ನೀರಿಲ್ಲದೇ ಒಣಗುತ್ತಿವೆ ರಸ್ತೆ ಪಕ್ಕದ ಗಿಡಗಳು!
ಸಂಘ-ಸಂಸ್ಥೆಯವರಿಂದ ವಾರಕ್ಕೊಮ್ಮೆ ಟ್ಯಾಂಕರ್ ನೀರು
Team Udayavani, Apr 6, 2019, 12:35 PM IST
ದೇವದುರ್ಗ: ಪಟ್ಟಣದ ಪ್ರಮುಖ ರಸ್ತೆ ಪಕ್ಕದಲ್ಲಿ ಬಾಡುತ್ತಿರುವ ಗಿಡಗಳು.
ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಆರೇಳು ತಿಂಗಳ ಹಿಂದೆ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಸಂರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ಗಿಡಗಳು ಬಾಡಲು ಆರಂಭಿಸಿವೆ. ರಾಜ್ಯ ಹೆದ್ದಾರಿ, ಶಾಲಾ-ಕಾಲೇಜು, ಜಹಿರುದ್ದೀನ್ ವೃತ್ತದಿಂದ ಸಾರ್ವಜನಿಕ ಕ್ಲಬ್
ವರೆಗೆ ರಸ್ತೆಯ ಎಡಬಲಕ್ಕೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸುವವರು ಇಲ್ಲದೇ ಇರುವ ಕಾರಣ ಬಾಡುತ್ತಿವೆ. ಸಾರ್ವಜನಿಕ ಕ್ಲಬ್ ಆವರಣದ ಒಳಗೆ ಹಾಕಿದ ಗಿಡಗಳು ಬಹುತೇಕ ಈಗಾಗಲೇ ಬಾಡಿ
ಹೋಗಿವೆ. ಪರಿಸರ ದಿನಾಚರಣೆಯೆಂದೇ ಸರಕಾರಿ ಶಾಲಾ-ಕಾಲೇಜು ಸರಕಾರಿ ಕಚೇರಿ ಆವರಣದಲ್ಲಿ ಸಸಿಗಳು ನೆಡುವುದು ಸಾಮಾನ್ಯ. ಆದರೆ ಅವುಗಳ ಸಂರಕ್ಷಣೆ ಮಾಡಿ ಉತ್ತಮ ಪರಿಸರ, ವಾತಾವರಣ ನಿರ್ಮಿಸಲು ಅಧಿಕಾರಿಗಳು, ಸಂಘ ಸಂಸ್ಥೆಯವರು
ಆಸಕ್ತಿ ವಹಿಸದಿರುವುದರಿಂದ ವರ್ಷದಲ್ಲೇ ಬಾಡಿ, ದನಕರಗಳ ಬಾಯಿಗೆ ಆಹಾರವಾಗುತ್ತಿವೆ.
ರಾಜ್ಯ ಹೆದ್ದಾರಿ ಕಲಬುರಗಿ, ತಿಂಥಿಣಿ ಬ್ರಿಜ್, ಕ್ರೀಡಾಂಗಣದಲ್ಲಿ ಗಿಡಗಳು ಹಾಕಲಾಗಿದೆ. ಅರಣ್ಯ ಇಲಾಖೆಯಿಂದ ಅವುಗಳ ಸಂರಕ್ಷಣೆ ನೀರು ಹಾಕದಿರುವುದರಿಂದ ಇದೀಗ ಬಾಡುತ್ತಿವೆ. ವಾರದ
ರವಿವಾರಕ್ಕೆ ಒಂದು ದಿನ ಸಂಘಟನೆಯಿಂದ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕಲಾಗುತ್ತಿದೆ. ಉಳಿದ ದಿನ ಸಂಘಟನೆಯವರು
ಅಧಿ ಕಾರಿಗಳು ನೀರು ಹಾಕದೇ ವಾರ ಬರುವವರೆಗೆ ಗಿಡಗಳಿಗೆ ನೀರಿಲ್ಲದೇ ಬಾಡುತ್ತಿವೆ. ಮುಂಗಾರು, ಹಿಂಗಾರು ವೈಫಲ್ಯ, ಮಳೆ ಕೊರತೆ ಹೀಗಾಗಿ ಬೆಳೆದು ನೆರಳಿನ ಆಸರೆ ನೀಡಬೇಕಾದ ಗಿಡಗಳು ನೀರಿನ ಅಭಾವದಿಂದ ಇದೀಗ ಬಾಡಲು ಆರಂಭಿಸಿವೆ. ಮುಖ್ಯರಸ್ತೆ ಪಕ್ಕದಲ್ಲಿ ಹಾಕಿದ ಗಿಡಗಳಿಗೆ ಪಕ್ಕದ ಅಂಗಡಿ ಹೋಟೆಲ್ ಮಾಲೀಕರು ನಿತ್ಯ ಒಂದೆರಡು ಕೊಡಗಳು ನೀರು ಹಾಕುತ್ತಿದ್ದರು. ಆದರೆ ಬೇಸಿಗೆ ಆರಂಭವಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಮಾಲೀಕರು ಗಿಡಗಳಿಗೆ ನೀರು ಎಲ್ಲಿಂದ ಹಾಕಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಶಾಸಕ ಕೆ.ಶಿವನಗೌಡ ನಾಯಕ ಬಿಜೆಪಿ ಸರಕಾರ ಆಡಳಿತ ಅವ ಧಿಯಲ್ಲಿ ಮಂಜೂರು ಆಗಿದ್ದ ಕ್ರೀಡಾಂಗಣ ಅಂದಿನ ಸಚಿವ ಗೂಳ್ಳಿಹಟ್ಟಿ ಶೇಖರ ಉದ್ಘಾಟಿಸಿದರು. ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಕುಡಿಯುವ ನೀರು, ರಸ್ತೆ ಅರೆಬರೆ ಕಾಮಗಾರಿ
ಮಾಡಿದ ಪರಿಣಾಮ ಇಲ್ಲಿವರೆಗೆ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಹೋಗದಿರುವುದರಿಂದ ಪಾಳು ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕ್ರೀಡಾಂಗಣ ಸುತ್ತಲೂ ಸಸಿ ನೆಡಲಾಗಿದೆ. ನೀರುಣಿಸುವ ಆಲೋಚನೆ ಮಾಡದೇ ಹಿನ್ನೆಲೆ ಬೇಸಿಗೆ ಬಿಸಿಲಿಗೆ ಬಾಡಲು ಆರಂಭಿಸಿವೆ.
ಸಿಪಿಐ ಟಿ.ಸಂಜೀವಕುಮಾರ ಗಿಡಗಳು ಬೆಳೆಸಲು ಬಹಳ ಆಸಕ್ತಿ ತೋರಿದರು. ಆದರೆ ಅವರ ವರ್ಗಾವಣೆ ಹಿನ್ನೆಲೆ ಸಂಘಟನೆಯವರು ಅಲ್ಪಸ್ವಲ್ಪ ರಕ್ಷಣೆ ಬಿಟ್ಟರೇ ಸಂಬಂಧಪಟ್ಟ ಅರಣ್ಯಾಧಿ ಕಾರಿಗಳು ಗಿಡಗಳು ಯಾವ ಹಂತದಲ್ಲಿ ಇವೆ ಎಂಬುದನ್ನು ನೋಡುವ ಗೋಜಿಗೆ ಹೋಗದಿರುವುದರಿಂದ ಪರಿಸರ ದಿನಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೀಸಲಾಗಿದ್ದಾರೆ ಎಂದು ಸ್ಥಳೀಯರಾದ ಅಮರೇಶ ಆರೋಪಿಸಿದ್ದಾರೆ.
ಪಟ್ಟಣದ ಪ್ರಮುಖ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನೆಟ್ಟಿರುವ ಗಿಡಗಳು
ನೀರಿಲ್ಲದೇ ಬಾಡುತ್ತಿವೆ. ಅರಣ್ಯಾಧಿ ಕಾರಿಗಳು ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸಂಘಟನೆಯವರು
ಆಸಕ್ತಿ ವಹಿಸಿದ್ದರಿಂದ ಅಲ್ಪ ಸ್ವಲ್ಪ ಗಿಡಗಳು ನೋಡುವಂತಾಗಿದೆ.
.ಎಚ್.ಶಿವರಾಜ, ಕರವೇ ಮುಖಂಡ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.