ವೃದ್ಧನಿಗೆ 12 ಲಕ್ಷ ರೂ. ವಂಚನೆ
Team Udayavani, Jun 2, 2021, 5:14 PM IST
ಹುಬ್ಬಳ್ಳಿ: ಧಾರವಾಡದ ವೃದ್ಧರೊಬ್ಬರಿಗೆ ಅಪರಿಚಿತನು ಸಿಮ್ ಕಾರ್ಡ್ ಕೆವೈಸಿ ಅಪ್ಡೇಟ್ ಮಾಡುವುದಾಗಿ ನಂಬಿಸಿ ಅವರ ಖಾತೆಯಿಂದ ಆನ್ಲೈನ್ ಮೂಲಕ 4,12,174ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಧಾರವಾಡದ ನಸಬಿ ಎಂಬುವರಿಗೆ ಅಪರಿಚಿತನು ಬಿಎಸ್ಸೆನ್ನೆಲ್ ಕೆವೈಸಿ ಪ್ರಧಾನ ಕಚೇರಿಯಿಂದ ಮಾತನಾಡುವುದಾಗಿ ನಂಬಿಸಿ, ಟೀಮ್ ವ್ಹೀವರ್ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ಲೋಡ್ ಮಾಡಿಸಿದ್ದಾನೆ. ನಂತರ ನೆಟ್ಬ್ಯಾಂಕಿಂಗ್ ಯುಸರ್ ನೇಮ್ ಪಡೆದುಕೊಂಡು ಕ್ವಿಕ್ ಸಪೋರ್ಟ್ ಆ್ಯಪ್ ಸಹಾಯದಿಂದ ಅವರ ಯುಸರ್ ನೇಮ್ ಪಾಸ್ವರ್ಡ್ ಕ್ರಿಯೆಟ್ ಮಾಡಿಕೊಂಡು ಎಸ್ ಬಿಐ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ.
ರಿಫಂಡ್ ಹೆಸರಲ್ಲಿ ವಂಚನೆ: ನಗರದ ಓರ್ವರಿಗೆ ಅಪರಿಚಿತನು ಆನ್ಲೈನ್ ಮೂಲಕ ಪಾವತಿಸಿದ ಹಣ ರಿಫಂಡ್ ಮಾಡುವುದಾಗಿ ನಂಬಿಸಿ, ಅವರ ಖಾತೆಯ ವಿವರಗಳನ್ನು ಪಡೆದು ಆನ್ಲೈನ್ ಮುಖಾಂತರ 91,998 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ರಾಜಶೇಖರ ಎಂಬುವರಿಗೆ ಕರೆಮಾಡಿದ ಅಪರಿಚಿತನು ರಿಫಂಡ್ ಮಾಡುವುದಾಗಿ ಹೇಳಿ ಮೊಬೈಲ್ಗೆ ಕೆಲವು ಸಂದೇಶ ಕಳುಹಿಸಿ, ಅವುಗಳನ್ನು ಮರಳಿ ಬೇರೆ ಸಂಖ್ಯೆಗೆ ಪಾರ್ವರ್ಡ್ ಮಾಡಿಸಿಕೊಂಡು ಖಾತೆಯ ಮಾಹಿತಿ ಪಡೆದು ಗಮನಕ್ಕೆ ಬರದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿ ಕೊಂಡಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.