್ಯಾಣ, ಎಸ್‌ಟಿ ಸೇರಿ ಇತರೆ ವಸತಿ ನಿಲಯಗಳಿಗೆ ನೂರಾರು ಕ್ವಿಂಟಲ್ ಆಹಾರ ಪೂರೈಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಸಲು ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಎರಡು ಕಳ್ಳತನ: ಆಹಾರ ಸರಬರಾಜು ನಿಗಮಕ್ಕೆ ಸ್ವಂತ ಕಚೇರಿ ಸೌಲಭ್ಯ ಇಲ್ಲ. ಕೃಷಿ ಮಾರುಕಟ್ಟೆ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ. ಇದರಿಂದ ಇಲ್ಲಿನ ಗೋದಾಮುಗಳನ್ನು ರಕ್ಷಣೆ ಮಾಡದೇ ಇರುವ ಕಾರಣ ಇದೀಗ ಎರಡು ಬಾರಿ ಕಳ್ಳತನವಾಗಿದೆ. ರಾತ್ರಿ ಗೋದಾಮುಗಳು ಕಾಯುವ ಕಾವಲಗಾರರು ಇಲ್ಲದೇ ಅನಾಥವಾಗಿದೆ. ನಿಗಮದಲ್ಲಿ ವ್ಯವಸ್ಥಾಪಕ ಹುದ್ದೆ ಬಿಟ್ಟರೇ ಕಂಪ್ಯೂಟರ್‌, ಪರಿಚಾರಕ, ರಾತ್ರಿ ಕಾವಲುಗಾರ ಹುದ್ದೆಗಳು ಸುಮಾರು ವರ್ಷಗಳಿಂದ ಭರ್ತಿಯಾಗಿಲ್ಲ.

ಸ್ವಯಂ ನಿವೃತ್ತಿ: ಇಲ್ಲಿನ ಆಹಾರ ಸರಬರಾಜು ನಿಗಮದಲ್ಲಿ ಕರ್ತವ್ಯ ನಿಭಾಹಿಸುತ್ತಿದ್ದ ಅಧಿಕಾರಿ ಕಳೆದ ಎರಡು ವರ್ಷಗಳಿಂದೆ ಸ್ವಯಂ ನಿವೃತ್ತಿ ಹೊಂದಿದ್ದಾರೆ. ನ್ಯಾಯಬೆಲೆ ಅಂಗಡಿಯವರು, ಬಿಪಿಎಲ್ ಕುಟುಂಬದವರು, ಸಂಘ ಸಂಸ್ಥೆಯವರು, ದಿನ ಪತ್ರಿಕೆ ಪೂರೈಸುವ ಏಜೆಂಟರು ಯಾವುದೇ ಸಮಸ್ಯೆ ಕುರಿತು ನಿಗಮದ ವ್ಯವಸ್ಥಾಪಕರ ಬಳಿ ಹೋದರೆ ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ ಜತೆ ಮಾತನಾಡಿದ ಬಳಿಕ ಬಗೆಹರಿಸುತ್ತೇನೆ ಎಂದು ಹೇಳುತ್ತಿರುವುದು ಬಾರಿ ಗೊಂದಲಕ್ಕೆ ಕಾರಣವಾಗಿದೆ.

ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ ಹೆಸರೇ ಅತಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಅಕ್ರಮವಾಗಿ ಅಕ್ಕಿ ಪೂರೈಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ನಿಗಾವಹಿಸಬೇಕಾಗಿದೆ.
ಹೆಸರು ಹೇಳಲು ಇಚ್ಛಿಸದ ಕೂಲಿ ಕಾರ್ಮಿಕ

ಸಾವಿರಾರ ಕ್ವಿಂಟಲ್ ಆಹಾರ ಪದಾರ್ಥ ಸಂಗ್ರಹಿಸಲು ಜಾಗದ ಸಮಸ್ಯೆ ಇದೆ. ಕೆಲ ಹುದ್ದೆಗಳು ಖಾಲಿಯಿದ್ದು, ಬಾಡಿಗೆ ಕಟ್ಟಡದಲ್ಲಿ ಕಚೇರಿಗೆ ನಡೆಸಲಾಗುತ್ತಿದೆ.
ಶಂಕರಗೌಡ ಪಾಟೀಲ,
ಆಹಾರ ನಿಗಮ ವ್ಯವಸ್ಥಾಪಕ

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.