ಶಿಕ್ಷಣಕ್ಕೆ ಮಠಗಳ ಕೊಡುಗೆ ಅಪಾರ
ಸಾಧನೆಗೆ ಬಡತನ ಅಡ್ಡಿ ಆಗದು • ಮಕ್ಕಳನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸಿ
Team Udayavani, Jul 28, 2019, 1:22 PM IST
ದೇವದುರ್ಗ: ಗುಂಡಗುರ್ತಿ ಗ್ರಾಮದ ಶ್ರೀ ಶರಣ ಹೊನ್ನಯ್ಯ ತಾತ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಮೋನಪ್ಪ ಗೋನಾಳ ಉದ್ಘಾಟಿಸಿದರು
ದೇವದುರ್ಗ: ಸಾಮಾಜಿಕ, ಧಾರ್ಮಿಕ ಕಾರ್ಯದ ಜೊತೆಗೆ ಶೈಕ್ಷಣಿಕ ಕ್ಷೇತ್ರಗಳಿಗೆ ನಾಡಿನ ಮಠಮಾನ್ಯಗಳು ಅಪಾರ ಕೊಡುಗೆ ನೀಡಿವೆ ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಮೋನಪ್ಪ ಗೋನಾಳ ಹೇಳಿದರು.
ಸಮೀಪದ ಗುಂಡಗುರ್ತಿ ಗ್ರಾಮದ ಶ್ರೀ ದೇವರ ಗುಂಡಗುರ್ತಿ ಮೈಲಾರಲಿಂಗೇಶ್ವರ ಶರಣ ಸಂಸ್ಥಾನಮಠದ ಶ್ರೀ ಶರಣ ಹೊನ್ನಯ್ಯ ತಾತ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಗಳ ಜತೆ ಶೈಕ್ಷಣಿಕ ಕ್ಷೇತ್ರದಲ್ಲೂ ತೊಡಗಿದ ಮಠಗಳು ಬಡ ವಿದ್ಯಾರ್ಥಿಗಳಿಗೆ ನೆರವಾಗಿವೆ. ಪ್ರತಿ ಮಗುವಿನ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಬುನಾದಿಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆ ಆದರೂ ಶಾಲೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಪಿಎಸ್‌ಐ ಎಲ್.ಬಿ. ಅಗ್ನಿ ಮಾತನಾಡಿ, ಬಡತನದಲ್ಲಿ ಜನಿಸಿದ ಅನೇಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಲ್ಲ. ವಿದ್ಯಾರ್ಥಿಗಳು ಉನ್ನತ ಗುರಿ ಇರಿಸಿಕೊಂಡು ಶಿಕ್ಷಣ ಪಡೆಯಬೇಕು. ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು. ಮಕ್ಕಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಲು ಶಿಕ್ಷಕರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಶ್ರೀ ನಿಜಲಿಂಗ ಸ್ವಾಮೀಜಿ ಮಾತನಾಡಿ, ಜ್ಞಾನದಿಂದ ವ್ಯಕ್ತಿ, ಸಮಾಜ, ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿದ ಖಾಜನಗೌಡ ದೇವಸುಗೂರು, ಎಂ.ವಿ. ರಂಗಲಿಂಗನಗೌಡ, ಪ್ರಕಾಶ ಪಾಟೀಲ ಜೇರಬಂಡಿ, ಮನ್ಮಥಸ್ವಾಮಿ ಹೈದರಾಬಾದ್ ಅವರನ್ನು ಸನ್ಮಾನಿಸಲಾಯಿತು.
ಗಂಗಪ್ಪಯ್ಯ ತಾತಾ ಮನಸಗಲ್, ಶ್ರೀನಿವಾಸರೆಡ್ಡಿ, ಜಿ.ಬಸವರಾಜ ರೆಡ್ಡಿ, ಡಾ| ಹನುಮಂತರೆಡ್ಡಿ, ಅಮರಣ್ಣಗೌಡ ಗೋಪಳಾಪುರ, ಅಮಾತೆಪ್ಪಗೌಡ ಜೋಳದಹೆಡಗಿ, ಶಿವಶಂಕ್ರಪ್ಪ ಯಮನಾಳ, ಬಸವರಾಜಪ್ಪಗೌಡ ಜೋಳದಹೆಡಗಿ, ಪ್ರಕಾಶ ಅಬಕಾರಿ, ದೇವೇಂದ್ರಪ್ಪ ನಾಯಕ, ಹೊನ್ನಯ್ಯ ಪೂಜಾರಿ, ಮುನಿಯಪ್ಪ ನಾಗೋಲಿ, ನಾಗರೆಡ್ಡಿ ಹೇಮನೂರು, ಶಿಕ್ಷಣ ಸಂಯೋಜಕ ಸುರೇಶ ಪಾಟೀಲ, ಚಿದಾನಂದಪ್ಪ ಶಿವಂಗಿ, ಶಂಕರಲಿಂಗಸ್ವಾಮಿ ದೇವರಗುಡ್ಡ, ಬಾಲಚಂದ್ರ ಸ್ವಾಮಿ ಗುಂಡಗುರ್ತಿ, ಹೊನ್ನಯ್ಯಗೌಡ, ಮಲ್ಲಪ್ಪ ಅಂಗಡಿ, ಮಲ್ಲಪ್ಪ ಸೇರಿ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.