ಏಳು ಜನ ಶಿಕ್ಷಕರಿಗೆ ಸೋಂಕು ಹರಡಿದ ಶಿಕ್ಷಕಿ!: ಧಾರವಾಡದಲ್ಲಿ 121 ಸೋಂಕಿತರು
Team Udayavani, Jun 14, 2020, 9:12 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ: ಜಿಲ್ಲೆಯಲ್ಲಿ ರವಿವಾರ ಹೊಸದಾಗಿ 10 ಜನರಲ್ಲಿ ಕೋವಿಡ್ 19 ಸೋಂಕು ಧೃಡಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 121 ಕ್ಕೆಏರಿಕೆಯಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು ಧೃಡಪಟ್ಟಿತ್ತು ಮತ್ತು ಬಳಿಕ ಅವರ ಪತಿಯಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಇದೀಗ ಈ ಶಿಕ್ಷಕಿಯು ಸಂಪರ್ಕಕ್ಕೆ ಬಂದಿದ್ದ ಇನ್ನುಳಿದ ಏಳು ಜನ ಶಿಕ್ಷಕರಲ್ಲೂ ರವಿವಾರದಂದು ಸೋಂಕು ರವಿವಾರ ಧೃಡಪಟ್ಟಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ತೀವ್ರ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ನಿವಾಸಿಯಾದ 31 ವರ್ಷ ಶಿಕ್ಷಕಿಯನ್ನು (ಪಿ-5970) ತಪಾಸಣೆಗೆ ಒಳಪಡಿಸಿದಾಗ ಜೂ.11 ರಂದು ಸೋಂಕು ಇರುವುದು ಧೃಡಪಟ್ಟಿತ್ತು. ಆ ಬಳಿಕ ಪಿ-5970 ಸಂಪರ್ಕದಿಂದ ಅದೇ ಕಾಲನಿಯ ನಿವಾಸಿಯಾದ 34 ವರ್ಷದ ಅವರ ಪತಿಗೂ (ಪಿ-6260) ಸೋಂಕು ತಗುಲಿದ್ದು, ಅದು ಜೂ.12ಕ್ಕೆ ಧೃಡಪಟ್ಟಿತ್ತು.
ಇದೀಗ ಪಿ-5970 ಸಂಪರ್ಕದಿಂದಲೇ ಬರೋಬ್ಬರಿ ಏಳು ಜನರಿಗೆ ಸೋಂಕು ಧೃಡಪಟ್ಟಿದೆ. ಸೋಂಕಿತ ಪಿ-5970 ಮಹಿಳೆಯು ಖಾಸಗಿಯ ಅನುದಾನ ರಹಿತ ಹೈಸ್ಕೂಲ್‌ನ ಶಿಕ್ಷಕಿಯಾಗಿದ್ದರು. ಈ ನಡುವೆ ಶಿಕ್ಷಕಿಯು ಜೂ.8ರಂದು ಹೈಸ್ಕೂಲ್‌ಗೆ ಹೋಗಿ ಬಂದಿದ್ದಾರೆ. ಅವರ ಸಂಪರ್ಕಕ್ಕೆ ಬಂದ ಹೈಸ್ಕೂಲ್‌ನ 20ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಪೈಕಿ ರವಿವಾರ ಏಳು ಜನ ಶಿಕ್ಷಕರಿಗೆ ಸೋಂಕು ಇರುವುದು ಧೃಡಪಟ್ಟಿದೆ.
54 ವರ್ಷದ ಪುರುಷ (ಪಿ-6833), 30 ವರ್ಷದ ಮಹಿಳೆ (ಪಿ-6834), 46 ವರ್ಷದ ಮಹಿಳೆ (ಪಿ-6835), 49 ವರ್ಷದ ಮಹಿಳೆ (ಪಿ-6836), 26 ವರ್ಷದ ಮಹಿಳೆ (ಪಿ-6837), 39 ವರ್ಷದ ಮಹಿಳೆ (ಪಿ-6841), 35 ವರ್ಷದ ಮಹಿಳೆ (ಪಿ-6842) ಇವರೆಲ್ಲರಲ್ಲಿ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ.
ಇನ್ನು, ನವಲಗುಂದ ತಾಲೂಕಿನ ಮೊರಬ ಗ್ರಾಮದ ಸೋಂಕಿತ ಪಿ-6222 (59 ವರ್ಷದ ಪುರುಷ) ಸಂಪರ್ಕದಿಂದ 8 ವರ್ಷದ ಬಾಲಕನಿಗೂ (ಪಿ-6838) ಸೋಂಕು ಧೃಡಪಟ್ಟಿದೆ. ಇನ್ನುಳಿದಂತೆ ತೀವ್ರ ಉಸಿರಾಟ ಸಮಸ್ಯೆಯಿಂದ 20 ವರ್ಷದ ಪಿ-6839 ಹಾಗೂ ಪಿ-6840 ಯುವಕರಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.