ಪರಿಹಾರಕ್ಕೆ ಬಾಧಿತರ ಅಲೆದಾಟ
2018-19ರಲ್ಲಿ 46 ಪ್ರಕರಣ ದಾಖಲು • ಕಂದಾಯ-ಕೃಷಿ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ
Team Udayavani, Jun 10, 2019, 12:01 PM IST
ದೇವದುರ್ಗ: ದೇವರಗುಡ್ಡ ಗ್ರಾಮದಲ್ಲಿ ಇತ್ತೀಚೆಗೆ ಆಕಸ್ಮಿಕ ಬೆಂಕಿ ತಗಲು ಬಣವಿ ಭಸ್ಮವಾಗಿದೆ.
ದೇವದುರ್ಗ: ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಆಕಸ್ಮಿಕ ಬೆಂಕಿ ತಗುಲಿ ಜಾನುವಾರು ಸಾವು, ಗುಡಿಸಲು, ಮೇವಿನ ಬಣವಿ ಭಸ್ಮ ಮತ್ತು ಸಿಡಿಲಿಗೆ ಜಾನುವಾರು ಸಾವು ಪ್ರಕರಣಗಳಲ್ಲಿ ಈವರೆಗೆ ಸರ್ಕಾರ ಪರಿಹಾರ ವಿತರಿಸದ್ದರಿಂದ ಬಾಧಿತರು ತಹಶೀಲ್ದಾರ್ ಕಚೇರಿ, ಕೃಷಿ ಇಲಾಖೆಗೆ ಅಲೆದಾಡುವಂತಾಗಿದೆ.
2017-18ನೇ ಸಾಲಿನಲ್ಲಿ ಎಚ್.ಎನ್.ತಾಂಡಾದಲ್ಲಿ ರಾಠೊಡ, ದಾನಪ್ಪ ಎಂಬವರ ಬಣವಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಹಾನಿ ಆಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪರಿಹಾರಕ್ಕಾಗಿ ಜಿಲ್ಲಾಡಳಿತ ವರದಿ ನೀಡಿದ್ದರು. ಈವರೆಗೆ ಪರಿಹಾರ ಬಾರದ್ದರಿಂದ ಸಂತ್ರಸ್ತರು ನಿತ್ಯ ತಹಶೀಲ್ದಾರ್ ಕಚೇರಿ ಅಲೆದಾಡುವಂತಾಗಿದೆ.
ಒಂದು ವಾರದ ಹಿಂದೆ ಗಬ್ಬೂರು ಗ್ರಾಮದಲ್ಲಿ ಬಸಲಿಂಗಯ್ಯ ಸಿದ್ರಾಮಯ್ಯ ಚಿಕ್ಕಮಠ ಎಂಬವರಿಗೆ ಸೇರಿದ ಮೇವಿನ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಂದಾಯ ಅಧಿಕಾರಿಗಳು ಮಹಜರು ನಡೆಸಿ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ವಾರ ದೇವರಗುಡ್ಡ ಗ್ರಾಮದಲ್ಲಿ ಬೆಂಕಿ ತಗುಲಿ ರೈತ ಬಸವರಾಜ ಎಂಬವರ ಬಣವಿ ಕೂಡ ಭಸ್ಮವಾಗಿದೆ. ಕಳೆದ ವರ್ಷ ಹೂವಿನಹೆಡಗಿ ಗ್ರಾಮದಲ್ಲಿ ಬಸಲಿಂಗಮ್ಮ ಗುರುಬಸವ, ಬಸಲಿಂಗಮ್ಮ ಗೂಳಪ್ಪ ಎಂಬವರಿಗೆ ಸೇರಿ ಎರಡು ಎಮ್ಮೆಗಳು ಸಿಡಿಲಿಗೆ ಬಲಿಯಾಗಿವೆ. ಕಂದಾಯ ಇಲಾಖೆ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಿದೆ. ಆದರೆ ಈವರೆಗೆ ನೊಂದವರಿಗೆ ಪರಿಹಾರ ಸಿಕ್ಕಿಲ್ಲ.
ಮಂಡಲಗುಡ್ಡ ಗ್ರಾಮದಲ್ಲಿ ನರಸಪ್ಪ ಶಿವಪ್ಪ ಅವರ ಎತ್ತು ಸಿಡಿಲಿಗೆ ಮೃತಪಟ್ಟಿದೆ. ಇದಲ್ಲದೇ 2018-19ರಲ್ಲಿ 46 ಆಕಸ್ಮಿಕ ಬೆಂಕಿ ಪ್ರಕರಣಗಳಲ್ಲಿ ಬಣವಿ, ಗುಡಿಸಲು, ಪಾನ್‌ಶಾಪ್ ಸೇರಿ ಇತರೆ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಪರಿಹಾರ ಬಂದಿಲ್ಲ.
ನೈಸರ್ಗಿಕ ವಿಕೋಪದಡಿ ಹಾನಿ ಸಂಭವಿಸಿದರೆ ತಾಲೂಕು ಆಡಳಿತ ಪರಿಹಾರ ಮಂಜೂರಿಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತದೆ. ಆಕಸ್ಮಿಕ ಬೆಂಕಿ ಪ್ರಕರಣಗಳು ಸಂಭವಿಸಿದ ಹಳ್ಳಿಗಳಿಗೆ ಪರಿಶೀಲನೆಗಾಗಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ತೆರಳುತ್ತಾರೆ. ಇವರು ವರದಿ ನೀಡಿದರೂ ಕಂದಾಯ ಇಲಾಖೆಯಿಂದ ಯಾವುದೇ ಪರಿಹಾರ ಬರುವುದಿಲ್ಲ. ಮೇವಿನ ಬಣವಿ, ಬೆಳೆ ಹಾನಿ ಪ್ರಕರಣಗಳಲ್ಲಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಕೃಷಿ ಇಲಾಖೆಗೆ ನಷ್ಟದ ವರದಿ ನೀಡುತ್ತಾರೆ. ಆದರೆ ಕಂದಾಯ, ಕೃಷಿ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿಂದ ಬಹುತೇಕ ನೊಂದವರಿಗೆ ಪರಿಹಾರ ಲಭಿಸುತ್ತಿಲ್ಲ. ಹೀಗಾಗಿ ಬಾಧಿತರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿರುವ ಕೆಆರ್‌ಎಸ್ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ನೈಸರ್ಗಿಕ ವಿಕೋಪದಡಿ ಯಾವುದೇ ಹಾನಿ ಉಂಟಾದಲ್ಲಿ ಜಿಲ್ಲಾಡಳಿತ ಪರಿಹಾರ ನೀಡಲಾಗುತ್ತಿದೆ. ಆಕಸ್ಮಿಕ ಬೆಂಕಿಗೆ ಆಹುತಿಯಾಗುವ ಬಣವಿ, ಗುಡಿಸಲುಗಳಿಗೆ ಕೃಷಿ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ.
••ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.