17 ದಿನದ ಗಂಡು ಶಿಶು ಹೊಟ್ಟೆಯಲ್ಲಿತ್ತು ಭ್ರೂಣ!
Team Udayavani, Apr 6, 2017, 3:45 AM IST
ಧಾರವಾಡ: ಅದು 17 ದಿನದ ಗಂಡು ಶಿಶು. ಹೊಟ್ಟೆ ಉಬ್ಬುವಿಕೆ ಹಾಗೂ ಮೂತ್ರ ನಿಂತು ಹೋದ ಶಿಶುವನ್ನು ಪರೀಕ್ಷಿಸಿದ ವೈದ್ಯರಿಗೆ ಕಂಡಿದ್ದು ಹೊಟ್ಟೆಯಲ್ಲಿ ಭ್ರೂಣ!ಹೊಟ್ಟೆ ಉಬ್ಬುವಿಕೆ ಹಾಗೂ ಮೂತ್ರ ನಿಂತು ಹೋದ ಕಾರಣ 17 ದಿನಗಳ ಮಗುವನ್ನು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು.
ಕೆಲ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ ಮಾಂಸದ ಗಂಟು ಇರುವುದು ಪತ್ತೆಯಾಗಿದೆ. ಹೊಟ್ಟೆಯ ಮುಖ್ಯ ಅಂಗ ಮತ್ತು ಮುಖ್ಯ ರಕ್ತನಾಳಗಳಿಗೆ ಅಂಟಿಕೊಂಡ ಆ ಗಂಟನ್ನು 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದು ನೋಡಿದಾಗ ವೈದ್ಯರಿಗೆ ಆಶ್ಚರ್ಯ. ಮಗುವಿನ ಹೊಟ್ಟೆಯಲ್ಲಿ ಭ್ರೂಣವಿತ್ತು. ಶಸ್ತ್ರಚಿಕಿತ್ಸೆ ನಂತರ ಮಗು ಚೇತರಿಸಿಕೊಂಡಿದೆ.
ವಿಶ್ವದಲ್ಲಿ ಇಲ್ಲಿಯವರೆಗೆ ಸುಮಾರು 80 ಶಿಶುಗಳಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಫಿಟೋಸ್ ಇನ್‌ಫಿಟೋ ಎಂದು ಕರೆಯುತ್ತಾರೆ. ಅಂದರೆ ಒಂದು ಮಗುವಿನ ಹೊಟ್ಟೆಯೊಳಗೆ ಇನ್ನೊಂದು ಭ್ರೂಣವಿರುವುದು. ಗರ್ಭಾವಸ್ಥೆಯಲ್ಲಿ ಅವಳಿ ಭ್ರೂಣಗಳು ಬೆಳೆಯುವಾಗ ಸರಿಯಾಗಿ ಬೇರ್ಪಡೆಯಾಗದಿದ್ದರೆ ಇಂತಹ ಪ್ರಕರಣಗಳು ಸಂಭವಿಸುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ|ವೆಂಕಟೇಶ್ ಅಣ್ಣಿಗೇರಿ, ಡಾ|ಅನಿಲ್ ಹಲಗೇರಿ, ಡಾ|ಕೃಷ್ಣಾ ಪ್ರಸಾದ್ ಶೆಟ್ಟಿ, ಡಾ|ಮಧುರಾ ರಾವ್, ಡಾ|ಸಹನಾ ನಾರಾಯಣ್ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಅರವಳಿಕೆ ತಜ‚jರಾದ ಡಾ|ರವಿ ಭಟ್, ಡಾ|ರಾಘವೇಂದ್ರ ರಾವ್ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!
Raichur: ವಕ್ಫ್ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ
Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.