ಶೂ-ಸಾಕ್ಸ್ ಖರೀದಿಗೆ ಹಣ ಬಿಡುಗಡೆ
ಎಸ್‌ಡಿಎಂಸಿ-ಮುಖ್ಯ ಶಿಕ್ಷಕರ ಸಮಿತಿ ರಚನೆ•ಪಾರದರ್ಶಕ ಖರೀದಿಗೆ ಅಧಿಕಾರಿಗಳ ಅಡ್ಡಿ ಇಲ್ಲ• ಬ್ಯಾಂಕ್ ಖಾತೆಗೆ ಹಣ ಜಮಾ
Team Udayavani, Aug 21, 2019, 5:01 PM IST
ದೇವದುರ್ಗ: ಸರಕಾರಿ ಶಾಲೆಗಳಿಗೆ ಉಚಿತ ಶೂ ಸಾಕ್ಸ್ ಖರೀದಿಗೆ ಹೊರಡಿಸಿದ ಆದೇಶ ಪ್ರತಿ.
ದೇವದುರ್ಗ: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ವಿತರಿಸುವ ಸಲುವಾಗಿ ಶೂ ಸಾಕ್ಸ್ ಖರೀದಿಸಲು 1.27 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಗತಿಸಿದೆ. ರಾಜ್ಯ ಸರಕಾರ ಇದೀಗ ಶಿಕ್ಷಣ ಇಲಾಖೆಗೆ ಶೂ ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಿದೆ. ಶೂ ಸಾಕ್ಸ್ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್‌ಡಿಎಂಸಿ ಅನುಮೋದಿತ ಸಮಿತಿ ರಚಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಶೂ ಸಾಕ್ಸ್ ಖರೀದಿಸಲು ಸರಕಾರಿ ಶಾಲೆಯಲ್ಲಿ ಸಮಿತಿ ರಚಿಸಲಾಗಿದೆ. ಎಸ್‌ಡಿಎಂಸಿ, ಮುಖ್ಯ ಶಿಕ್ಷಕರ ಮೂವರಲ್ಲಿ ಒಬ್ಬ ಪುರುಷ ಸದಸ್ಯ, ಇಬ್ಬರೂ ಮಹಿಳೆ ಸದಸ್ಯರು ಸೇರಿ ಸಮಿತಿ ರಚಿಸಲಾಗಿದೆ. ಸಮಿತಿ ಸೂಚನೆಯಂತೆ ಶೂ ಸಾಕ್ಸ್ ಪ್ರಕ್ರಿಯೆ ನಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆಗೆ ಈಗಾಗಲೇ ಅನುದಾನ ಜಮಾ ಮಾಡಲಾಗಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗೆ 265 ರೂ. 6ರಿಂದ 8ನೇ ತರಗತಿ ವಿದ್ಯಾರ್ಥಿಗೆ 295ರೂ. 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ಅನುದಾನ ನೀಡಲಾಗಿದೆ. ಶೂ ಸಾಕ್ಸ್ ಅನುದಾನ ಕುರಿತು ಶಾಲೆ ಮುಖ್ಯ ಶಿಕ್ಷಕರು ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಒಬ್ಬರಿಗೂ ಒಂದೊಂದು ಹೇಳಿಕೆ ನೀಡುವ ಅಧಿಕಾರಿಗಳ ಗೊಂದಲದಿಂದಾಗಿ ಇಲ್ಲಿವರೆಗೆ ಶೂ ಸಾಕ್ಸ್ ಖರೀದಿಗೆ ಮುಹೂರ್ತ ಕೂಡಿ ಬಂದಿಲ್ಲ. ಹೀಗಾಗಿ ಬಡಮಕ್ಕಳ ಆಸೆಗೆ ತಣ್ಣೀರು ಎರಚಿದಂತಾಗಿದೆ ಎಂದು ಪಾಲಕರು ದೂರಿದ್ದಾರೆ.
ಉಚಿತ ಶೂ ಮತ್ತು ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ವೆಬ್‌ಸೈಟ್ ಮಾಡಲಾಗಿದೆ. ಖರೀದಿ ಪ್ರಕ್ರಿಯೆ ಮುಗಿದ ನಂತರ ವೆಬ್‌ಸೈಟ್‌ನಲ್ಲಿ ಎಲ್ಲ ಸರಕಾರಿ ಶಾಲೆ ಮುಖ್ಯ ಶಿಕ್ಷಕರು ಖರೀದಿ ಮಾಹಿತಿಯನ್ನು ಬಿಆರ್‌ಪಿ ಮತ್ತು ಸಿಆರ್‌ಪಿಗಳ ಮೂಲಕ ಅಪ್‌ಲೋಡ್ ಮಾಡಬೇಕು. ಕ್ಷೇತ್ರಶಿಕ್ಷಣಾಧಿಕಾರಿ ಹಂತದಲ್ಲಿ ಪರಿಶೀಲಿಸಿ ಜಿಲ್ಲಾ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗುತ್ತಿದೆ.
ಶೂ ಸಾಕ್ಸ್ ಮಾರಾಟ ಮಾಡುವ ಡೀಲರ್ ಸಂಸ್ಥೆ ಜಿಎಸ್‌ಟಿ ಸಂಖ್ಯೆ, ಸಂಸ್ಥೆ ವಿವರ, ಮೂರು ಕೊಟೇಶನ್ ಪ್ರತಿಗಳು. ಒಂದು ಜತೆ ಪಾದರಕ್ಷೆಗೆ ತಗಲುವ ವೆಚ್ಚ ಹಾಗೂ ಖರೀದಿ ಒಟ್ಟು ಮೌಲ್ಯ ಮಾಹಿತಿ ಆದೇಶದ ಅನುಮೋದನೆಯನ್ನು ತಂತ್ರಾಂಶದ ಮೂಲಕವೇ ಮಾಡತಕ್ಕದು ಎಂಬ ನಿಯಮ ಇದೆ.
1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್ ಖರೀದಿ ಪ್ರಕ್ರಿಯೆ ಆರಂಭಿಸಲು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ, ಬಿಆರ್‌ಪಿ, ಸಿಆರ್‌ಪಿ ಅಧಿಕಾರಿಗಳು ಹಸ್ತಕ್ಷೇಪ ಮಾಡದಂತೆ ಸೂಚಿಸಲಾಗಿದೆ. ಸರಕಾರ ಸರ್ಕಾರಿ ಶಾಲೆ 300ಕ್ಕೂ ಹೆಚ್ಚು ಪ್ರಾಥಮಿಕ, 32 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆಗೆ ಈಗಾಗಲೇ ಅನುದಾನ ಜಮಾ ಮಾಡಲಾಗಿದೆ. ಹೀಗಾಗಿ ಶಾಲಾ ಹಂತದಲ್ಲೇ ಶೂ ಸಾಕ್ಸ್ ಖರೀದಿ ಪ್ರಕ್ರಿಯೆ ನಡೆಯಬೇಕು. ಕಳೆದ ವರ್ಷ ರಾಜಕೀಯ ಪ್ರಭಾವಿಗಳು ಕಮೀಷನ್ ದಂಧೆಗೆ ಬಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ಕಳಪೆ ಗುಣಮಟ್ಟದ ಶೂ ಸಾಕ್ಸ್ ಖರೀದಿಸಲಾಗಿತ್ತು. ಈ ವರ್ಷ ಅಂತಹ ದಂಧೆ ನಡೆಯದಂತೆ ಮುಖ್ಯ ಶಿಕ್ಷಕರು ಮುನ್ನಚ್ಚರಿಕೆ ವಹಿಸಬೇಕು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹನುಮಂತಪ್ಪ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.