ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ
500 ಸ್ವಯಂಸೇವಕರಿಂದ 9 ಲೋಡ್ ಬಟ್ಟೆ, ಕಸ ತೆರವು
Team Udayavani, May 26, 2019, 10:55 AM IST
ಧರ್ಮಸ್ಥಳ ಸ್ನಾನಘಟ್ಟದ ನೇತ್ರಾವತಿ ನದಿಯ ಸ್ವಚ್ಛತಾ ಕಾರ್ಯವನ್ನು ಶುಕ್ರವಾರ ನೂರಾರು ಕಾರ್ಯಕರ್ತರು ನೆರವೇರಿಸಿದರು.
ಬೆಳ್ತಂಗಡಿ: ಧರ್ಮಸ್ಥಳ ಸ್ನಾನಘಟ್ಟದ ನೇತ್ರಾವತಿ ನದಿಯ ಸ್ವಚ್ಛತಾ ಕಾರ್ಯವನ್ನು ಶುಕ್ರವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ನೆರವೇರಿಸಿದರು. ಶ್ರದ್ಧಾ ಅಮಿತ್, ಮಾನ್ಯಾ ಸ್ವಚ್ಛತಾ ಸೇವೆಯಲ್ಲಿ ಪಾಲ್ಗೊಂಡರು.
ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಗ್ಗೆ ಗಂಟೆ 6ರಿಂದ 9ರ ವರೆಗೆ ದೇವಸ್ಥಾನದ ನೌಕರರು, ವಾಹನ ಚಾಲಕರು-ಮಾಲಕರು, ಗ್ರಾಮಾಭಿವೃದ್ಧಿ ನೌಕರರು, ಮಹಿಳಾ ಸಂಘಟನೆಗಳು, ಊರವರು, ಗ್ರಾ.ಪಂ., ಕೆ.ಎಸ್.ಆರ್.ಟಿ.ಸಿ. ಹಾಗೂ ವಿವಿಧ ಸಂಘಟನೆಗಳ ಸುಮಾರು 500ಕ್ಕೂ ಹೆಚ್ಚಿನ ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಪ್ರವಾಸಿಗರು ನದಿಗೆ ಎಸೆದ ಬಟ್ಟೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ 6 ಲಾರಿ, 3 ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಲಾಯಿತು. ಸ್ವಚ್ಛತೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿಗೆ ದೇವಸ್ಥಾನ ವತಿಯಿಂದ ತಿಂಡಿ ಹಾಗೂ ಗಂಜಿ ಚಟ್ನಿ ವಿತರಿಸಲಾಯಿತು.
‘ಸ್ವಚ್ಛತಾ ಭಾವನೆ ಮೂಡಲಿ’
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಧ್ಯಮದವರೊಂದಿಗೆ ಮಾತನಾಡಿ, ಸ್ವಚ್ಛತೆ ಬಹಳ ಅಗತ್ಯವಿತ್ತು. ಜನರಿಗೆ ಪ್ರಜ್ಞಾವಂತಿಕೆ ಕೊಡುವುದೇ ಬಹಳ ಮುಖ್ಯ. ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಪರಿಣಾಮಕಾರಿಯಾಗಿ ದೇಶದಲ್ಲಿ ಶೇ. 50 ಯಶಸ್ವಿಯಾಗಿದೆ. ಪ್ರತಿ ಮನೆಯಲ್ಲೂ ಈ ಭಾವನೆ ಮೂಡಬೇಕು. ಹೊರ ರಾಜ್ಯದಿಂದ ಕ್ಷೇತ್ರಕ್ಕೆ ಬರುವವರಿಗೆ ಸ್ವಚ್ಛತೆ ಪ್ರಜ್ಞೆ ಕಡಿಮೆ ಇದೆ. ಈಗಾಗಲೇ ಬದಲಾವಣೆಯಾಗಿದ್ದು, ಸತತ ಪ್ರಯತ್ನದಿಂದ ಜನಜೀವನದಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ ಎಂದರು. ಊರವರು ಮತ್ತು ಧರ್ಮಸ್ಥಳ ಕ್ಷೇತ್ರದ ಮಂದಿ ನೇತ್ರಾವತಿ ಶುದ್ಧೀಕರಣದಲ್ಲಿ ಪಾಲ್ಗೊಂಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ
Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು
Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು
Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್‌ನಲ್ಲಿ ಸಿಲುಕಿದ ಮಹಿಳೆ!
Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.