10 ತಾಲೂಕು ಪಂಚಾಯತ್‌ ಸದಸ್ಯರು ಗೈರು-ಸಾಮಾನ್ಯ ಸಭೆ ಮುಂದೂಡಿಕೆ


Team Udayavani, Apr 26, 2017, 1:33 PM IST

hub2.jpg

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕು ಪಂಚಾಯತಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಗೆ 15 ಸದಸ್ಯರಲ್ಲಿ 10 ಜನ ಸದಸ್ಯರು ಗೈರು ಹಾಜರಾಗಿದ್ದರಿಂದ ಕೋರಂ ಕೊರತೆಯಿಂದ ಸಭೆ ಮುಂದೂಡಿದ ಅಪರೂಪದ ಘಟನೆ ನಡೆಯಿತು.
 
ಜಿಲ್ಲೆಯ ಮೂರು ತಾಪಂಗಳಿಗೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಹುಬ್ಬಳ್ಳಿ ಮತ್ತು ನವಲಗುಂದ ತಾಪಂಗಳಿಗೆ ಮಾತ್ರ ಅನುದಾನ ಬಿಡುಗಡೆ ಆಗಿಲ್ಲ. ಈ ಬಾರಿ ಅನುದಾನದಲ್ಲಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಜಿಲ್ಲಾ  ಪಂಚಾಯತಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಆದರೆ ತಾಲೂಕು ಪಂಚಾಯತಿಗೆ ಮಾತ್ರ ಏನೋ ಇಲ್ಲ.

ಇದು ತಾರತಮ್ಯದ ಪರಮಾವಧಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ತಾಲೂಕು ಪಂಚಾಯಿತಿಗೆ 1.35 ಕೋಟಿ ರೂ. ಅನುದಾನ ಬಂದಿತ್ತು. ಈ ಬಾರಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು.

ಆದರೆ ಅನುದಾನ ಹೆಚ್ಚಿನ ಮಾಡುವುದಿರಲಿ, ಅನುದಾನವೇ ಬಿಡುಗಡೆ ಮಾಡಿಲ್ಲ. ಈ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾಪಂನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಧಾರವಾಡ, ಕುಂದಗೋಳ ಮತ್ತು ಕಲಘಟಗಿ ತಾಪಂಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ನವಲಗುಂದ ಮತ್ತು ಹುಬ್ಬಳ್ಳಿ ತಾಪಂಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ಇದರಿಂದ ನವಲಗುಂದ ತಾಪಂ ಸಭೆಯನ್ನು ಕರೆಯಲಾಗಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಬೇಸರಗೊಂಡಿರುವ ಸದಸ್ಯರುಮಂಗಳವಾರ ನಡೆಯಬೇಕಾಗಿದ್ದ ತಾಪಂ ಸಭೆಗೆ ಆಗಮಿಸದೆ, ಹೊಟೇಲ್‌ವೊಂದರಲ್ಲಿ ಸಭೆ ನಡೆಸಿ 10 ಜನರು ಗೈರು ಹಾಜರಾಗುವ ನಿರ್ಧಾರ ಕೈಗೊಂಡಿದ್ದಾಗಿ ಸದಸ್ಯರೊಬ್ಬರು ತಿಳಿಸಿದರು. 

ತಾಪಂ ಸಾಮಾನ್ಯ ಸಭೆಗೆ ತಾಲೂಕಿನ ಎಲ್ಲ ಅಧಿಕಾರಿಗಳು, ಪಿಡಿಒಗಳು ತಾಪಂ ಸಾಮಾನ್ಯ ಸಭೆ ಇರುವುದರಿಂದ ಬೆಳಿಗ್ಗೆ 11:00 ಗಂಟೆಯಿಂದ ಕಾಯುತ್ತಿದ್ದರು. ಸದಸ್ಯರ ಕೊರತೆಯಿಂದ 12:10ಗಂಟೆ ಸುಮಾರಿಗೆ ತಾಪಂ ಸಾಮಾನ್ಯ ಸಭೆಗೆ ಅಧ್ಯಕ್ಷೆ ಚನ್ನಮ್ಮ ಗೋರ್ಲ, ಉಪಾಧ್ಯಕ್ಷೆ ಸರೋಜಾ ಅಳಗವಾಡಿ, 

ಸದಸ್ಯರಾದ ಬಸವರಾಜ ಸಾಲಿ, ಬಸಪ್ಪ ಬೀರಣ್ಣವರ, ದೇವಕ್ಕ ಸವ್ವಾಸೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೋರಂ ಅಭಾವದಿಂದ ಸಭೆಯನ್ನು 10 ನಿಮಿಷ ಮುಂದೂಡಿದರು. ಅನಂತರವೂ ಸದಸ್ಯರು ಆಗಮಿಸದ್ದರಿಂದ ಸಭೆಯನ್ನು ಮುಂದೂಡಲಾಯಿತು.  

ಟಾಪ್ ನ್ಯೂಸ್

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.