ಸಾರಿಗೆ ಸಂಸ್ಥೆಗೆ ನಿತ್ಯ 1.50 ಕೋಟಿ ನಷ್ಟ
Team Udayavani, Mar 21, 2020, 12:26 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೋವಿಡ್ 19 ವೈರಸ್ ಮುಂಜಾಗ್ರತೆ ಕ್ರಮವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಲ್ಲಿಯವರೆಗೆ 3623 ಅನುಸೂಚಿಗಳು ಸ್ಥಗಿತಗೊಳಿಸಿದ್ದು, ಇದರಿಂದ ಬರೋಬ್ಬರಿ ಎಂಟು ಕೋಟಿ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ ಆದಾಯದಲ್ಲಿ ನಷ್ಟ ಉಂಟಾಗಿದೆ.
ಕೋವಿಡ್ 19 ಭೀತಿಯಿಂದ ಜನರು ಆತಂಕಗೊಂಡಿದ್ದು, ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬೇರೆ ಊರುಗಳಿಗೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಾಯವ್ಯ ಸಾರಿಗೆ ಸಂಸ್ಥೆ ಕೆಲವೊಂದು ಅನುಸೂಚಿಗಳನ್ನು ಸ್ಥಗಿತಗೊಳಿಸಿದರೆ ಸರಕಾರ ಅಂತಾರಾಜ್ಯ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಆದಾಯ ದಿಢೀರ್ ಕುಸಿತಗೊಂಡಿದ್ದು, ಅನುಸೂಚಿಗಳು ರದ್ಧತಿ 900 ತಲುಪಿದೆ. ಇದರಿಂದ ಸುಮಾರು 1.50 ಕೋಟಿ ರೂ. ಆದಾಯ ಖೋತಾ ಆಗುತ್ತಿದೆ.
ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 4600 ಅನುಸೂಚಿಗಳು ನಿತ್ಯ ಸಂಚರಿಸುತ್ತಿದ್ದು, ಇದರಲ್ಲಿ ಸುಮಾರು 900 ಅನುಸೂಚಿಗಳು ರದ್ದಾಗಿವೆ. ಸಂಸ್ಥೆಗೆ ಆದಾಯದ ತರುವಂತಹ ಅಂತಾರಾಜ್ಯ ಹಾಗೂ ಪ್ರತಿಷ್ಠಿತ ನಗರಗಳಿಗೆ ಸಂಚರಿಸುವ ಬಸ್‌ಗಳಾಗಿರುವದರಿಂದ ಸಂಸ್ಥೆಯ ಆದಾಯಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಪ್ರಯಾಣಿಕರ ಕೊರತೆ ಹಾಗೂ ಅನುಸೂಚಿಗಳ ರದ್ದತಿಯಿಂತಾಗಿದೆ ನಿತ್ಯ 1.50 ಕೋಟಿ ರೂ. ನಿತ್ಯ ಆದಾಯದಲ್ಲಿ ನಷ್ಟವಾಗುತ್ತಿದೆ.
ಈಗಾಗಲೇ ಮುಂಬೈ, ಕಲಬುರಗಿ, ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರ, ಪುಣೆಗೆ ತೆರಳುತ್ತಿದ್ದ ಅನುಸೂಚಿಗಳಲ್ಲಿ ಶೇ.50, ಶೇ. 25ರಷ್ಟು ಬೆಂಗಳೂರು ಬಸ್‌ಗಳನ್ನು ಕಡಿತಗೊಳಿಸಲಾಗಿತ್ತು. ಆದರೆ ಇದೀಗ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವ ವಾಹನಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಈ ಮಾರ್ಗದ ಬಸ್‌ಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಮಾ. 20ರ ವೇಳೆಗೆ ಸಂಸ್ಥೆ ವ್ಯಾಪ್ತಿಯ 9 ವಿಭಾಗಗಳಿಂದ ಸುಮಾರು 900 ಅನುಸೂಚಿಗಳು ಸ್ಥಗಿತಗೊಂಡಂತಾಗಿದೆ.
ಮತ್ತಷ್ಟು ಹೆಚ್ಚಳ ಸಾಧ್ಯತೆ: ಮಾ. 11ರಿಂದ ನಿತ್ಯ ಬಸ್‌ಗಳ ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತಿದ್ದು, ಆರಂಭದಲ್ಲಿ 300 ಬಸ್‌ಗಳನ್ನು ಕಡಿಮೆ ಮಾಡಲಾಗುತ್ತಿತ್ತು. ಮಾ. 19ರಂದು 400 ಅನುಸೂಚಿಗಳ ರದ್ದತಿ ಪ್ರಮಾಣ ಮಾ. 20ಕ್ಕೆ 900ಕ್ಕೆ ತಲುಪಿದಂತಾಗಿದೆ. ಸರಕಾರ ಮಾ. 31ರ ವರೆಗೆ ರಾಜ್ಯಾದ್ಯಾಂತ ಕಟ್ಟೆಚ್ಚರ ವಹಿಸಲು ಸೂಚಿಸಿದ್ದರಿಂದ ಇನ್ನಷ್ಟು ಅನುಸೂಚಿಗಳು ರದ್ದಾಗುವ ಸಾಧ್ಯತೆಗಳಿವೆ.
ಮಹಾರಾಷ್ಟ್ರ ಬಸ್‌ಗೆ ನಿರ್ಬಂಧ : ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವ ಹಾಗೂ ಆಗಮಿಸುವ ವಾಹನಗಳಿಗೆ ನಿರ್ಬಂಧ ಹೇರಿದ ಬೆನ್ನಲ್ಲೆ ಬೆಳಗಾವಿ ಜಿಲ್ಲೆಯ ಮೂಲಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ತೆರಳುವ-ಆಗಮಿಸುವ
ವಾಹನಗಳ ಮೇಲೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹೇರಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಭಾಗದಿಂದ ಬೆಳಗಾವಿ ಮೂಲಕ ಸಂಚರಿಸುವ ಮಿರಜ್-3, ಪಿಂಪ್ರಿ-3, ಶಿರಡಿ-2, ಮುಂಬಯಿ-2, ಪುಣಾ-1, ಇಚಲಕರಂಜಿ-1, ಬೋರವಿಲಿ-1, ಗೋವಾ ರಾಜ್ಯದ ಪಣಜಿ-7, ವಾಸ್ಕೋ2, ಮಡಗಾಂವ-1, ಮಾಪ್ಸಾ-1 ಬಸ್‌ಗಳು ಕಾರ್ಯಾಚರಣೆ ಮಾ. 20ರಿಂದ ಸ್ಥಗಿತಗೊಂಡಿವೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ-503, ಗೋವಾ-20 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ನಾಳೆ ಬಸ್ ಸಂಚಾರ ವಿರಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಾ. 22ರಂದು ಬಸ್‌ಗಳ ಸಂಚಾರ ಸಾಕಷ್ಟು ಕಡಿಮೆಯಾಗಲಿವೆ. ಈಗಾಗಲೇ ಬೆಂಗಳೂರು ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಅಂದಿನ ದಿನ ಅಗತ್ಯವಿದ್ದಲ್ಲಿ ಹಾಗೂ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ಹಾಗೂ ರಾತ್ರಿ 9 ನಂತರ ಮುಂಗಡ ಟಿಕೆಟ್ ಕಾಯ್ದಿರಿಸಿರುವುದರ ಮೇಲೆ ಬಸ್ ಕಾರ್ಯಾಚರಣೆಗೊಳಿಸುವಂತೆ ಸೂಚಿಸಲಾಗಿದೆ. ಸಂಸ್ಥೆ ವ್ಯಾಪ್ತಿಯ ಎಲ್ಲಾ ವಿಭಾಗಗಳ ಘಟಕದವರು ಇದನ್ನು ಪಾಲನೆ ಮಾಡಬೇಕು ಎಂದು ತಿಳಿಸಲಾಗಿದೆ. ಹೀಗಾಗಿ ಮಾ.22ರಂದು ಶೇ.10-15 ಮಾತ್ರ ಬಸ್ ಸಂಚಾರ ಇರಲಿದೆ.
ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಅನುಸೂಚಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಅಗತ್ಯತೆ ಮೇರೆಗೆ ಮಾತ್ರ ಬಸ್‌ಗಳ ಸಂಚಾರವಿದೆ. ಮಾ. 22ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ತೀರಾ ಅಗತ್ಯವಿದ್ದಲ್ಲಿ ಮಾತ್ರ ಬಸ್ ಕಾರ್ಯಾಚರಣೆಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಾಂದ್ರತೆ ಗಮನಿಸಿ ಬಸ್ ಕಾರ್ಯಾಚರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. -ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.