ಸಾಧಕರ ಸಾಧನೆ ಅರಿಯಲು ಯುವಜನತೆಗೆ ಸಲಹೆ
Team Udayavani, Jul 7, 2019, 3:11 PM IST
ದೇವರಹಿಪ್ಪರಗಿ: ಡಾ| ರಾಮರಾವ್ ನಾಡಗೌಡ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಡಾ| ಕೃಷ್ಣ ಕೋಲಾØರ ಕುಲಕರ್ಣಿ ಮಾತನಾಡಿದರು.
ದೇವರಹಿಪ್ಪರಗಿ: ಸಾಧಕರ ಸಾಧನೆಗಳನ್ನು ಇಂದಿನ ಯುವಜನತೆ ಅರಿತು ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಾಹಿತಿ ಡಾ| ಕೃಷ್ಣ ಕೋಲಾØರ ಕುಲಕರ್ಣಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ಶಿವಾನುಭವ ಮಂಟಪದಲ್ಲ್ತಿ ಅಂಬಿಕಾತನಯದತ್ತ ವೇದಿಕೆ ಸಿಂದಗಿ, ದೇವರಹಿಪ್ಪರಗಿ ಗೆಳೆಯರ ಬಳಗ ಹಾಗೂ ನಾಡಗೌಡ ಪರಿವಾರ ಸಂಯುಕ್ತ ಆಶ್ರಯದಲ್ಲಿ ನಡೆದ ದಿ| ಡಾ| ರಾಮರಾವ್ ನಾಡಗೌಡ ಸ್ಮರಣೋತ್ಸವ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ವೈದ್ಯರಾಗಿ ತಮ್ಮ ಜೀವಿತದ 45 ವರ್ಷ ಜನಸೇವೆ ಮಾಡಿದ ಡಾ| ರಾಮರಾವ್ ನಾಡಗೌಡ ಇಂದಿನ ಯುವ ವೈದ್ಯ ಸಮೂಹಕ್ಕೆ ಮಾದರಿಯಾಗಿದ್ದಾರೆ. ಅಂತೆಯೇ ಇಡಿ ನಾಡಗೌಡ ಪರಿವಾರ ಇಂಥ ಕಾರ್ಯಕ್ರಮ ಮೂಲಕ ಅವರಿಗೆ ನುಡಿನಮನ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿ ದ.ರಾ. ಬೇಂದ್ರೆ ಪ್ರತಿಷ್ಠಾನ ಅಧ್ಯಕ್ಷ ಡಾ| ಬಿ.ಆರ್. ನಾಡಗೌಡ ಮಾತನಾಡಿ, ಸಾಧಕರು ಹಾಗೂ ಕರ್ಮಯೋಗಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ಸಾಧಕರು ಗುರುವಿನ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಕರ್ಮಯೋಗಿಗಳು ಕಾಯಾ, ವಾಚಾ, ಮನಸಾ ಶ್ರಮ ಜೀವಿಗಳಾಗಿ ಕಾಯಕದಲ್ಲಿ ನಿರತರಾಗಿರುತ್ತಾರೆ. ಅಂತಹ ಕರ್ಮಯೋಗಿಯಾಗಿ ಬಾಳಿದವರು ನಮ್ಮ ತಂದೆ ರಾಮರಾವ್ ನಾಡಗೌಡರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಗೋಪಾಲ ನಾಯಕ, ಸಿಂದಗಿಯ ಶಿವಪ್ಪಗೌಡ ಬಿರಾದಾರ ಮಾತನಾಡಿದರು. ಈ ವೇಳೆ ಸರೋಜಿನಿ ಕುಲಕರ್ಣಿ ಹಾಗೂ ಬಸಲಿಂಗಮ್ಮ ಕುಂಬಾರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಎಸ್.ಎಸ್. ಬಬಲೇಶ್ವರ, ಡಾ| ಆರ್.ಆರ್. ನಾಯಕ, ಪಿ.ಜಿ. ಹಿರೇಮಠ, ಜಿ.ಬಿ. ಸಾಲಕ್ಕಿ, ಆರ್.ಆರ್. ಮಣೂರ, ಕೆ.ಬಿ. ಕಡೇಮನಿ, ಸಿ.ಕೆ. ಕುದರಿ, ಬಾಬುಗೌಡ ಪಾಟೀಲ, ಬಿ.ಕೆ. ಪಾಟೀಲ, ಎಸ್.ಎನ್. ಕೋರಿ, ಸಿ.ಐ. ಯರನಾಳ ಇದ್ದರು.
ರಮೇಶ ದೇಶಪಾಂಡೆ ಪ್ರಾರ್ಥಿಸಿದರು. ಶರಶ್ಚಂದ್ರ ನಾಡಗೌಡ ಸ್ವಾಗತಿಸಿದರು. ಬಿ.ಎಂ. ಪಾಟೀಲ, ನಾಗರಾಜ ಬಿರಾದಾರ ನಿರೂಪಿಸಿದರು. ಆರ್.ಕೆ.ನಾಡಗೌಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.