ತುಂಬಿದ ಬಮ್ಮನಜೋಗಿ ಕೆರೆಗೆ ಗಂಗಾ ಪೂಜೆ-ಬಾಗಿನ
Team Udayavani, Oct 25, 2019, 6:45 PM IST
ದೇವರಹಿಪ್ಪರಗಿ: ಗ್ರಾಮದ ಎಲ್ಲ ರೈತ ಸಮುದಾಯಕ್ಕೆ ಆಧಾರವಾದ ಕೆರೆ ಭರ್ತಿಯಾಗಿದ್ದು, ವರ್ಷದುದ್ದಕ್ಕೂ ಸದುಪಯೋಗವಾಗುವಂತಾಗಲಿ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಬಮ್ಮನಜೋಗಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಈಚೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕಾಲುವೆ ಮೂಲಕ ತಾಲ್ಲೂಕಿನ ಎಲ್ಲ ಕೆರೆ, ಹಳ್ಳಗಳಿಗೆ 2 ಹಂತದಲ್ಲಿ ನೀರು ಹರಿಸಲಾಗುತ್ತಿದೆ. ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಗುತ್ತಿದೆ. ಈ ಸಮಯದಲ್ಲಿ ವರುಣ ದೇವನು ಅಭಯ ನೀಡುತ್ತಿದ್ದಾನೆ. ಹೀಗಾಗಿ ಮತಕ್ಷೇತ್ರದಾದ್ಯಂತ ಉತ್ತಮ ಮಳೆಯಾಗಿದೆ. ಜೊತೆ ಕಾಲುವೆ ನೀರು ಸಾಕಷ್ಟು ಹರಿಯುತ್ತಿರುವುದರಿಂದ ಈ ಬಾರಿ ಕುಡಿಯುವ ನೀರಿನ ಹಾಹಾಕಾರ ತಲೆದೋರಲಾರದು ಎಂದು ಆಶಿಸೋಣ ಎಂದರು.
ನಂತರ ಗ್ರಾಮಸ್ಥರ ಸನ್ಮಾನದೊಂದಿಗೆ ಅವರ ಮನವಿಗೆ ಸ್ಪಂದಿಸಿ ಬಸ್ ಕಾಣದ ಗ್ರಾಮಕ್ಕೆ ಆದಷ್ಟು ಬೇಗ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಸರಕಾರಿ ಶಾಲೆ ಕೊಠಡಿಗಳ ನಿರ್ಮಾಣಕ್ಕಾಗಿ ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು, ಗ್ರಾಮಸ್ಥರ ಅಸಹಕಾರದಿಂದ ವಿಳಂಬವಾಗುತ್ತಿರುವ ಕುರಿತು ಖೇದ ವ್ಯಕ್ತಪಡಿಸಿದ ಶಾಸಕರು, ಇಂಥ ಕಾರ್ಯಗಳಿಗೆ ಸಹಕಾರ ನೀಡುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕನ್ನೋಳ್ಳಿ ಹಿರೇಮಠ ಅಭಿನವ ಸಿದ್ಧಲಿಂಗ ಶ್ರೀಗಳು, ಬಿಜೆಪಿ ಮುಖಂಡ ಶಂಕರ ಬಗಲಿ, ಬಾಪುಗೌಡ ಪಾಟೀಲ ವಡವಡಗಿ, ಗ್ರಾಪಂ ಅಧ್ಯಕ್ಷ ಪೈಗಂಬರ್ ಮುಲ್ಲಾ, ತಾಪಂ ಸದಸ್ಯ ದಿಲೀಪ ರಾಠೊಡ, ರಮೇಶ ಮಸಬಿನಾಳ, ಬಸವರಾಜ ಕಲ್ಲೂರ, ಎಸ್.ಕೆ. ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಎಇ ಎಸ್.ಎಂ.ಅಲ್ದಿ, ವೈ.ಬಿ. ಭಂಟನೂರ, ಎಂ.ಎಸ್.ಬಿರಾದಾರ, ಮಲ್ಲನಗೌಡ ಬಿರಾದಾರ, ಆರ್.ಎಂ.ಪಾಟೀಲ, ಎಂ.ಡಿ.ಕೋಣಶಿರಸಗಿ, ಸಿದ್ದು ಬಿರಾದಾರ, ದೇಸು ನಾಯಕ, ಲಕ್ಷ್ಮಣ ನಂದಗೇರಿ, ರಾಜಶೇಖರ ಕೋಣಶಿರಸಗಿ, ಸಂಗನಗೌಡ ಪಾಟೀಲ, ಶರಣು ಬಿರಾದಾರ, ಅಣ್ಣುಗೌಡ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.